Asianet Suvarna News Asianet Suvarna News

ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ 5 ಕ್ರೀಡಾಂಗಣ ಸಾಕು; ವಿರಾಟ್ ಕೊಹ್ಲಿ!

ರಾಂಚಿ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳ ನೀರಸ ಪ್ರತಿಕ್ರಿಯೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಇದೀಗ ಬಿಸಿಸಿಐ ಕೊಹ್ಲಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ

virat kohli backs Five test venue in India after ranchi match
Author
Bengaluru, First Published Oct 23, 2019, 9:53 AM IST

ರಾಂಚಿ(ಅ.23): ಭಾರ​ತ​ದಲ್ಲಿ ಟೆಸ್ಟ್‌ ಕ್ರಿಕೆಟ್‌ನ ಜನ​ಪ್ರಿ​ಯತೆ ಉಳಿ​ಸಲು ಬಿಸಿ​ಸಿ​ಐ 5 ಪ್ರಮುಖ ಟೆಸ್ಟ್‌ ಕೇಂದ್ರಗಳನ್ನು ಗುರು​ತಿಸಿ, ಅಲ್ಲಿ ಮಾತ್ರ ಪಂದ್ಯ​ಗ​ಳನ್ನು ಆಯೋ​ಜಿ​ಸ​ಬೇಕು ಎಂದು ನಾಯಕ ವಿರಾಟ್‌ ಕೊಹ್ಲಿ ​ಹೇಳಿದ್ದಾರೆ.ಆಸ್ಪ್ರೇ​ಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಈಗಾ​ಗಲೇ ಈ ಮಾದರಿ ಇದ್ದು, ಅದನ್ನೇ ಅನು​ಸ​ರಿ​ಸಲು ಸಲಹೆ ನೀಡಿ​ದ್ದಾರೆ. ಇಲ್ಲಿ ನಡೆದ 3ನೇ ಟೆಸ್ಟ್‌ಗೆ ಪ್ರೇಕ್ಷ​ಕ​ರಿಂದ ನೀರಸ ಪ್ರತಿ​ಕ್ರಿಯೆ ಕಂಡು​ಬಂದಿ​ದ್ದಕ್ಕೆ ಕೊಹ್ಲಿ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದರು.

ಇದನ್ನೂ ಓದಿ: ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಕ್ರಿಕೆಟ್ ಲವರ್ಸ್!

ಆಸ್ಪ್ರೇ​ಲಿ​ಯಾ​ದಲ್ಲಿ ಮೆಲ್ಬರ್ನ್‌, ಪರ್ತ್, ಸಿಡ್ನಿ, ಬ್ರಿಸ್ಬೇನ್‌ ಹಾಗೂ ಅಡಿ​ಲೇಡ್‌ನಲ್ಲಿ ಮಾತ್ರ ಟೆಸ್ಟ್‌ ಪಂದ್ಯ​ಗ​ಳನ್ನು ಆಯೋ​ಜಿ​ಸ​ಲಾ​ಗು​ತ್ತದೆ. ಅದೇ ರೀತಿ ಇಂಗ್ಲೆಂಡ್‌ನಲ್ಲಿ ಲಾರ್ಡ್ಸ್, ಓವಲ್‌, ಟ್ರೆಂಟ್‌ ಬ್ರಿಡ್ಜ್‌, ಓಲ್ಡ್‌ ಟ್ರಾಫರ್ಡ್‌, ಎಡ್ಜ್‌ಬಾಸ್ಟನ್‌, ಸೌಥಾಂಪ್ಟನ್‌ ಹಾಗೂ ಹೆಡಿಂಗ್ಲಿ ಕ್ರೀಡಾಂಗಣಗಳು ಪ್ರಮುಖ 7 ಟೆಸ್ಟ್‌ ಕೇಂದ್ರಗಳಾ​ಗಿವೆ. ಸದ್ಯ ಭಾರ​ತ​ದಲ್ಲಿ 15ಕ್ಕಿಂತ ಹೆಚ್ಚು ಕ್ರೀಡಾಂಗಣ​ಗ​ಳಲ್ಲಿ ಟೆಸ್ಟ್‌ ನಡೆ​ಸ​ಲಾ​ಗು​ತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷ!

‘ಟೆಸ್ಟ್‌ ಕ್ರಿಕೆಟ್‌ನ ರೋಚ​ಕತೆ ಉಳಿ​ಸ​ಬೇ​ಕಿ​ದ್ದರೆ, ನಮ್ಮಲ್ಲಿ ಗರಿಷ್ಠ 5 ಟೆಸ್ಟ್‌ ಕೇಂದ್ರಗಳನ್ನು ನಿಗದಿಪಡಿ​ಸ​ಬೇಕು. ಕೆಲ ನಗರಗಳಲ್ಲಿ ಪಂದ್ಯ​ ವೀಕ್ಷಣೆಗೆ ಅಭಿ​ಮಾ​ನಿ​ಗಳು ಆಗ​ಮಿ​ಸು​ತ್ತಾರೆ, ಕೆಲ ನಗರಗಳ​ಲ್ಲಿ ಆಗ​ಮಿ​ಸು​ವು​ದಿಲ್ಲ. 5 ಕ್ರೀಡಾಂಗ​ಣ​ಗ​ಳನ್ನು ನಿಗದಿ ಮಾಡಿ​ದರೆ, ಪ್ರವಾಸಿ ತಂಡಕ್ಕೂ ಎಲ್ಲಿ, ಎಂತಹ ಪಿಚ್‌ನಲ್ಲಿ ಆಡ​ಲಿ​ದ್ದೇವೆ ಎನ್ನುವ ಮಾಹಿ​ತಿ ಇರ​ಲಿದೆ. ಆಗ ಮತ್ತಷ್ಟುಸ್ಪರ್ಧಾ​ತ್ಮಕ ಪಂದ್ಯಗಳನ್ನು ನೋಡ​ಬ​ಹು​ದು’ ಎಂದು ಕೊಹ್ಲಿ ಹೇಳಿ​ದರು.

ಇದನ್ನೂ ಓದಿ: ಕೊಹ್ಲಿ ಫೋಟೋಗೆ ಅಭಿಮಾನಿಗಳ ಪ್ರತಿಕ್ರಿಯೆ; ಪ್ರಶ್ನೆ ಕೇಳಿದ BCCI ಸುಸ್ತು!

‘ಬಿ​ಸಿ​ಸಿಐ ಸರದಿ ಮಾದರಿ ಅನು​ಸ​ರಿ​ಸು​ತ್ತಿದೆ ನಿಜ. ಎಲ್ಲಾ ರಾಜ್ಯ ಸಂಸ್ಥೆಗಳಿ​ಗೂ ಆತಿಥ್ಯ ಅವ​ಕಾಶ ನೀಡ​ಲಾ​ಗು​ತ್ತಿದೆ. ಅದನ್ನು ಏಕ​ದಿನ, ಟಿ20 ಪಂದ್ಯ​ಗ​ಳಿಗೆ ಸೀಮಿತಗೊಳಿಸಿ, ಟೆಸ್ಟ್‌ ಪಂದ್ಯ​ಗ​ಳಿಗೆ ನಿರ್ದಿಷ್ಟಕ್ರೀಡಾಂಗಣಗಳನ್ನು ನಿಗದಿ ಪಡಿ​ಸ​ಬೇ​ಕಿದೆ’ ಎಂದು ಕೊಹ್ಲಿ ಅಭಿ​ಪ್ರಾ​ಯಿ​ಸಿ​ದ್ದಾ​ರೆ.

Follow Us:
Download App:
  • android
  • ios