Asianet Suvarna News Asianet Suvarna News

ತೀವ್ರ ಹೃದಯಾಘಾತಕ್ಕೆ 29 ವರ್ಷದ ಯುವಕ ಸಾವು!

ಸ್ಟೋನ್ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕನೋರ್ವ ತೀವ್ರ ಹೃದಯಾಘಾತದಿಂದ ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

29 year old man died by heart attack at hubballi today rav
Author
First Published Dec 5, 2023, 10:18 PM IST

ಹುಬ್ಬಳ್ಳಿ (ಡಿ.5): ಸ್ಟೋನ್ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕನೋರ್ವ ತೀವ್ರ ಹೃದಯಾಘಾತದಿಂದ ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

ಮಹೇಶ್(29) ಹೃದಯಾಘಾತಕ್ಕೆ ಬಲಿಯಾದ ಯುವಕ. ಮೃತ ಮಹೇಶ್ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ನಿವಾಸಿಯಾಗಿದ್ದಾನೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಿರುವ ಸ್ಟೋನ್ ಕ್ರಷರ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ಮೂರು ದಿನಗಳಿಂದಲೂ ಯುವಕನಿಗೆ ಎದೆನೋವು ಕಾಣಿಸಿಕೊಂಡಿದೆ ಆದರೆ ವೈದ್ಯರಿಗೆ ತೋರಿಸದೇ ಮೆಡಿಸಿನ್ ತೆಗೆದುಕೊಂಡು ಮತ್ತೆ ಆಫೀಸ್‌ಗೆ ಬಂದಿದ್ದ ಯುವಕ. ಇಂದು ಸ್ಟೋನ್ ಕ್ರಷರ್ ಆಫೀಸ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಯುವಕ. ಘಟನೆ ಮಾಹಿತಿ ತಿಳಿದು ಕುಟುಂಬ ಅಕ್ರಂದನ ಮುಗಿಲುಮುಟ್ಟಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೃದಯಾಘಾತದಿಂದ ಮತ್ತೆ ಮೂಡಿತು ಒಲವು; ಡಿವೋರ್ಸ್‌ ಆಗಿ ಐದು ವರ್ಷದ ನಂತ್ರ ಒಂದಾದ ಜೋಡಿ 

ಶತಾಯುಷಿ ಅಂದಮ್ಮ ಹುದ್ದಾರ ನಿಧನ

ಗಜೇಂದ್ರಗಡ: ಸಮೀಪದ ಇಟಗಿ ಗ್ರಾಮದ ಶತಾಯುಷಿ ಅಂದಮ್ಮ ಯಲ್ಲಪ್ಪ ಹುದ್ದಾರ (100) ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರಿಗೆ 3 ಪುತ್ರರು, 6 ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಅಂತ್ಯಕ್ರಿಯೆಯನ್ನು ಬುಧವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

Follow Us:
Download App:
  • android
  • ios