ನವದೆಹಲಿ(ಜ.20): ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ನಡೆಸಿಕೊಂಡು ಬರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಈ ಬಾರಿಯೂ ಯಶಸ್ವಿಯಾಗಿದೆ.  ನೀತಿ ಪಾಠ, ಹೋರಾಟದ ಮನೋಭಾವ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪಾಠಗಳ ಕುರಿತು ಮೋದಿ ತಿಳಿ ಹೇಳಿದ್ದಾರೆ. ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದಕ್ಕಿಂತ ದೃಢ ಸಂಕಲ್ಪದಿಂದ ಮುನ್ನುಗ್ಗಬೇಕು ಎಂದು ಮಕ್ಕಳಿಗೆ ಹೇಳಿದ್ದಾರೆ. ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಹಾಗೂ ಅನಿಲ್ ಕುಂಬ್ಳೆ ಹೋರಾಟದ ಕತೆ ಹೇಳಿದ್ದಾರೆ.

ಇದನ್ನೂ ಓದಿ: ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್

ವಿದ್ಯಾರ್ಥಿಗಳು ಸ್ಪಷ್ಟ ಗುರಿ  ಹಾಗೂ ಆತ್ಮವಿಶ್ವಾಸ ಹೊಂದಿರಬೇಕು. ಹೀಗಿದ್ದರೆ ಸಾಧನೆ ಮಾರ್ಗದಲ್ಲಿ ಸಾಗಬಹುದು ಎಂದಿದ್ದಾರೆ. ಇದಕ್ಕೆ 2001ರಲ್ಲಿ ಕೋಲ್ಕತಾದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವನ್ನು ಊದಾಹರಣೆಯಾಗಿ ನೀಡಿದ್ದಾರೆ. ಭಾರತ ಫಾಲೋ ಆನ್‌ನಿಂದ ತತ್ತರಿಸಿತ್ತು.  ಪಂದ್ಯದಲ್ಲಿ ಭಾರತ ಸೋಲಿನತ್ತ ಹೆಜ್ಜೆ ಇಟ್ಟಿತ್ತು. ಆದರೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ ಅದ್ಭುತ ಇನಿಂಗ್ಸ್ ಮೂಲಕ ಭಾರತ ಪಂದ್ಯ ಗೆದ್ದುಕೊಟ್ಟಿತು ಎಂದು 2001ರ ಟೆಸ್ಟ್ ಪಂದ್ಯದ ರೋಚಕತೆ ಹಾಗೂ ಹೋರಾಟವನ್ನು ಹೇಳಿದ್ದಾರೆ.

ಇದನ್ನೂ ಓದಿ: ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

2002ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ದವಡೆಗೆ ಬೌನ್ಸ್ ಎಸೆತ ಬಿದ್ದು ಗಂಭೀರವಾಗಿ ಗಾಯಗಗೊಂಡಿದ್ದರು. ಕುಂಬ್ಳೆ ಮತ್ತೆ ಬೌಲಿಂಗ್ ಮಾಡುವುದು ಅಸಾಧ್ಯವಾಗಿತ್ತು. ಆದರೆ ಛಲ ಬಿಡದ ಕುಂಬ್ಳೆ ಬ್ಯಾಂಡೇಜ್ ಕಟ್ಟಿ ಬೌಲಿಂಗ್ ಮಾಡಿದ್ದರು. ಇಷ್ಟೇ ಅಲ್ಲ ಬ್ರಿಯಾನ್ ಲಾರ ವಿಕೆಟ್ ಕಬಳಿಸಿದ್ದರು. ಈ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತು. ಕುಂಬ್ಳೆ ಹೋರಾಟ ಎಲ್ಲರಿಗೂ ಸ್ಪೂರ್ತಿ ಎಂದು ನರೇಂದ್ರ ಮೋದಿ ಮಕ್ಕಳಿಗೆ ಹೇಳಿದ್ದಾರೆ.

ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮೂವರು ಟೀಂ ಇಂಡಿಯಾ ಕ್ರಿಕೆಟಿಗರನ್ನು ಉಲ್ಲೇಖಿಸಿದ್ದಾರೆ. ಇದಲ್ಲಿ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಲೆ ಇಬ್ಬರು ಕನ್ನಡಿಗರು ಅನ್ನೋದು ಹೆಮ್ಮೆ.