ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಹರಾಜು ಪ್ರಕ್ರಿಯೆ ಶುರುವಾಗಿದೆ. ಮೊದಲ ದಿನ 8 ಆಟಗಾರ್ತಿಯರ ಪೈಕಿ 7 ಆಟಗಾರ್ತಿಯರು ಹರಾಜಾಗಿದ್ದಾರೆ. ಅವರಲ್ಲಿ ದೀಪ್ತಿ ಶರ್ಮಾ, ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ.

ವುಮೆನ್ ಪ್ರೀಮಿಯರ್ ಲೀಗ್ (WPL ) 2026 ಹರಾಜಿನಲ್ಲಿ ದೀಪ್ತಿ ಶರ್ಮಾ (Deepti Sharma) ದಾಖಲೆ ಬರೆದಿದ್ದಾರೆ. ಗುರುವಾರ ಡಬ್ಲ್ಯುಪಿಎಲ್ 2026ರ ಹರಾಜು ನಡೆದಿದೆ. 2025 ರ ಒನ್ ಡೇ ವಿಶ್ವಕಪ್ ಸರಣಿಯಲ್ಲಿ ಅಧ್ಬುತ ಪ್ರದರ್ಶನ ತೋರಿಸ ದೀಪ್ತಿ ಶರ್ಮಾ, ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. UP ವಾರಿಯರ್ಸ್ , ದೀಪ್ತಿ ಶರ್ಮಾ ಅವರನ್ನು 3.2 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ದೀಪ್ತಿ ಶರ್ಮಾ WPL ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ.

3.2 ಕೋಟಿಗೆ ಮಾರಾಟವಾದ ದೀಪ್ತಿ ಶರ್ಮಾ : 

ಆಲ್ರೌಂಡರ್ ದೀಪ್ತಿ ಶರ್ಮಾ ಬಿಡ್, 50 ಲಕ್ಷದಿಂದ ಪ್ರಾರಂಭವಾಯಿತು. ದೆಹಲಿ ಕ್ಯಾಪಿಟಲ್ಸ್ ಕೂಡ ಆರಂಭಿಕ ಆಫರ್ ನೀಡಿತ್ತು. ಆದ್ರೆ ಯಾವುದೇ ತಂಡ ದೀಪ್ತಿ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ವೇಳೆ ಯುಪಿ ವಾರಿಯರ್ಸ್ ಆರ್ ಟಿಎಂ ಬಳಸಲು ಮುಂದಾಯ್ತು. ಆದ್ರೆ ಮಧ್ಯ ಪ್ರವೇಶಿಸಿದ ದೆಹಲಿ, ಅವರಿಗೆ 3.2 ಕೋಟಿ ಬಿಡ್ ಮಾಡ್ತು. ಆ ತಕ್ಷಣ ದೀಪ್ತಿ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯುಪಿ ವಾರಿಯರ್ಸ್ RTM ಕಾರ್ಡ್ ಬಳಸಿತು. ಮೊದಲ ಬಾರಿಗೆ, ಡಬ್ಲ್ಯೂಪಿಎಲ್ ತಂಡಗಳಿಗೆ ಆರ್ಟಿಎಂ ಕಾರ್ಡ್ ಬಳಸಲು ಅವಕಾಶ ನೀಡಲಾಗಿತ್ತು. ಇದು ಯಾವುದೇ ತಂಡವು 2025 ರಲ್ಲಿ ತಮ್ಮ ತಂಡದ ಭಾಗವಾಗಿದ್ದ ಮತ್ತು ಬಿಡುಗಡೆಯಾದ ಮಾಜಿ ಆಟಗಾರ್ತಿಯನ್ನು ಆರ್ಟಿಎಂ ಮೂಲಕ ಮರು ಖರೀದಿಸಲು ಅನುವು ಮಾಡಿಕೊಡುತ್ತದೆ. ಮಹಿಳಾ ಪ್ರೀಮಿಯರ್ ಲೀಗ್ 2026 ರ ಹರಾಜಿನ ಮೊದಲ ಪಟ್ಟಿಯಲ್ಲಿ ಒಟ್ಟು ಎಂಟು ಆಟಗಾರ್ತಿಯರಿದ್ದರು. ಏಳು ಆಟಗಾರ್ತಿಯರು ಮಾರಾಟವಾದ್ರೆ ಅಲಿಸಾ ಹೀಲಿ ಮಾರಾಟವಾಗದೆ ಉಳಿದಿದ್ದಾರೆ.

ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋಲಿಗೆ ಇದೇ ನಿಜವಾದ ಕಾರಣ!

ಆಟಗಾರ್ತಿಯರ ಹರಾಜು : 

ಸೋಫಿ ಡಿವೈನ್ - ₹2 ಕೋಟಿ (ಗುಜರಾತ್ ಜೈಂಟ್ಸ್) ದೀಪ್ತಿ ಶರ್ಮಾ - ₹3.2 ಕೋಟಿ (ಯುಪಿ ವಾರಿಯರ್ಸ್) ಅಮೆಲಿಯಾ ಕೆರ್ - ₹3 ಕೋಟಿ (ಮುಂಬೈ ಇಂಡಿಯನ್ಸ್) ರೇಣುಕಾ ಸಿಂಗ್ - ₹60 ಲಕ್ಷ (ಗುಜರಾತ್ ಜೈಂಟ್ಸ್) ಸೋಫಿ ಎಕ್ಲೆಸ್ಟೋನ್ - ₹8.5 ಮಿಲಿಯನ್ (ಯುಪಿ ವಾರಿಯರ್ಸ್) ಮೆಗ್ ಲ್ಯಾನಿಂಗ್ - ₹1.9 ಕೋಟಿ (ಯುಪಿ ವಾರಿಯರ್ಸ್) ಲೌರಾ ವೋಲ್ವಾರ್ಡ್ - ₹1.1 ಕೋಟಿ (ದೆಹಲಿ ಕ್ಯಾಪಿಟಲ್ಸ್) ಯುಪಿ ವಾರಿಯರ್ಸ್ ಮಾರ್ಕ್ಯೂ ಸುತ್ತಿನಲ್ಲಿ ಮೂರು ಆಟಗಾರರನ್ನು ಖರೀದಿಸಿದೆ. ಸ್ಮೃತಿ ಮಂಧಾನ ದಾಖಲೆ ಹಿಂದಿಕ್ಕದ ದೀಪ್ತಿ : ದೀಪ್ತಿ ಶರ್ಮಾ 3.2 ಕೋಟಿಗೆ ಮಾರಾಟವಾದ್ರೂ ಸ್ಮೃತಿ ಮಂಧಾನ ದಾಖಲೆ ಮುರಿಯಲು ಸಾಧ್ಯವಾಗ್ಲಿಲ್ಲ. ಸ್ಮೃತಿ ಮಂಧಾನ ಅತ್ಯಂತ ದುಬಾರಿ ವುಮೆನ್ ಪ್ರೀಮಿಯರ್ ಲೀಗ್ ಆಟಗಾರ್ತಿಯಾಗಿದ್ದಾರೆ. 2023 ರ ಹರಾಜಿನಲ್ಲಿ ಸ್ಮೃತಿ ಮಂಧಾನ ಅವರನ್ನು 3.40 ಕೋಟಿಗೆ ಖರೀದಿಸಲಾಗಿತ್ತು.

ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ

ದೀಪ್ತಿ ಶರ್ಮಾ ದಾಖಲೆ ಏನು? :

2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ದೀಪ್ತಿ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. 22 ವಿಕೆಟ್ಗಳನ್ನು ಪಡೆದು 215 ರನ್ಗಳನ್ನು ಗಳಿಸಿದ್ದರು. 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ದೀಪ್ತಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಮಹಿಳಾ ವಿಶ್ವಕಪ್ ನ ಒಂದೇ ಆವೃತ್ತಿಯಲ್ಲಿ (ಪುರುಷ ಅಥವಾ ಮಹಿಳಾ) 200 ರನ್ಗಳು ಮತ್ತು 20 ವಿಕೆಟ್ಗಳನ್ನು ಪಡೆದ ಮೊದಲ ಆಟಗಾರ್ತಿ ದೀಪ್ತಿ. ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೀಪ್ತಿ 58 ರನ್ ಗಳಿಸಿದ್ದರು. ಒಟ್ಟೂ 39 ರನ್ ನೀಡಿದ್ದ ಅವರು ಐದು ವಿಕೆಟ್ ಪಡೆದಿದ್ದರು.