ವಹಾಬ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೇವಲ 3 ತಿಂಗಳಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಟಿ20 ಸೇರಿ ದೇಸಿ ಟೂರ್ನಿಗಳಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಪಂಜಾಬ್ ರಾಜ್ಯದ ಕ್ರೀಡಾ ಸಚಿವ ಕೂಡ ಹೌದು. 

ಲಾಹೋರ್(ನ.18): ಪಾಕಿಸ್ತಾನ ಕ್ರಿಕೆಟ್‌ನಲ್ಲಿ ದುರಾಡಳಿತ ಮುಂದುವರಿದಿದ್ದು, ಇತ್ತೀಚೆಗೆ ಇಂಜಮಾಮ್ ಉಲ್-ಹಕ್‌ರ ರಾಜೀನಾಮೆಯಿಂದಾಗಿ ತೆರವಾಗಿದ್ದ ಪ್ರಧಾನ ಆಯ್ಕೆಗಾರ ಹುದ್ದೆಗೆ ವೇಗಿ ವಹಾಬ್ ರಿಯಾಜ್‌ರನ್ನು ನೇಮಕ ಮಾಡಲಾಗಿದೆ. ವಹಾಬ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೇವಲ 3 ತಿಂಗಳಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಟಿ20 ಸೇರಿ ದೇಸಿ ಟೂರ್ನಿಗಳಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಪಂಜಾಬ್ ರಾಜ್ಯದ ಕ್ರೀಡಾ ಸಚಿವ ಕೂಡ ಹೌದು.

ಇಂಜಮಾಮ್ ಮೇಲೆ ಸ್ವಹಿತಾಸಕ್ತಿ ಆರೋಪ ಹೊರಿಸಿದ್ದ ಪಿಸಿಬಿ, ವಹಾಬ್ ರಿಯಾಜ್‌ರ ನೇಮಕವನ್ನು ಹೇಗೆ ಸಮರ್ಥಿಸಿಕೊಳ್ಳಲಿದೆ ಎಂದು ಅನೇಕರು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಹಾರ್ದಿಕ್‌ ಪಾಂಡ್ಯ ಅಲಭ್ಯ?

ನವದೆಹಲಿ: ಭಾರತದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಮಾತ್ರವಲ್ಲ, ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಕಳೆದ ತಿಂಗಳು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದ ವೇಳೆ ಹಾರ್ದಿಕ್‌ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಬೆಂಗಳೂರಿನಲ್ಲಿರುವ ಎನ್‌ಸಿಎಗೆ ಆಗಮಿಸಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ಹಾರ್ದಿಕ್‌ ವಿಶ್ವಕಪ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಎನ್‌ಸಿಎ ತಿಳಿಸಿತ್ತು. 

World Cup final: ಅಹಮದಾಬಾದ್‌ನಲ್ಲಿ ಒಂದು ದಿನದ ಹೋಟೆಲ್‌ ರೂಂಗೆ ₹2 ಲಕ್ಷ..!

ಅವರು ಸಂಪೂರ್ಣ ಫಿಟ್‌ ಆಗಲು ಇನ್ನೂ ಕೆಲ ವಾರಗಳು ಬೇಕಿದ್ದು, ಡಿ.10ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20, ಡಿ.17ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೂ ಪಾಂಡ್ಯ ಲಭ್ಯರಿರುವುದಿಲ್ಲ ಎನ್ನಲಾಗಿದೆ.

ವಿಶ್ವಕಪ್‌ ಗೆಲ್ಲಲು ಭಾರತ ಅರ್ಹ: ವಿಲಿಯಮ್ಸನ್‌

ಮುಂಬೈ: ವಿಶ್ವಕಪ್‌ ಫೈನಲ್‌ಗೇರಿರುವ ಭಾರತ ತಂಡವನ್ನು ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅಭಿನಂದಿಸಿದ್ದು, ಭಾರತೀಯರು ವಿಶ್ವಕಪ್‌ ಗೆಲ್ಲಲು ಅರ್ಹರಿದ್ದಾರೆ ಎಂದಿದ್ದಾರೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ವಿಶ್ವದಲ್ಲೇ ಶ್ರೇಷ್ಠ ತಂಡ. ಟೂರ್ನಿಯಲ್ಲಿ ಭಾರತದ ಆಟ ಅದ್ಭುತವಾಗಿದೆ. ಎಲ್ಲಾ ವಿಭಾಗದಲ್ಲೂ ತಂಡ ಮಿಂಚುತ್ತಿದೆ. ಭಾರತೀಯರು ಕೆಲ ದಿನಗಳಲ್ಲೇ ವಿಶ್ವಕಪ್‌ ಗೆಲ್ಲಲು ಸಜ್ಜಾಗಿದ್ದಾರೆ’ ಎಂದಿದ್ದಾರೆ. ಇದೇ ವೇಳೆ ವಿರಾಟ್‌, ಶಮಿ ಬಗ್ಗೆಯೂ ಕೇನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊಹ್ಲಿ ಸಾಧನೆಯನ್ನು ವರ್ಣಿಸಲು ಪದಗಳಿಲ್ಲ ಎಂದಿದ್ದಾರೆ.

ಕೊಹ್ಲಿ, ರೋಹಿತ್, ರಾಹುಲ್ ಯಶಸ್ಸಿನ ಹಿಂದೆ ಕುಮಟಾ ಯುವಕ; 4 ವರ್ಷ ಸ್ಮಶಾನದಲ್ಲಿ ಮಲಗಿದ್ದವನೇ ಟೀಂ ಇಂಡಿಯಾದ ಅಸಲಿ ಬೆನ್ನೆಲುಬು..!

ಫೈನಲ್‌ ಪಂದ್ಯ ಮುನ್ನ ವಾಯುಪಡೆ ಎರ್‌ಶೋ

ಅಹಮದಾಬಾದ್: ಇಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತೀಯ ವಾಯು ಸೇನೆಯಿಂದ ಏರ್‌ಶೋ ನಡೆಯಲಿದೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಪಂದ್ಯ ಆರಂಭಗೊಳ್ಳುವ ಮುನ್ನ ಸುಮಾರು 10 ನಿಮಿಷಗಳ ಕಾಲ ಸಾಹಸಮಯ ಏರ್‌ಶೋ ನೀಡಲಿದೆ.

ಇದರ ಭಾಗವಾಗಿ ಶುಕ್ರವಾರ ರಿಹರ್ಸಲ್ ನಡೆಯಿತು. ಇನ್ನು ಈ ಹಿಂದಿನ ಎಲ್ಲಾ ವಿಶ್ವಕಪ್ ವಿಜೇತ ನಾಯಕರಿಗೆ ಬಿಸಿಸಿಐ ವಿಶೇಷ ಬ್ಲೇಜರ್‌ವೊಂದನ್ನು ನೀಡಲಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಹಲವು ಮನರಂಜನಾ ಕಾರ್ಯಕ್ರಮಗಳೂ ಇರಲಿವೆ.