Asianet Suvarna News Asianet Suvarna News

1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!

2001ರ ಕೋಲ್ಕತಾ ಟೆಸ್ಟ್ ಪಂದ್ಯ ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲಾರ. ಟೀಂ ಇಂಡಿಯಾ ಫಾಲೋ ಆನ್‌ ಗುರಿಗೆ ತುತ್ತಾಗಿತ್ತು. ಇಷ್ಟೇ ಅಲ್ಲ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಹೋರಾಟದಿಂದ ಟೀಂ ಇಂಡಿಯಾ ಸೋಲಿನ ದವಡೆಯಿಂದ ಪಾರಾಗಿದ್ದು ಮಾತ್ರವಲ್ಲ, ಐತಿಹಾಸಿಕ ಗೆಲುವು ಸಾಧಿಸಿದೆ. ಇದೀಗ ಈ ಗೆಲುವಿನ ಹಿಂದಿನ ಸೀಕ್ರೆಟ್‌ನ್ನು ವಿವಿಎಸ್ ಬಹಿರಂಗ ಪಡಿಸಿದ್ದಾರೆ.

One more over And as it turned out entire 90 overs vvs laxman recall 2001 Eden Garden Test
Author
Bengaluru, First Published May 17, 2020, 4:09 PM IST

ಹೈದರಾಬಾದ್(ಮೇ.17): ಈಡನ್ ಗಾರ್ಡನ್ ಟೆಸ್ಟ್ ಪಂದ್ಯ, ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯ ಎಂದೇ ಗುರುತಿಸಿಕೊಂಡಿದೆ. 2001ರಲ್ಲಿ ನಡೆದ ಈ ಪಂದ್ಯ ಇಂದಿಗೂ ಶ್ರೇಷ್ಠ ಪಂದ್ಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಮೇಲೆ ಆಸ್ಟ್ರೇಲಿಯಾ ಫಾಲೋ ಆನ್ ಹೇರಿತ್ತು. ಭಾರತ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗಿಳಿದ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇತಿಹಾಸ ಸೃಷ್ಟಿಸಿದರು.

ರಾಹುಲ್ ದ್ರಾವಿಡ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಎಸ್ ಶ್ರೀಶಾಂತ್

4ನೇ ದಿನದಾಟದ 90 ಓವರ್‌ಗಳನ್ನು ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಎದುರಿಸಿದ್ದರು. 180 ರನ್‌‌ಗಳಲ್ಲಿ ಗಿರಕಿ ಹೊಡೆದಿದ್ದ ಭಾರತ ಕೊನೆಗೆ 657 ರನ್‌ಗೆ 7 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇಷ್ಟೇ ಅಲ್ಲ 384 ರನ್ ಟಾರ್ಗೆಟ್ ನೀಡಿತು. ಅಂತಿಮ ದಿನದ ಅಂತಿಮ ಸೆಶನ್‌ನಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುುಕೊಂಡಿತು. ಇಷ್ಟೇ ಅಲ್ಲ ಭಾರತ ಗೆಲುವು ಸಾಧಿಸಿತು. 

ಬಂಗಾಳ ಕ್ರಿಕೆಟಿಗರ ರಣಜಿ ತಪ್ಪುಗಳನ್ನು ತಿದ್ದಿದ ವಿವಿಎಸ್ ಲಕ್ಷ್ಮಣ್

ಈ ರೋಚಕ ಪಂದ್ಯವನ್ನು ವಿವಿಎಸ್ ಲಕ್ಷ್ಮಣ್ ನೆನಪಿಸಿದ್ದಾರೆ. ದೇಶಕ್ಕಾಗಿ ಆಡುವುದೇ ಹೆಮ್ಮಯ ವಿಚಾರ. ಅದರಲ್ಲೂ ಕಠಿಣ ಪರಿಸ್ಥಿತಿಯಲ್ಲಿ ತಂಡದ ಗೆಲುವಿನಲ್ಲಿ ಕಾಣಿಕೆ ನೀಡುವುದು ಮತ್ತೂ ಹೆಮ್ಮೆ. 2001ರ ಕೋಲ್ಕತ್ತಾ ಟೆಸ್ಟ್ ಪಂದ್ಯದ ಪರಿಸ್ಥಿತಿ ಹೇಗಿತ್ತು ಅನ್ನೋದು ಬಹುತೇಕರಿಗೆ ತಿಳಿದಿದೆ. ವಿಕೆಟ್ ಇರಲಿಲ್ಲ, ರನ್ ಗಳಿಸಬೇಕು. ಇಷ್ಟೇ ಅಲ್ಲ ದಿನವಿಡಿ ಬ್ಯಾಟಿಂಗ್ ಮಾಡಬೇಕಿತ್ತು. ಹೀಗಾಗಿ ನಾನು ಮತ್ತು ರಾಹುಲ್ ದ್ರಾವಿಡ್ ಪ್ರತಿ ಒವರ್ ಬಳಿಕ ಕಮಾನ್ ಬಡ್ಡಿ, ಇನ್ನೊಂದು ಓವರ್ ಎಂದು ಒಂದು ದಿನವಿಡಿ ಬ್ಯಾಟಿಂಗ್ ಮಾಡಿ ಭಾರತದ ಐತಿಹಿಸಾಕ ಗೆಲುವಿನಲ್ಲಿ ಕೂಡುಗೆ ನೀಡಿದ್ದೇವೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

Follow Us:
Download App:
  • android
  • ios