ರಾಂಚಿ(ಅ.22): ಸೌತ್ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 202 ರನ್ ಗೆಲುವು ಸಾಧಿಸಿದೆ. 3-0 ಅಂತರದಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ, ಐತಿಹಾಸಿಕ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಫೋಟೋ ವೈರಲ್ ಆಗಿದೆ. ಕೊಹ್ಲಿಯ ವಿಶೇಷ ಭಂಗಿಯ ಫೋಟೋ ಶೇರ್ ಮಾಡಿದ ಬಿಸಿಸಿಐ, ಕ್ಯಾಪ್ಶನ್ ನೀಡಿ ಎಂದಿತ್ತು. ಆದರೆ ಅಭಿಮಾನಿಗಳ ಸ್ಪಂದನೆಗೆ ಬಿಸಿಸಿಐ ಸುಸ್ತಾಗಿದೆ.

 

ಇದನ್ನೂ ಓದಿ: ಟೆಸ್ಟ್ ಸರಣಿ ಗೆಲುವಿನ ಶ್ರೇಯಸ್ಸು ರೋಹಿತ್‌ಗೆ ಸಲ್ಲಬೇಕು; ವಿರಾಟ್!

ರಾಂಚಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೋಟೋವನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಬಿಸಿಸಿಐ, ಕ್ಯಾಪ್ಶನ್ ನೀಡುವಂತೆ ಹೇಳಿತ್ತು. ಇದಕ್ಕೆ ಸ್ಪಂದಿಸಿದ ಕ್ರಿಕೆಟ್ ಅಭಿಮಾನಿಗಳು ಊಹೆಗೂ ಮೀರಿದ ಪ್ರತಿಕ್ರಿಯೆ ನೀಡಿದ್ದಾರೆ.