ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಆಡಿದ್ದಾರೆ ಎಂದು ಲಾಲೂ ಪ್ರಸಾದ್ ಪುತ್ರ, ಮಾಜಿ ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ‘ವಿರಾಟ್ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ. ಆದರೆ, ಈ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ನಾನೊಬ್ಬ ಅದ್ಭುತ ಕ್ರಿಕೆಟರ್ ಆಗಿದ್ದೆ. ಆದರೆ ಗಾಯದ ಸಮಸ್ಯೆಯಿಂದಾಗಿ ನನ್ನ ಕ್ರಿಕೆಟ್ ವೃತ್ತಿಬದುಕು ಬಹಳ ಬೇಗ ಮುಗಿದು ಹೋಯಿತು’. ಹೀಗೆಂದು ಹೇಳಿರುವುದು ಬಿಹಾರದ ಮಾಜಿ ಉಪಮುಖ್ಯಮಂತ್ರಿ, ವಿವಿಧ ಖಾತೆಗಳ ಸಚಿವರಾಗಿದ್ದ, ಮಾಜಿ ಸಿಎಂ ಲಾಲೂಪ್ರಸಾದ್‌ರ ಪುತ್ರ ತೇಜಸ್ವಿ ಯಾದವ್.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತೇಜಸ್ವಿ ಕ್ರಿಕೆಟ್ ಬಗ್ಗೆ ತಮಗಿರುವ ಒಲವಿನ ಬಗ್ಗೆ ಮಾತನಾಡಿದ್ದಾರೆ. ‘ ಈ ಹಿಂದೆ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ. ಭಾರತ ತಂಡದ ಹಲವು ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು’ ಎಂದು ತೇಜಸ್ವಿ ಹೇಳಿದ್ದಾರೆ.
ತೇಜಸ್ವಿ, 2008-2013ರ ನಡುವೆ ಜಾರ್ಖಂಡ್ ಪರ 1 ಪ್ರ.ದರ್ಜೆ, 2 ಲಿಸ್ಟ್ ‘ಎ’, 4 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ 2008-2012ರ ವರೆಗೂ ಇದ್ದರು. ಆದರೆ ಒಂದೂ ಪಂದ್ಯದಲ್ಲಿ ಅವರನ್ನು ಆಡಿಸಿರಲಿಲ್ಲ.
ತೇಜಸ್ವಿ ಯಾದವ್ 2009ರಲ್ಲಿ ವಿದರ್ಭ ಎದುರು ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ತೇಜಸ್ವಿ ಯಾದವ್ 2010ರ ಫೆಬ್ರವರಿಯಲ್ಲಿ ತ್ರಿಪುರ ಹಾಗೂ ಓರಿಸ್ಸಾ ಎದುರು ಕಣಕ್ಕಿಳಿದಿದ್ದರು. ಇನ್ನು ತೇಜಸ್ವಿ ಯಾದವ್ ಧನ್‌ಬಾದ್‌ನಲ್ಲಿ ಓರಿಸ್ಸಾ, ಅಸ್ಸಾಂ, ಬೆಂಗಾಲ್ ಹಾಗೂ ತ್ರಿಪುರ ವಿರುದ್ಧ ತಲಾ ಒಂದೊಂದು ಟಿ20 ಪಂದ್ಯವನ್ನಾಡಿದ್ದಾರೆ.
ಇನ್ನು ತೇಜಸ್ವಿ ಯಾದವ್ ಅವರ ಸಂದರ್ಶನದ ಕೆಲವು ಕ್ಲಿಪ್‌ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಹೀಗಿವೆ ನೋಡಿ ತೇಜಸ್ವಿ ಯಾದವ್ ಆಡಿದ ಮಾತಿನ ಸ್ಯಾಂಪಲ್‌ಗಳು.
ಬಾಂಗ್ಲಾ ವಿರುದ್ಧ ಟಿ20ಗೆ ಶುಭ್‌ಮನ್‌ಗೆ ವಿಶ್ರಾಂತಿ?
ನವದೆಹಲಿ: ಬಾಂಗ್ಲಾದೇಶ ವಿರುದ್ಧ ಅ.7ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಶುಭ್‌ಮನ್ ಗಿಲ್‌ಗೆ ವಿಶ್ರಾಂತಿ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಗಿಲ್ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದು, 3ನೇ ಕ್ರಮಾಂಕದಲ್ಲಿ ಅವರನ್ನು ಮುಂದುವರಿಸಲು ತಂಡದ ಆಡಳಿತ ನಿರ್ಧರಿಸಿದೆ. ಹೀಗಾಗಿ, ಈ ಋತುವಿನಲ್ಲಿ ಭಾರತ ಆಡಲಿರುವ ಎಲ್ಲಾ 10 ಟೆಸ್ಟ್‌ಗಳಿಗೂ ಗಿಲ್ ಮೊದಲ ಆಯ್ಕೆಯ ಪಟ್ಟಿಯಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣದಿಂದಾಗಿ, ಅವರನ್ನು ಟಿ20 ಸರಣಿಗಳಿಂದ ದೂರವಿರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಬಿಸಿಸಿಐ ಕೇವಲ 2 ರೀಟೈನ್ ಅವಕಾಶ ಕೊಟ್ಟರೆ ಧೋನಿ ಪಾಡು ಏನು? ಚೆನ್ನೈ ಫ್ರಾಂಚೈಸಿಯ ದಿಟ್ಟ ನಿರ್ಧಾರ
ಶುಭ್‌ಮನ್ ಗಿಲ್ ಮಾತ್ರವಲ್ಲ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಕೆಲ ಹಿರಿಯ ಆಟಗಾರರಿಗೆ ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಬಂದಿಳಿದ ಬಾಂಗ್ಲಾ ಕ್ರಿಕೆಟ್ ತಂಡ
ಚೆನ್ನೈ: ಭಾರತ ವಿರುದ್ಧ 2 ಟೆಸ್ಟ್, 3 ಟಿ20 ಪಂದ್ಯಗಳ ಸರಣಿಗಳನ್ನು ಆಡಲು ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾನುವಾರ ಭಾರತಕ್ಕೆ ಬಂದಿಳಿಯಿತು. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ 2-0ಯಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಳಿಕ ತಂಡದ ಆತ್ಮವಿಶ್ವಾಸ ವೃದ್ಧಿಸಿದ್ದು, ಭಾರತದಲ್ಲೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯೊಂದಿಗೆ ಬಾಂಗ್ಲಾ ತಂಡ ಆಗಮಿಸಿದೆ. ಮೊದಲ ಟೆಸ್ಟ್ ನಡೆಯಲಿರುವ ಚೆನ್ನೈಗೆ ತಲುಪಿರುವ ನಜ್ಮುಲ್ ಶಾಂಟೋ ಪಡೆ, ಸೋಮವಾರದಿಂದ ಅಭ್ಯಾಸ ಆರಂಭಿಸಲಿದೆ.
