ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಕ್ರಿಕೆಟ್ ಲವರ್ಸ್!

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ 3-0 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ರೋಹಿತ್,ಮಯಾಂಕ್, ಕೊಹ್ಲಿ, ಅಶ್ವಿನ್, ಶಮಿ ಹಾಗೂ ಜಡೇಜಾ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಟೀಂ ಇಂಡಿಯಾ ಈ ಅಮೋಘ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Twitter Reactions on Team India wins Test series against South Africa

ಬೆಂಗಳೂರು[ಅ.22]: ಏಕಪಕ್ಷೀಯವಾಗಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪುಣೆ ಹಾಗೂ ರಾಂಚಿ ಟೆಸ್ಟ್ ಪಂದ್ಯಗಳಲ್ಲಿ ಇನಿಂಗ್ಸ್ ಜಯ ದಾಖಲಿಸಿದೆ.

ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಈ ಜಯದೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ ಸತತ 11ನೇ ಟೆಸ್ಟ್ ಗೆಲುವು ದಾಖಲಿಸಿದೆ. ಈ ಸರಣಿ ಜಯದೊಂದಿಗೆ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇದರೊಂದಿಗೆ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲೂ ಒಟ್ಟು 240 ಅಂಕಗಳನ್ನು ಕಲೆಹಾಕುವ ಮೂಲಕ ಉಳಿದ 8 ತಂಡಗಳಿಂದ ಭಾರೀ ಅಂತರ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತ-ಬಾಂಗ್ಲಾ ಸರಣಿ ಅನು​ಮಾ​ನ!

ಸರಣಿಯ ಹೈಲೈಟ್ಸ್:

* ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 2 ಶತಕ ಹಾಗೂ ಒಂದು ದ್ವಿಶತಕ ಸಿಡಿಸುವ ಮೂಲಕ ಆರಂಭಿಕನಾಗಿ ಯಶಸ್ವಿ ಆಟಗಾರ ಎನಿಸಿಕೊಂಡರು. ಇದರ ಜತೆಗೆ 2 ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಕ್ಕೆ ರೋಹಿತ್ ಭಾಜನರಾದರು.

* ಮಯಾಂಕ್ ಅಗರ್’ವಾಲ್ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ದ್ವಿಶತವನ್ನಾಗಿ ಪರಿವರ್ತಿಸಿದರು. ಇನ್ನು ಪುಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಟೆಸ್ಟ್ ಆರಂಭಿಕನಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಮಾಡಿಕೊಂಡರು.

* ಕೊಹ್ಲಿ ವೈಯುಕ್ತಿಕ ಗರಿಷ್ಠ ಮೊತ್ತ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುಣೆ ಟೆಸ್ಟ್ ಪಂದ್ಯದಲ್ಲಿ ಅಜೇಯ 254 ರನ್ ಬಾರಿಸುವ ಮೂಲಕ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.

* ಕಾಡದ ಬುಮ್ರಾ ಅನುಪಸ್ಥಿತಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಆದರೆ ಬುಮ್ರಾ ಅನುಪಸ್ಥಿತಿ ಕಾಡದಂತೆ ಆಫ್ರಿಕಾ ತಂಡವನ್ನು ಮೂರು ಟೆಸ್ಟ್ ಟೆಸ್ಟ್ ಪಂದ್ಯಗಳಲ್ಲೂ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಬೌಲಿಂಗ್ ಪಡೆ ಯಶಸ್ವಿಯಾಯಿತು. ರವಿಚಂದ್ರನ್ ಅಶ್ವಿನ್[15], ಮೊಹಮ್ಮದ್ ಶಮಿ[13] ಹಾಗೂ ರವೀಂದ್ರ ಜಡೇಜಾ[13] ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೀಂ ಇಂಡಿಯಾದ ಈ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ವಿರಾಟ್ ಪಡೆಗೆ ಶುಭ ಕೋರಿದ್ದಾರೆ...

 

Latest Videos
Follow Us:
Download App:
  • android
  • ios