ಹರೀಶ್ ಶಿಂಧೆ ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸೋಮವಾರ ರಾತ್ರಿ ಮನೆ ಬಿಟ್ಟಿರೋನು ಮನೆಗೆ ಬಾರದ ಹಿನ್ನಲೆಯಲ್ಲಿ ಬೆಳಿಗ್ಗೆ ಪೋಲಿಸರ ಮನೆಯವರಿಗೆ ಮಾಹಿತಿ ಕೊಟ್ಟ ಬಳಿಕ ಕೊಲೆಯ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಲೇಔಟ್ ಸಲುವಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. 

ಧಾರವಾಡ(ಜು.23): ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನ ಬರ್ಬರ ಕೊಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಲೇಔಟ್‌ವೊಂದರಲ್ಲಿ ಇಂದು(ಮಂಗಳವಾರ) ನಡೆದಿದೆ. ಹರೀಶ್ ಶಿಂಧೆ(30) ಎಂಬಾತನೇ ಕೊಲೆಯಾದ ಯುವಕ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಲೆಯಾದ ಹರೀಶ್ ಧಾರವಾಡದ ಮಣಿಕಿಲ್ಲಾದ ಡೋರಗಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ. ಹರೀಶ್ ಶಿಂಧೆ ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ(ಸೋಮವಾರ) ರಾತ್ರಿ ಮನೆ ಬಿಟ್ಟಿರೋನು ಮನೆಗೆ ಬಾರದ ಹಿನ್ನಲೆಯಲ್ಲಿ ಬೆಳಿಗ್ಗೆ ಪೋಲಿಸರ ಮನೆಯವರಿಗೆ ಮಾಹಿತಿ ಕೊಟ್ಟ ಬಳಿಕ ಕೊಲೆಯ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. 

ಹುಬ್ಬಳ್ಳಿ: ಕುಟುಂಬದಲ್ಲಿನ ಸಾವಿಗೆ ಅರ್ಚಕ ಕಾರಣ, ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ..!

ಘಟನಾ ಸ್ಥಳಕ್ಕೆ ಎಸ್ಪಿ ಗೋಪಾಲ್ ಬ್ಯಾಕೋಡ, ಎಎಸ್ ಪಿ ನಾರಾಯಣ ಭರಮನಿ, ಸಿಪಿಐ ಕಮತಗಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೇಔಟ್ ಸಲುವಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.