ಟೀಂ ಇಂಡಿಯಾ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷ!
ರಾಂಚಿ ಟೆಸ್ಟ್ ಪಂದ್ಯದಲ್ಲಿ ಭಾರತ, ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಸರಣಿ ವಶಪಡಿಸಿಕೊಂಡಿದೆ. ಟೀಂ ಇಂಡಿಯಾ ಗೆಲುವಿನ ಬಳಿಕ ರಾಂಚಿ ಬಾಯ್, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಟೀಂ ಇಂಡಿಯಾ ಜೊತೆ ಕಾಣಿಸಿಕೊಂಡಿದರು.
ರಾಂಚಿ(ಅ.22): ಸೌತ್ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 202 ರನ್ ಗೆಲವು ಸಾಧಿಸಿತು. ಈ ಮೂಲಕ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ರಾಂಚಿ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಹೋಮ್ ಟೌನ್ ಹೀರೋ, ಟೀಂ ಇಂಡಿಯಾದ ಶ್ರೇಷ್ಠ ಕ್ರಿಕೆಟಿಗ ಎಂ.ಎಸ್.ಧೋನಿ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ
ರಾಂಚಿ ಕ್ರೀಡಾಂಗಣಕ್ಕೆ ಆಗಮಿಸಿದ ಧೋನಿ, ನೇರವಾಗಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ತೆರಳಿ ಕೊಹ್ಲಿ ಬಾಯ್ಸ್ ಜೊತೆ ಮಾತುಕತೆ ನಡೆಸಿದ್ದಾರೆ. ಧೋನಿ ಆಗಮನವನ್ನು ಬಿಸಿಸಿಐ ಅಧೀಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದೆ. ಶಬಬ್ಬಾಶ್ ನದೀಮ್ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋ ಪೋಸ್ಟ್ ಮಾಡಿರುವ ಬಿಸಿಸಿಐ, ಇಲ್ಲಿ ಯಾರಿದ್ದಾರೆ ನೋಡಿ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸಚಿನ್ ಸಾಮರ್ಥ್ಯ ಟೆಸ್ಟ್ ಮಾಡಿದ್ದ ಕಪಿಲ್!
ಬಿಸಿಸಿಐ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಟ್ವೀಟ್ ಮಾಡಿದ್ದಾರೆ. ಸರಣಿ ಗೆಲವಿನ ಬಳಿಕ ಭಾರತದ ದಿಗ್ಗಜ ಕ್ರಿಕೆಟಿಗ ತಂಡದ ಜೊತೆ ಕಾಣಿಸಿಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಟಿ20 ಸರಣಿ: ಕೊಹ್ಲಿಗೆ ವಿಶ್ರಾಂತಿ?
2014ರಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಿಂದ ವಿದಾಯ ಹೇಳಿರುವ ಧೋನಿ, ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರೀಯರಾಗಿದ್ದಾರೆ. ಆದರೆ 2019ರ ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಶ್ರಾಂತಿಗೆ ಜಾರಿದ್ದರು. ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದ ಧೋನಿ, ಭಾರತೀಯ ಸೇನೆ ಜೊತೆ ಸೇವೆ ಸಲ್ಲಿಸಿದ್ದರು. ಇನ್ನು ತವರಿನ ಸೌತ್ ಆಫ್ರಿಕಾ ಸರಣಿಗೂ ಧೋನಿ ಅಲಭ್ಯರಾಗಿದ್ದರು.
ನವೆಂಬರ್‌ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿ ಆರಂಭವಾಗಲಿದೆ. ಇದಕ್ಕಾಗಿ ಅಕ್ಟೋಬರ್ 24 ರಂದ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಂಬೈನಲ್ಲಿ ಸಭೆ ಸೇರಿ ತಂಡ ಆಯ್ಕೆ ಮಾಡಲಿದೆ. ಸದ್ಯ ಧೋನಿ ಲಭ್ಯತೆ ಸೂಚನೆ ನೀಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಧೋನಿ ಆಯ್ಕೆಯಾಗೋ ಸಾಧ್ಯತೆ ಇದೆ.