PCB vs BCCI pension policy: ಪಾಕಿಸ್ತಾನದ ಶಾಹಿದ್ ಆಫ್ರಿದಿ, ಭಾರತದ ವಿನೋದ್ ಕಾಂಬ್ಳಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿದ್ದಾರೆ. ಈ ಇಬ್ಬರು ಮಾಜಿ ಆಟಗಾರರು ಪಡೆದುಕೊಳ್ಳುವ ಪಿಂಚಣಿ ಎಷ್ಟು?
ನವದೆಹಲಿ: ದೇಶಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಆಟಗಾರರಿಗೆ ಆಯಾ ದೇಶದ ಕ್ರಿಕೆಟ್ ಮಂಡಳಿ ಗೌರವಧನವಾಗಿ ಮಾಸಿಕ ಪಿಂಚಣಿಯನ್ನು ನೀಡುತ್ತವೆ. ಮಾಜಿ ಕ್ರಿಕೆಟ್ ಆಟಗಾರರು ತಮ್ಮ ದೇಶದ ಕ್ರಿಕೆಟ್ ಮಂಡಳಿಗಳಿಂದ ಪಿಂಚಣಿ ಪಡೆಯುತ್ತಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅವರು, ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರಿಗಿಂತ ಕಡಿಮೆ ಪಿಂಚಣಿ ಪಡೆಯುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (PCB) ಶಾಹಿದ್ ಆಫ್ರಿದಿ ಪಿಂಚಣಿ ಪಡೆದುಕೊಂಡ್ರೆ, ಬಿಸಿಸಿಐನಿಂದ ವಿನೋದ್ ಕಾಂಬ್ಳಿ ಪಿಂಚಣಿ ಹಣವನ್ನು ಪಡೆಯುತ್ತಾರೆ.
ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಆಟಗಾರರು ಆಡಿದ ಟೆಸ್ಟ್ ಮ್ಯಾಚ್ ಆಧಾರದ ಮೇಲೆ ಪಿಂಚಣಿ ಹಣ ನಿರ್ಧರಿಸುತ್ತದೆ. ಶಾಹಿದ್ ಆಫ್ರಿದಿ ತನ್ನ ಕೆರಿಯರ್‌ನಲ್ಲಿ 27 ಟೆಸ್ಟ್ ಮ್ಯಾಚ್‌ಗಳನ್ನು ಆಡಿದ್ದಾರೆ. ಈ ಪಂದ್ಯಗಳ ಆಧಾರದ ಮೇಲೆ ಶಾಹಿದ್ ಆಫ್ರಿದಿ, 1,54,000 ಪಾಕಿಸ್ತಾನಿ ರೂಪಾಯಿ ಪಿಂಚಣಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಾರೆ. ಈ ಹಣ ಭಾರತದಲ್ಲಿ ಅಂದಾಜು 47,000 ರೂಪಾಯಿ ಆಗುತ್ತದೆ.
ಭಾರತೀಯ ಕ್ರಿಕೆಟ್ ಕಂಟ್ರೋಲ್ ಬೋರ್ಡ್ (BCCI) ತನ್ನ ಮಾಜಿ ಕ್ರೀಡಾಪಟುಗಳಿಗೆ ಪಿಂಚಣಿಯನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ನೀಡುತ್ತದೆ. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಕೆರಿಯರ್‌ನಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ ಆಧಾರದ ಮೇಲೆ ಬಿಸಿಸಿಐನಿಂದ ವಿನೋದ್ ಕಾಂಬ್ಳಿ ಪ್ರತಿ ತಿಂಗಳು 30,000 ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳುತ್ತಾರೆ. ವಿನೋದ್ ಕಾಂಬ್ಳಿ ಅವರಿಗಿಂತಲೂ ಶಾಹಿದ್ ಆಫ್ರಿದಿ 17 ಸಾವಿರ ರೂಪಾಯಿ ಹೆಚ್ಚು ಪಿಂಚಣಿ ಸ್ವೀಕರಿಸುತ್ತಾರೆ.
ಪಾಕಿಸ್ತಾನದಲ್ಲಿ ಕ್ರಿಕೆಟಿಗರ ಪಿಂಚಣಿಯನ್ನು ನಿರ್ಧರಿಸುವ ಮಾನದಂಡಗಳು
- ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ನೀಡುವ ಪಿಂಚಣಿಯನ್ನು ಮೂರು ಶ್ರೇಣಿಗಳಲ್ಲಿ ವಿಭಾಗಿಸುತ್ತದೆ.
- ಪಾಕಿಸ್ತಾನದಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರನಿಗೆ 1,42,000 ಪಾಕಿಸ್ತಾನ ರೂಪಾಯಿ (43,000 ಭಾರತದ ರೂಪಾಯಿ) ನೀಡಲಾಗುತ್ತದೆ.
- ಪಾಕಿಸ್ತಾನದಲ್ಲಿ 11 ರಿಂದ 20 ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರನಿಗೆ 1,48,000 ಪಾಕಿಸ್ತಾನ ರೂಪಾಯಿ ( 45,121 ಭಾರತದ ರೂಪಾಯಿ) ನೀಡಲಾಗುತ್ತದೆ.
- 21ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರನಿಗೆ 1,54,000 ಪಾಕಿಸ್ತಾನ ರೂಪಾಯಿ (47,000 ಭಾರತದ ರೂಪಾಯಿ) ಪಿಂಚಣಿ ನೀಡಲಾಗುತ್ತದೆ.
ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್ ಸಿಂಗ್‌ಗೆ ಬಿಸಿಸಿಐನಿಂದ ಸಿಗುವ ತಿಂಗಳ ಪೆನ್ಷನ್ ಎಷ್ಟು?
ಭಾರತದಲ್ಲಿ ಕ್ರಿಕೆಟಿಗರ ಪಿಂಚಣಿಯನ್ನು ನಿರ್ಧರಿಸುವ ಮಾನದಂಡಗಳು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಟಗಾರರ ವೃತ್ತಿಜೀವನ ಮತ್ತು ಆಡಿದ ಪಂದ್ಯಗಳ ಸಂಖ್ಯೆಯನ್ನು ಆಧರಿಸಿ ಪಿಂಚಣಿ ಮೊತ್ತವನ್ನು ನಿರ್ಧರಿಸುತ್ತದೆ. 25 ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ ಪಿಂಚಣಿ ಪಡೆಯಲು ಅರ್ಹನಾಗುತ್ತಾನೆ
- 25 ರಿಂದ 49 ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರ ಮಾಸಿಕ 30,000 ರೂಪಾಯಿ ಪಿಂಚಣಿ ಪಡೆಯುತ್ತಾರೆ.
- 50 ರಿಂದ 74 ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರ ಮಾಸಿಕ 45,000 ರೂಪಾಯಿ ಪಿಂಚಣಿ ಪಡೆದುಕೊಳ್ಳುತ್ತಾರೆ.
- 75ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರನಿಗೆ ಮಾಸಿಕ 52,500 ರೂಪಾಯಿ ಪಿಂಚಣಿ ಸಿಗುತ್ತದೆ.
ಇದನ್ನು ಓದಿ: ನಾನು ಯಾರ ಬಳಿಯೂ ಬಿಕ್ಷೆ ಬೇಡಲ್ಲ ಅಂದಿದ್ದ ವಿನೋದ್ ಕಾಂಬ್ಳಿ!
