Asianet Suvarna News Asianet Suvarna News

ಕೋಲಾರ: ಜಗನ್ ಮೋಹನ್ ರೆಡ್ಡಿ ಕೊಲೆ ಕೇಸ್‌, 14 ಆರೋಪಿಗಳ ಬಂಧನ

*  ಮುಳಬಾಗಿಲು ನಗರಸಭೆ ಸದಸ್ಯನ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು
*  ಜಗನ್ ಮೋಹನ್ ರೆಡ್ಡಿ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ
*  ಜೂನ್ 7 ರಂದು ಮುಳಬಾಗಿಲು ಪಟ್ಟಣದಲ್ಲಿ ಜಗನ್ ಹತ್ಯೆ
 

14 Arrested For Jaganmohan Reddy Murder Case in Kolar grg
Author
Bengaluru, First Published Jun 30, 2022, 5:21 AM IST | Last Updated Jun 30, 2022, 5:21 AM IST

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಜೂ.30):  ಜಿಲ್ಲೆಯ ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಪ್ಪತ್ತು ಮೂರು ದಿನಗಳ ನಂತರ ಐವರು ಪ್ರಮುಖ ಆರೋಪಿಗಳು ಸೇರಿ 14 ಮಂದಿಯನ್ನ ಬಂಧಿಸಿದ್ದು, ಓರ್ವ ಆರೋಪಿಗಾಗಿ ಪೊಲೀಸ್ರು ತಲಾಷೆ ನಡೆಸುತ್ತಿದ್ದಾರೆ. ಜಗನ್ ಮೋಹನ್ ರೆಡ್ಡಿ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎನ್ನಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಆತನನ ಒಂದು ಕಾಲ ಸ್ನೇಹಿತರೇ ಆಗಿದ್ದ ಜಗನ್, ಧನುಷ್ ಜಗನ್ ಮೋಹನ್ ರೆಡ್ಡಿಯನ್ನ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.

ಜೂನ್ 7 ರಂದು ಕೋಲಾರದ ಮುಳಬಾಗಿಲು ನಗರದಲ್ಲಿ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿಯನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು.ನಗರದ ಮುತ್ಯಾಲಪೇಟೆಯಲ್ಲಿ ಬೆಳ್ಳಗ್ಗಿನ ಜಾವ ಐದು ಗಂಟೆ ಸುಮಾರಿನಲ್ಲಿ ಗಂಗಮ್ಮ ದೇಗುಲ ದ್ವಾರದಲ್ಲಿಯೇ ಐವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಹತ್ಯೆಯಾಗಿ ಇಪ್ಪತ್ತು ದಿನಗಳೇ ಕಳೆದಿತ್ತು, ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸ್ರು ಪ್ರಯತ್ನ ಮಾಡುತ್ತಲೇ ಇದ್ದರು. ಆದ್ರೆ, ಆರೋಪಿಗಳ ಸುಳಿವು ಸಿಕ್ಕಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ಹತ್ಯೆ ಪ್ರಕರಣದ ಐವರು ಪ್ರಮುಖ ಆರೋಪಿಗಳು ಸೇರಿದಂತೆ 14 ಮಂದಿಯನ್ನ ಬಂಧಿಸಿರುವ ಪೊಲೀಸ್ರು, ಓರ್ವ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ. ಜಗನ್ ಮೋಹನ್ರೆಡ್ಡಿ ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣ ಅಂತಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

Hubli Crime News: ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು

ಜಗನ್, ಧನುಷ್, ಮಹೇಶ್, ಅಭಿನಂದನ್, ಬಾಲಾಜಿ ಸಿಂಗ್ ಇವರು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು ಇವರನ್ನ ಪೊಲೀಸ್ರು ಬಂಧಿಸಿದ್ದಾರೆ. ಜೊತೆಗೆ ಕೊಲೆಯಾದ ನಂತರ ಆರೋಪಿಗಳಿಗೆ ಸಹಕರಿಸಿದ ಮಧುಸೂದನ್,ಆಶ್ವಿನಿ, ನಾಗೇಶ್, ಮನೋಜ್ ಕುಮಾರ್, ರೋಹಿತ್, ಪ್ರಕಾಶ್, ಸಂಗೀತಾ, ಜಯಲಕ್ಷ್ಮೀ, ನವೀನ್ ಕುಮಾರ್ ಅವರನ್ನೂ ಕೂಡಾ ಪೊಲೀಸ್ರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. 

ಕೊಲೆಯಾದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಜಗನ್, ಧನುಷ್ ಮೊದಲು ಸ್ನೇಹಿತರಾಗಿರುತ್ತಾರೆ.ತದ ನಂತರ ಕೊಲೆ ಪ್ರಕರಣವೊಂದರಲ್ಲಿ ಜಗನ್ ಮೋಹನ್ ರೆಡ್ಡಿ ಅವ್ರು, ಜಗನ್ ಮತ್ತು ಧನುಷ್ ಗೆ ಸಹಾಯ ಮಾಡಿರುವುದಿಲ್ಲ .ಈ ವೇಳೆ ಪೊಲೀಸರು ಅಣ್ಣ-ತಮ್ಮಂದಿರಾದ ಜಗನ್ ಮತ್ತು ಧನುಷ್ ಮೇಲೆ ರೌಡಿ ಶೀಟರ್ ಕೂಡಾ ತೆರೆದಿರುತ್ತಾರೆ. ಇದ್ರಿಂದ ನಮ್ಮ ಜೀವನವೇ ಹಾಳಾಯಿತು ಅಂತಾ ಮನನೊಂದು ಕಳೆದ ನಾಲ್ಕೈದು ವರ್ಷಗಳಿಂದ ಜಗನ್ ಮೋಹನ್ರೆಡ್ಡಿಗೆ ಹತ್ಯೆ ಮಾಡಲು ಸ್ಕೇಚ್ ಹಾಕಿ ಹೊಂಚು ಹಾಕಿದ್ದರು.

ಅಣ್ಣ-ತಮ್ಮಂದಿರಾದ ಜಗನ್ ಮತ್ತು ಧನುಷ್ ಸ್ಕೆಚ್ ಪ್ರಕಾರ ಜಗನ್ ಮೋಹನ್ರೆಡ್ಡಿ ಹುಟ್ಟುಹಬ್ಬದ ದಿನವಾದ ಜೂನ್ 6 ರಂದು ಕೊಲೆ ಮಾಡಲು ತಮ್ಮ ತಂಡದೊಂದಿದೆ ಮುಂದಾಗಿದ್ದರು.ಆದ್ರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಜೂನ್ 7 ರಂದು ರೆಡ್ಡಿ ಮನೆಯ ಪಕ್ಕದಲ್ಲೇ ಇರುವ ಗಂಗಮ್ಮ ದೇಗುಲದ ಕೊಲೆ ಮಾಡಲು ನಿರ್ಧರಿಸಿ ದೇಗುಲದ ಮುಂಭಾಗ, ಗರ್ಭಗುಡಿ, ಗರುಡ ಕಂಬದ ಬಳಿ ಆರೋಪಿಗಳು ಆವತ್ತು ಕುಳಿತಿದ್ದರು.ಜಗನ್ ಮೋಹನ್ ರೆಡ್ಡಿ ಬೆಳಿಗ್ಗೆ 5.10 ರ ಸುಮಾರಿಗೆ ದೇಗುಲಕ್ಕೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಜಗನ್, ಧನುಷ್, ಮಹೇಶ್, ಅಭಿನಂದನ್ ಅವ್ರು ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿ ರೋಹಿತ್ ಕಾರಿನಲ್ಲಿ ಪರಾರಿಯಾಗಿದ್ದರು. ಕೊಲೆ ಆರೋಪಿಗಳಿಗೆ ಬಂಗಾರಪೇಟೆಯ ಬಾಲಾಜಿ ಸಿಂಗ್ ನೆರವು ಕೊಟ್ಟಿದ್ದರು. 

ಪ್ರೇಮಕ್ಕೆ ವಿರೋಧ: ಗೆಳತಿ, ಆಕೆಯ ಸಹೋದರನನ್ನು ಸುತ್ತಿಗೆಯಿಂದ ಹೊಡೆದು ಕೊಂದ ವ್ಯಕ್ತಿ!

ಕೊಲೆ ಆರೋಪಿಗಳು ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ರೈಲಿನಲ್ಲಿ ಅಡ್ಡಾಡುತ್ತಿದ್ದರು. ಆಪಾದಿತರಿಗೆ ನೆರವಾದವರ ವಿಚಾರಣೆಯಿಂದ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಈ ಮಧ್ಯೆ, ಕೊಲೆಯಾದವ್ರಿಗೆ ನೆರವು ನೀಡಿದ ಬಾಲಾಜಿ ಸಿಂಗ್ ಅವ್ರನ್ನ ಪೊಲೀಸರು ಬಂಧಿಸಿ ಕರೆ ತರುತ್ತಿದ್ದಾಗ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸ್ರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

ಒಟ್ನಲ್ಲಿ, ಕೋಲಾರ ಜಿಲ್ಲೆಯಲ್ಲಿ ಬಹಳಷ್ಟು ಸದ್ದು ಮಾಡಿ ಆತಂಕ ಹುಟ್ಟಿಸಿದ್ದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣವನ್ನ ಪೊಲೀಸ್ರು ಭೇದಿಸಿ, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ವೈಯಕ್ತಿಕ ದ್ವೇಷಕ್ಕೆ ಆಯ್ತಾ ಇಲ್ವಾ ಬೇರೆ ಕಾರಣಕ್ಕೆ ಕೊಲೆಯಾಯ್ತಾ ಅಂತಾ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.
 

Latest Videos
Follow Us:
Download App:
  • android
  • ios