Asianet Suvarna News Asianet Suvarna News

ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!

ಟೀಂ ಇಂಡಿಯಾದ ವಿಕೆಟ್ ಕೀಪಿಂಗ್ ಜವಾಬ್ದಾರಿ ಇದೀಗ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹೆಗಲೇರಿದೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ರಾಹುಲ್ ಕೀಪರ್ ಆಗಿ ಮುಂದುವರಿಸಲು ಚಿಂತನ ನಡೆಸಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಾಯಕನ ಜವಾಬ್ದಾರಿ ವಿವರಿಸಿದ್ದಾರೆ. ಇದೇ ಕಾರಣಕ್ಕೆ ಮಾಜಿ ನಾಯಕ ಧೋನಿ ಶ್ರೇಷ್ಠ ಎಂದಿದ್ದಾರೆ. ಸೆಹ್ವಾಗ್ ಹೇಳಿದ ಕೊಹ್ಲಿ ಹಾಗೂ ಧೋನಿ ನಾಯಕತ್ವ ವ್ಯತ್ಯಾಸವೇನು?

Virender sehwag Compare Virat kohli and Dhoni captaincy
Author
Bengaluru, First Published Jan 22, 2020, 12:13 PM IST

ನವದೆಹಲಿ(ಜ.22): ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್  ಹೆಗಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೆಗಲೇರಿತ್ತು. ರಿಷಬ್ ಪಂತ್ ಇಂಜುರಿಯಿಂದ ರಾಹುಲ್ ವಿಕೆಟ್ ಕೀಪರ್ ಆಗಿ ಜವಾಬ್ದಾರಿ ನಿರ್ವಹಿಸಿದರು. ಅದ್ಭುತ ಸ್ಟಂಪ್ ಮೂಲಕ ಗಮನಸೆಳೆದ ರಾಹುಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ರಾಹುಲ್ ವಿಕೆಟ್ ಕೀಪಿಂಗ್‌ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ವಿಕೆಟ್ ಕೀಪರ್: ಅಚ್ಚರಿಯ ಹೇಳಿಕೆ ನೀಡಿದ ಕೊಹ್ಲಿ.!

ರಾಹುಲ್ ಕೀಪಿಂಗ್ ಕುರಿತು ಮಾತನಾಡಿಗ ಸೆಹ್ವಾಗ್, ಸದ್ಯ ಟೀಂ ಮ್ಯಾನೇಜ್ಮೆಂಟ್‌ಗೆ ಎಚ್ಚರಿಕೆ ನೀಡಿದ್ದಾರೆ. ರಾಹುಲ್ ವಿಕೆಟ್ ಕೀಪರ್ ಆಗಿ ಮುಂದುವರಿಸುವ ನಿರ್ಧಾರ ಉತ್ತಮ. ಆದರೆ ಸದ್ಯ ಟೀಂ ಮ್ಯಾನೇಜ್ಮೆಂಟ್ ಒಂದೆರೆಡು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಬ್ಯಾಟಿಂಗ್ ಆರ್ಡರ್ ಬದಲಾಯಿಸುತ್ತಾರೆ ಅಥವಾ ತಂಡದಿಂದ ಕೈಬಿಡುತ್ತಾರೆ. ಇದು ತಪ್ಪು. ಆದರೆ ಧೋನಿ ಕ್ರಿಕೆಟಿಗನ ಬೆನ್ನಿಗೆ ನಿಲುತ್ತಿದ್ದರು. ಅವಕಾಶಗಳನ್ನು ನೀಡಿ ಆತನಿಂದ ತಂಡಕ್ಕೆ ಉತ್ತಮ ಕೊಡುಗೆ ನೀಡುವ ರೀತಿ ಮಾಡುತ್ತಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಆಸೀಸ್ ವಿರುದ್ಧ ಅಬ್ಬರ; ಏಕದಿನದಲ್ಲಿ ದಾಖಲೆ ಬರೆದ ರಾಹುಲ್!

ಧೋನಿ ಹೊಗಳಿದ ಸೆಹ್ವಾಗ್, ಕೊಹ್ಲಿ ಹಾಗೂ ಟೀಂ ಮ್ಯಾನೇಜ್ಮೆಂಟ್ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಪದೇ ಪದೇ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸುವುದು ಉಚಿವಲ್ಲ. ರಾಹುಲ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿದ್ದಾರೆ. ಇದೀಗ ರಾಹುಲ್‌ಗೆ ಹೆಚ್ಚಿನ ಅವಕಾಶಗಳು ನೀಡಬೇಕು. ತಂಡದ ಹೊರಗಿದ್ದರೆ ಆತ ಶ್ರೇಷ್ಠ ಆಟಗಾರನಾಗಲು ಸಾಧ್ಯವಿಲ್ಲ ಎಂದು ಸೂಚಿಸಿದ್ದಾರೆ.
 

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ

Follow Us:
Download App:
  • android
  • ios