* ತವರಿನ ಸರಣಿಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ* ಬಲಿಷ್ಠ ವಿಂಡೀಸ್‌ ತಂಡದಲ್ಲಿ ಗೇಲ್, ರಸೆಲ್‌ಗೆ ಸ್ಥಾನ* ತವರಿನಲ್ಲಿ ಆಫ್ರಿಕಾ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಸರಣಿ ಆಡಲಿರುವ ವಿಂಡೀಸ್ 

ಜಮೈಕಾ(ಮೇ.19): ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ವೆಸ್ಟ್‌ ಇಂಡೀಸ್ ಕ್ರಿಕೆಟ್ ಮಂಡಳಿ ದಿಟ್ಟ ಹೆಜ್ಜೆಯಿಟ್ಟಿದ್ದು, ತವರಿನಲ್ಲಿ ನಡೆಯಲಿರುವ ಟಿ20 ಸರಣಿಗಳಿಗೆ ಸ್ಟಾರ್ ಆಟಗಾರರನ್ನೊಳಗೊಂಡ ತಾತ್ಕಾಲಿಕ ವೆಸ್ಟ್ ಇಂಡೀಸ ತಂಡವನ್ನು ಪ್ರಕಟಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿಯನ್ನು ಆಡಲಿದೆ. ಈ ಮೂರು ದೇಶಗಳ ವಿರುದ್ದ ಕೆರಿಬಿಯನ್ನರು ತಲಾ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದಾರೆ. ವೆಸ್ಟ್ ಇಂಡೀಸ್‌ ಕ್ರಿಕೆಟ್‌ ಮಂಡಳಿ ಆಯ್ಕೆ ಮಾಡಿದ 18 ಆಟಗಾರರನ್ನೊಳಗೊಂಡ ತಾತ್ಕಾಲಿಕ ತಂಡದಲ್ಲಿ ಆ್ಯಂಡ್ರೆ ರಸೆಲ್, ಶಿಮ್ರೊನ್ ಹೆಟ್ಮೇಯರ್, ಶೆಲ್ಡನ್ ಕಾಟ್ರೆಲ್ ಸೇರಿದಂತೆ ಟಿ20 ಸ್ಪೆಷಲಿಸ್ಟ್ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ವಿಂಡೀಸ್ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

ಹಾಲಿ ಟಿ20 ವಿಶ್ವಕಪ್ ಚಾಂಪಿಯನ್‌ ವೆಸ್ಟ್ ಇಂಡೀಸ್‌ ತಂಡವು ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ಭಾರತದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‌ ಸಂಗ್ರಾಮದಲ್ಲಿ ಮತ್ತೊಮ್ಮೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಕನಸು ಕಾಣುತ್ತಿದೆ. 2016ರಲ್ಲಿ ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮತ್ತು. 

ತವರಿನಲ್ಲಿ ನಡೆಯುವ ವಿಂಡೀಸ್‌ ಸಂಭಾವ್ಯ ತಂಡ ಹೀಗಿದೆ ನೋಡಿ:

ಕೀರನ್ ಪೊಲ್ಲಾರ್ಡ್(ನಾಯಕ), ನಿಕೋಲಸ್ ಪೂರನ್‌(ಉಪನಾಯಕ), ಫ್ಯಾಬಿಯನ್ ಆ್ಯಲನ್‌, ಡ್ವೇನ್ ಬ್ರಾವೋ, ಶೆಲ್ಡನ್ ಕಾಟ್ರೆಲ್, ಫಿಡೆಲ್ ಎಡ್ವರ್ಡ್, ಆ್ಯಂಡ್ರೆ ಫ್ಲೇಚರ್, ಕ್ರಿಸ್ ಗೇಲ್, ಶಿಮ್ರೊನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಎವಿನ್ ಲೆವಿಸ್, ಒಬೆಡ್ ಮೆಕೈ, ಆ್ಯಂಡ್ರೆ ರಸೆಲ್, ಲಿಂಡ್ಲ್ ಸಿಮೊನ್ಸ್, ಕೆವಿನ್ ಸಿಂಕ್ಲೈರ್, ಓಶಾನೆ ಥಾಮಸ್, ಹೇಡನ್ ವಾಲ್ಷ್ ಜೂನಿಯರ್.