World Cup final: ಅಹಮದಾಬಾದ್‌ನಲ್ಲಿ ಒಂದು ದಿನದ ಹೋಟೆಲ್ ರೂಂಗೆ ₹2 ಲಕ್ಷ..!
ಸಾಮಾನ್ಯ ಹೋಟೆಗಳ ದರ ಕೂಡಾ ಒಂದು ರಾತ್ರಿಗೆ 20,000ರು. ವರೆಗೆ ಹೆಚ್ಚಳವಾಗಿದೆ. ‘ದುಬೈ, ಆಸ್ಟ್ರೇಲಿಯಾ, ಅಮೆರಿಕ ದಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಸುಮಾರು 30 ರಿಂದ 40 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದೆ. ಹೀಗಾಗಿ ದರ 5ರಿಂದ 7 ಪಟ್ಟು ಹೆಚ್ಚಳವಾಗಿದೆ’ ಎಂದು ಹೋಟೆಲ್ ಮಾಲಕರೊಬ್ಬರು ತಿಳಿಸಿದ್ದಾರೆ.
ಅಹಮದಾಬಾದ್(ನ.18): ಇಲ್ಲಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ನಡೆಯಲಿದ್ದು, ಇದರ ಪರಿಣಾಮ ನಗರದ ಹೋಟೆಲ್ ಹಾಗೂ ವಿಮಾನ ಟಿಕೆಟ್ ದರ ಗಗನಕ್ಕೇರಿದೆ. ನಗರದಲ್ಲಿ ಕೆಲ ಪಂಚತಾರಾ ಹೋಟೆಲ್‌ಗಳ ಒಂದು ರಾತ್ರಿಯ ದರ ಬರೋಬ್ಬರಿ ₹2 ಲಕ್ಷಕ್ಕೂ ಹೆಚ್ಚಿದೆ. ಅಹಮದಾಬಾದ್ ಮಾತ್ರವಲ್ಲದೇ ಸಮೀಪದ ನಗರಗಳಲ್ಲೂ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಸಾಮಾನ್ಯ ಹೋಟೆಗಳ ದರ ಕೂಡಾ ಒಂದು ರಾತ್ರಿಗೆ 20,000ರು. ವರೆಗೆ ಹೆಚ್ಚಳವಾಗಿದೆ. ‘ದುಬೈ, ಆಸ್ಟ್ರೇಲಿಯಾ, ಅಮೆರಿಕ ದಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಸುಮಾರು 30 ರಿಂದ 40 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದೆ. ಹೀಗಾಗಿ ದರ 5ರಿಂದ 7 ಪಟ್ಟು ಹೆಚ್ಚಳವಾಗಿದೆ’ ಎಂದು ಹೋಟೆಲ್ ಮಾಲಕರೊಬ್ಬರು ತಿಳಿಸಿದ್ದಾರೆ. ಇನ್ನು ನಗರಕ್ಕೆ ಆಗಮಿಸುವ ವಿಮಾನ ದರದಲ್ಲೂ ಭಾರೀ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸರಾಸರಿ 5000-6000 ಇರುವ ವಿಮಾನ ದರ ಶನಿವಾರಕ್ಕೆ 25000ರಿಂದ 33000 ರುಪಾಯಿವರೆಗೂ ಇದೆ.
ಶಮಿ ಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ!
ಅಮ್ರೋಹಾ: ವಿಶ್ವಕಪ್‌ನಲ್ಲಿ ಅಭೂತಪೂರ್ವ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಭಾರತದ ವೇಗಿ ಮೊಹಮದ್ ಶಮಿ ಅವರ ಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಯುಪಿಯ ಅಮ್ರೋಹಾ ಜಿಲ್ಲೆಯ ಸಹಾಸ್ಪುರ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಕ್ರೀಡಾಂಗಣದ ಕಾಮಗಾರಿ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
'1.3 ಲಕ್ಷ ಅಭಿಮಾನಿಗಳನ್ನು 'ಸೈಲೆಂಟ್' ಮಾಡುವುದೇ ನಮಗೆ ತೃಪ್ತಿ..' ವಿಶ್ವಕಪ್ ಫೈನಲ್‌ಗೂ ಮುನ್ನ ಕಮಿನ್ಸ್ ಮಾತು
ಭಾರತ ವಿಶ್ವಕಪ್ ಗೆಲ್ಲುತ್ತೆ: ಸಿದ್ದರಾಮಯ್ಯ
ಮೈಸೂರು: ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲುತ್ತದೆ. ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ‘ಭಾರತ ತಂಡದ ಎಲ್ಲಾ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಇದೇ ರೀತಿ ಎಲ್ಲರೂ ಒಗ್ಗೂಡಿ ಆಡಿದರೆ ಖಂಡಿತ ಗೆಲ್ಲಲಿದ್ದಾರೆ’ ಎಂದರು.
ವಿರಾಟ್ ಕೊಹ್ಲಿ ಬೇರೆ ಗ್ರಹದಿಂದ ಬಂದಿದ್ದಾರೆ: ಸರ್ ವಿವಿಯನ್ ರಿಚರ್ಡ್ಸ್
ಏಕದಿನ ಕ್ರಿಕೆಟ್‌ಗೆ ಡಿ ಕಾಕ್ ವಿದಾಯ
ಕೋಲ್ಕತಾ: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಗುರುವಾರ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯ ಅವರ ಕೊನೆಯ ಏಕದಿನ ಪಂದ್ಯವಾಗಿತ್ತು. ವಿಶ್ವಕಪ್‌ಗೂ ಮೊದಲೇ ಡಿ ಕಾಕ್ ತಾವು ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. ಈ ವಿಶ್ವಕಪ್‌ನಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 594 ರನ್ ಕಲೆಹಾಕಿದರು. 155 ಏಕದಿನ ಪಂದ್ಯಗಳನ್ನಾಡಿರುವ ಡಿ ಕಾಕ್, 45.74ರ ಸರಾಸರಿಯಲ್ಲಿ 6770 ರನ್ ಗಳಿಸಿದ್ದು, 21 ಶತಕ ದಾಖಲಿಸಿದ್ದಾರೆ. 2021ರಲ್ಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದ ಡಿ ಕಾಕ್, ದಕ್ಷಿಣ ಆಫ್ರಿಕಾ ಪರ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.