ಬ್ಯಾಟಿಂಗ್, ಕೀಪಿಂಗ್, ನಾಯಕ; ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ದ್ರಾವಿಡ್!

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅದೆಂತಾ ಬ್ಯಾಟ್ಸ್‌ಮನ್ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಟೀಂ ಇಂಡಿಯಾ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲಿ ದ್ರಾವಿಡ್‌ರಂತ ಕ್ಲಾಸಿಕ್ ಬ್ಯಾಟ್ಸ್‌ಮನ್ ಮತ್ತೊಬ್ಬರಿಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ದ್ರಾವಿಡ್, ಏಕದಿನದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡ ಹಿಂದೆ ಒಂದು ರೋಚಕ ಕತೆ ಇದೆ.

Wicket keeping skill rahul dravid made permanent place in team india ODI side

ಬೆಂಗಳೂರು(ಜೂ.04); ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, ತಂಡದಲ್ಲಿ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ. ಬ್ಯಾಟ್ಸ್‌ಮನ್ ಆಗಿ 1996ರಲ್ಲಿ ಪದಾರ್ಪಣೆ ಮಾಡಿದ ದ್ರಾವಿಡ್, ಸ್ಲಿಪ್‌ನಲ್ಲಿ ಅದ್ಬುತ ಫೀಲ್ಡರ್ ಆಗಿ ಬಳಿಕ ವಿಕೆಟ್ ಕೀಪರ್ ಆಗಿ, ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವೆಲ್ಲಾ ಜವಾಬ್ದಾರಿಗಳು ದ್ರಾವಿಡ್ ಹೆಗಲಿಗೆ ಖಾಯಂ ಆಗಿತ್ತು. 

1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!.

ದ್ರಾವಿಡ್ ಶಾಲಾ ದಿನಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಬಳಿಕ ಬ್ಯಾಟಿಂಗ್ ಕಡೆ ಹೆಚ್ಚು ಗಮನಹರಿಸಿದ ದ್ರಾವಿಡ್, ವಿಕೆಟ್ ಕೀಪಿಂಗ್‌ನಿಂದ ದೂ ಉಳಿದಿದ್ದರು. ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕ ತಂಡದಲ್ಲಿ ಅದ್ಭುತ ಬ್ಯಾಟ್ಸ್‌ಮನ್ ಆಗಿ ಮಿಂಚುತ್ತಿದ್ದ ದ್ರಾವಿಡ್‌ಗೆ ಅಚಾನಕ್ಕಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೆಗಲಿಗೆ ಬಂದಿತ್ತು. ವಿಕೆಟ್ ಕೀಪರ್ ನಯನ್ ಮೋಂಗಿಯಾ ಗಾಯಕ್ಕೆ ತುತ್ತಾದ ಕಾರಣ, ದ್ರಾವಿಡ್ ಗ್ಲೌಸ್ ಹಾಕಿ ವಿಕೆಟ್ ಕೀಪಿಂಗ್ ಮಾಡಿದ್ದರು.

ಬಿಸಿಸಿಐ ಉನ್ನತ ಹುದ್ದೆಯಲ್ಲಿ ಕನ್ನಡಿಗರ ದರ್ಬಾರ್!.

ವಿಕೆಟ್ ಕೀಪಿಂಗ್ ಪ್ರಾಕ್ಟೀಸ್ ಮಾಡದ ನನಗೆ ದಿಢೀರ್ ಆಗಿ ಕೀಪಿಂಗ್ ಮಾಡಲು ಹೇಳಿದಾಗ ನನಗೆ ಏನು ಮಾಡಬೇಕು  ಎಂದೇ ತೋಚಿರಲಿಲ್ಲ. ಸ್ಲಿಪ್‌ನಲ್ಲಿ ಉತ್ತಮ ಫೀಲ್ಡಿಂಗ್ ಮಾಡುತ್ತಿದ್ದೆ. ಆದರೆ ವಿಕೆಟ್ ಕೀಪಿಂಗ್ ಮಾಡುವಾಗ ನನ್ನ ಕೆಟ್ಟ ಫೂಟ್‍ವರ್ಕ್ ಬಾಲ್ ಹಿಡಿಯಲು ಅನುವು ಮಾಡಿಕೊಡುತ್ತಿರಲಿಲ್ಲ. ನಾನು ವಿಕೆಟ್ ಕೀಪರ್ ಅಲ್ಲ. ಆದರೆ ಜವಾಬ್ದಾರಿ ನಿರ್ವಹಿಸಲು ಹೇಳಿದಾಗ, ಕೀಪಿಂಗ್ ಕುರಿತು ಅಭ್ಯಾಸ ಮಾಡಿದೆ ಎಂದು ದ್ರಾವಿಡ್ ಈ ಹಿಂದೆ ಅಭಿಮಾನಿ ಕೇಳಿ ಪ್ರಶ್ನೆಗೆ ಉತ್ತರಿಸಿದ್ದರು.

ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

ವಿದೇಶಿ ಪ್ರವಾಸದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಎಡವುತ್ತಿತ್ತು. ಹೀಗಾಗಿ ತಂಡದಲ್ಲಿ ಹೆಚ್ಚು ಬ್ಯಾಟ್ಸ್‌ಮನ್ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ದ್ರಾವಿಡ್ ವಿಕೆಟ್ ಕೀಪಿಂಗ್ ಮಾಡುವುದಾದರೆ 7 ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯಲು ಸಾಧ್ಯವಾಗುತ್ತದೆ ಅನ್ನೋದು ನಾಯಕರ ಮಾತಾಗಿತ್ತು. 2003ರ ವಿಶ್ವಕಪ್ ಟೂರ್ನಿಗೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ್ದರು. 

ಕೋಚ್ ಜಾನ್ ರೈಟ್ಸ್  ಆಪ್ತರಾದ ವಿಕೆಟ್ ಕೀಪಿಂಗ್ ಕೋಚ್ ಮೂಲಕ ದ್ರಾವಿಡ್‌ಗೆ ವಿಕೆಟ್ ಕೀಪಿಂಗ್ ಪಾಠ ಹೇಳಿಕೊಡಲಾಗಿತ್ತು. 2003ರಲ್ಲಿ ಸೌರವ್ ಗಂಗೂಲಿ ನಂಬಿಕೆಯನ್ನು ದ್ರಾವಿಡ್ ಉಳಿಸಿಕೊಂಡಿದ್ದರು. ವಿಶ್ವಕಪ್ ಟೂರ್ನಿಯಲ್ಲಿ 63.60  ಸರಾಸರಿಯಲ್ಲಿ 318 ರನ್ ಸಿಡಿಸಿದ್ದರು. ಇಷ್ಟೇ ಅಲ್ಲ 2003ರ ಕ್ಯಾಲೆಂಡರ್ ವರ್ಷದಲ್ಲಿ 542 ರನ್ ಸಿಡಿಸಿದ್ದರು.

ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್

ದ್ರಾವಿಡ್ ಸಮಯದಲ್ಲಿ ನಯನ್ ಮೋಂಗಿಯಾ ಸೇರಿದಂತೆ ಸಾಬಾ ಕರೀಮ್, ಸಮೀರ್ ದಿಗೆ, ಅಜಯ್ ರಾತ್ರ, ದೀಪ್‌ದಾಸ್ ಗುಪ್ತ, ಎಂ.ಎಸ್.ಕೆ ಪ್ರಸಾದ್ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು. ಆದರೆ ಇವರ್ಯಾರು ದ್ರಾವಿಡ್ ರೀತಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಹೀಗಾಗಿ ನಾಯಕ ಸೌರವ್ ಗಂಗೂಲಿಗೆ ದ್ರಾವಿಡ್ ವಿಕೆಟ್ ಕೀಪಿಂಗ್ ಮಾಡಿದರೆ ಬ್ಯಾಟಿಂಗ್‌ನಲ್ಲೂ ಟೀಂ ಇಂಡಿಯಾ ಬಲಿಷ್ಠ ಪಡೆಯನ್ನು ಕಣಕ್ಕಿಳಿಸಬಹುದು ಅನ್ನೋ ಲೆಕ್ಕಾಚಾರವಾಗಿತ್ತು.

2004ರ ವೇಳೆಗೆ ಪಾರ್ಥೀವ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಸೇರಿಕೊಂಡರು. ಹೀಗಾಗಿ ದ್ರಾವಿಜ್ ಬಹುದೊಡ್ಡ ತಲೆನೋವಾದ ಕೀಪಿಂಗ್ ಯುವಕರ ಹೆಗಲೇರಿತ್ತು. ಇನ್ನು 2005ರಲ್ಲಿ ಎಂ.ಎಸ್.ಧೋನಿ ತಂಡಕ್ಕೆ ಲಗ್ಗೆ ಇಡೋ ಮೂಲಕ ಟೀಂ ಇಂಡಿಯಾ, ಇತರ ತಂಡಗಳಂತೆ ಅತ್ಯುತ್ತಮ ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಹೊಂದಿದೆ ತಂಡವಾಗಿ ಮಾರ್ಪಟ್ಟಿತು.
 

Latest Videos
Follow Us:
Download App:
  • android
  • ios