ಎಂ.ಎಸ್.ಧೋನಿ ಜೊತೆಗಿನ ಆತ್ಮೀಯತೆ, ಸಂಬಂಧ ಹೇಳಿದ ವಿರಾಟ್ ಕೊಹ್ಲಿ ಎರಡೇ ಪದದಲ್ಲಿ ಸಂಬಂಧ ತಿಳಿಸಿದ ಕೊಹ್ಲಿ ಇನ್‌ಸ್ಟಾಗ್ರಾಂ ಪ್ರಶ್ನೋತ್ತರದಲ್ಲಿ ಕೊಹ್ಲಿ ಉತ್ತರ

ಮುಂಬೈ(ಮೇ.30): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್.ಧೋನಿ ಜೊತೆಗಿನ ಸಂಬಂಧವನ್ನು ನಂಬಿಕೆ ಹಾಗೂ ಗೌರವ ಎಂದು ಎರಡೇ ಪದದಲ್ಲಿ ಅರ್ಥಪೂರ್ಣವಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ಮಾಜಿ ಕ್ರಿಕೆಟರ್‌ ತಾಯಿ ಚಿಕಿತ್ಸೆಗೆ ವಿರಾಟ್ ಕೊಹ್ಲಿ 6.77 ಲಕ್ಷ ರೂ ನೆರವು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೂರ್ನಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂಬೈನಲ್ಲಿ ಬೀಡುಬಿಟ್ಟಿದೆ. ಕ್ವಾರಂಟೈನ್‌ನಲ್ಲಿರುವ ವಿರಾಟ್ ಕೊಹ್ಲಿ ಇನ್‌‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಉತ್ತರ ನೀಡುವ ಕೆಲಸ ಮಾಡಿದ್ದಾರೆ. ಈ ವೇಳೆ ಧೋನಿ ಕುರಿತು ಪ್ರಶ್ನೆಗೆ ಕೊಹ್ಲಿ ಅತ್ಯುತ್ತಮ ಉತ್ತರ ನೀಡಿದ್ದಾರೆ.

ಅಭಿಮಾನಿಯೊಬ್ಬ ಕೂಲ್ ಕ್ಯಾಪ್ಟನ್ ಜೊತೆಗಿನ ಬಂಧವನ್ನು ಎರಡೇ ಪದದಲ್ಲಿ ಹೇಳಿ ಎಂದಿದ್ದಾನೆ. ಈ ಪ್ರಶ್ನೆಗೆ ಕೊಹ್ಲಿ ನಂಬಿಕೆ ಹಾಗೂ ಗೌರವ ಎಂದು ಉತ್ತರಿಸುವ ಮೂಲಕ ಧೋನಿ ಮಹಾನ್ ವ್ಯಕ್ತಿತ್ವವನ್ನು ಕನಿಷ್ಠ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!

ಇದೇ ಪ್ರಶ್ನೋತ್ತರದಲ್ಲಿ ತಮ್ಮ ಆಹಾರ ಪದ್ದತಿಯನ್ನು ಹೇಳಿದ್ದಾರೆ. ತಮ್ಮ ಫಿಟ್ನೆಸ್‌ಗಾಗಿ ಕಟ್ಟುನಿಟ್ಟಿನ ಆಹಾರ ಪದ್ದತಿ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ತರಕಾರಿಗಳು, ಮೊಟ್ಟೆಗಳು, 2 ಕಪ್ ಕಾಫಿ, ದಾಲ್, ಕ್ವಿನೋವಾ, ಪಾಲಕ್ ಜೊತೆಗೆ ದೋಸೆ ಕೂಡ ಇಷ್ಟಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.