ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು? ಇಲ್ಲಿಯವರೆಗೂ ಯಾರಿಗೂ ಆ ರೆಕಾರ್ಡ್‌ ಬ್ರೇಕ್‌ ಮಾಡೋಕಾಗಿಲ್ಲ!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Longest Six in the history of World Cricket all you need to know kvn

ಬೆಂಗಳೂರು: ಇತ್ತೀಚಿಗಿನ ವರ್ಷಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ಬ್ಯಾಟರ್‌ಗಳು ಸಿಕ್ಸರ್ ಸಿಡಿಸುವುದು ದೊಡ್ಡ ವಿಷಯವೇನೂ ಅಲ್ಲ. ಅದು ಟಿ20 ಕ್ರಿಕೆಟ್ ಆಗಿರಲಿ ಅಥವಾ ಏಕದಿನ ಕ್ರಿಕೆಟ್ ಆಗಿರಲಿ, ಬ್ಯಾಟರ್‌ಗಳು ಮೈಚಳಿ ಬಿಟ್ಟು ಸಿಕ್ಸರ್ ಸಿಡಿಸುವುದನ್ನು ನಾವು ನೀವೆಲ್ಲರೂ ನೋಡಿದ್ದೇವೆ. ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಕೆಟಿಗರಾದ ಕೀರನ್ ಪೊಲ್ಲಾರ್ಡ್, ಆಂಡ್ರೆ ರಸೆಲ್, ಕ್ರಿಸ್ ಗೇಲ್ ಅವರಂತಹ ಬ್ಯಾಟರ್‌ಗಳು ದೊಡ್ಡ ದೊಡ್ಡ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ. ಇನ್ನು ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್, ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದೆಲ್ಲದರ ನಡುವೆ ಕ್ರಿಕೆಟ್ ಇತಿಹಾಸದಲ್ಲಿ ಯಾರು ಅತಿ ದೂರದ ಸಿಕ್ಸರ್ ಸಿಡಿಸಿದ್ದಾರೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಬನ್ನಿ ನಾವಿಂದು ಆ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡೋಣ. 

ಕ್ರಿಕೆಟ್ ಅಂಪೈರ್ ಆಗೋದು ಇಷ್ಟು ಸುಲಭ ನಾ? ಒಂದು ಮ್ಯಾಚ್‌ಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಡೀಟೈಲ್ಸ್‌

ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ ಈ ರೆಕಾರ್ಡ್:

ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಸಿಕ್ಸರ್ ಸಿಡಿಸಿದ ದಾಖಲೆ ಪಾಕಿಸ್ತಾನದ ಮಾಜಿ ಸ್ಪೋಟಕ ಬ್ಯಾಟರ್ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. 2013ರಲ್ಲಿ ದಕ್ಷಿಣ ಆಫ್ರಿಕಾದ ರೆಯಾನ್ ಮೆಕ್‌ಲರೆನ್ ಬೌಲಿಂಗ್‌ನಲ್ಲಿ ಅಫ್ರಿದಿ 153 ಮೀಟರ್ ದೂರದ ಸಿಕ್ಸರ್ ಸಿಡಿಸಿದ್ದರು. ಈ ರೆಕಾರ್ಡ್‌ ನಿರ್ಮಾಣವಾಗಿ ಒಂದು ದಶಕವೇ ಕಳೆದರೂ, ಯಾರಿಗೂ ಈ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಆಸ್ಟ್ರೇಲಿಯಾದ ವೇಗಿ ಬ್ರೆಟ್‌ ಲೀ 2005ರಲ್ಲಿ ವೆಸ್ಟ್‌ ಇಂಡೀಸ್ ಎದುರು 143 ಮೀಟರ್ ದೂರದ ಸಿಕ್ಸರ್ ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಈತ:

ಇನ್ನು ಒಟ್ಟಾರೆ ಕ್ರಿಕೆಟ್ ಇತಿಹಾಸದಲ್ಲಿ ಏಯ್ಡನ್ ಬ್ಲಿಜರ್ಡ್‌ ಎನ್ನುವ ಆಟಗಾರ, ಅತಿದೊಡ್ಡ ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ. ಈತ ಆಸ್ಟ್ರೇಲಿಯಾ ಟಿ20 ಲೀಗ್‌ನಲ್ಲಿ ವಿಕ್ಟೋರಿಯಾ ತಂಡದ ಪರ ಆಡುವಾಗ 173 ಮೀಟರ್ ದೂರದ ಸಿಕ್ಸರ್ ಸಿಡಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಸಿಕ್ಸರ್ ಎನಿಸಿಕೊಂಡಿದೆ.

ಬಿಸಿಸಿಐ ಕೇವಲ 2 ರೀಟೈನ್ ಅವಕಾಶ ಕೊಟ್ಟರೆ ಧೋನಿ ಪಾಡು ಏನು? ಚೆನ್ನೈ ಫ್ರಾಂಚೈಸಿಯ ದಿಟ್ಟ ನಿರ್ಧಾರ

ಟೀಂ ಇಂಡಿಯಾ ಪರ ಅತಿದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು?

ಭಾರತ ಕ್ರಿಕೆಟ್ ತಂಡವು ಹಲವು ವಿಸ್ಪೋಟಕ ಬ್ಯಾಟರ್‌ಗಳನ್ನು ಕಂಡಿದೆ. ರೋಹಿತ್ ಶರ್ಮಾ, ವಿರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿಯಂತಹ ಬ್ಯಾಟರ್‌ಗಳು ಚೆಂಡನ್ನು ನಾನಾ ದಿಕ್ಕಿಗೆ ಅಟ್ಟಿದ್ದಾರೆ. ಹೀಗಿದ್ದೂ ಭಾರತ ಪರ ದೊಡ್ಡ ಸಿಕ್ಸರ್ ಸಿಡಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಯುವರಾಜ್ ಸಿಂಗ್ 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಆಸ್ಟ್ರೇಲಿಯಾದ ಎದುರು 119 ಮೀಟರ್ ದೂರದ ಸಿಕ್ಸರ್ ಸಿಡಿಸಿದ್ದರು. ಈ ದಾಖಲೆ ಬ್ರೇಕ್ ಮಾಡಲು ಭಾರತದ ಇನ್ನೊಬ್ಬ ಬ್ಯಾಟರ್‌ಗೆ ಇದುವರೆಗೂ ಸಾಧ್ಯವಾಗಿಲ್ಲ.

ಐಪಿಎಲ್‌ನಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು?

ಇನ್ನು ಐಪಿಎಲ್‌ನಲ್ಲಿ ಅತಿದೊಡ್ಡ ಸಿಕ್ಸರ್ ಸಿಡಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಆಲ್ಬಿ ಮಾರ್ಕೆಲ್ ಹೆಸರಿನಲ್ಲಿದೆ. 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಆಲ್ಬಿ ಮಾರ್ಕೆಲ್ 125 ಮೀಟರ್ ದೂರದ ಸಿಕ್ಸರ್ ಸಿಡಿಸಿದ್ದರು.

Latest Videos
Follow Us:
Download App:
  • android
  • ios