ಮೊದಲು ಬ್ಯಾಟ್‌ ಮಾಡಿದ ವಿದರ್ಭ, ಕರ್ನಾಟಕದ ಮಾರಕ ದಾಳಿಗೆ ತುತ್ತಾಗಿ 44.5 ಓವರ್‌ಗಳಲ್ಲಿ 173ಕ್ಕೆ ಸರ್ವಪತನ ಕಂಡಿತು. ಶುಭಂ ದುಬೆ 41, ಯಶ್‌ ಕದಂ 38, ಅಕ್ಷಯ್‌ ವಾಡ್ಕರ್‌ 32 ರನ್‌ ಕೊಡುಗೆ ನೀಡಿದರು. ರಾಜ್ಯದ ಪರ ವೈಶಾಕ್‌ 4 ವಿಕೆಟ್‌ ಎಗರಿಸಿದರೆ, ಮನೋಜ್‌ ಭಾಂಡ್ಗೆ, ಸುಚಿತ್‌ ತಲಾ 2 ವಿಕೆಟ್‌ ಪಡೆದರು.

ರಾಜ್‌ಕೋಟ್‌(ಡಿ.12): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ 5ನೇ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೋಮವಾರ ವಿದರ್ಭ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ 7 ವಿಕೆಟ್‌ ಭರ್ಜರಿ ಗೆಲುವು ಲಭಿಸಿತು. ಇದರೊಂದಿಗೆ ರಾಜ್ಯ ತಂಡ ಸತತ 2ನೇ ಬಾರಿ ಸೆಮೀಸ್‌ಗೆ ಪ್ರವೇಶಿಸಿತು.

ಮೊದಲು ಬ್ಯಾಟ್‌ ಮಾಡಿದ ವಿದರ್ಭ, ಕರ್ನಾಟಕದ ಮಾರಕ ದಾಳಿಗೆ ತುತ್ತಾಗಿ 44.5 ಓವರ್‌ಗಳಲ್ಲಿ 173ಕ್ಕೆ ಸರ್ವಪತನ ಕಂಡಿತು. ಶುಭಂ ದುಬೆ 41, ಯಶ್‌ ಕದಂ 38, ಅಕ್ಷಯ್‌ ವಾಡ್ಕರ್‌ 32 ರನ್‌ ಕೊಡುಗೆ ನೀಡಿದರು. ರಾಜ್ಯದ ಪರ ವೈಶಾಕ್‌ 4 ವಿಕೆಟ್‌ ಎಗರಿಸಿದರೆ, ಮನೋಜ್‌ ಭಾಂಡ್ಗೆ, ಸುಚಿತ್‌ ತಲಾ 2 ವಿಕೆಟ್‌ ಪಡೆದರು.

Pro Kabaddi League: ಯುಪಿಗೆ ಗುದ್ದಿ ಕೊನೆಗೂ ಗೆದ್ದ ಬೆಂಗಳೂರು ಬುಲ್ಸ್

ಸುಲಭ ಗುರಿಯನ್ನು ರಾಜ್ಯ ತಂಡ 40.3 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ಆರ್‌.ಸಮರ್ಥ್‌ ಔಟಾಗದೆ 72 ರನ್‌ ಸಿಡಿಸಿದರೆ, ನಾಯಕ ಮಯಾಂಕ್‌ 51, ನಿಕಿನ್‌ ಜೋಸ್‌ 31 ರನ್‌ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಸ್ಕೋರ್‌: ವಿದರ್ಭ 44.5 ಓವರ್‌ಗಳಲ್ಲಿ 173/10(ಶುಭಂ 41, ಯಶ್‌ 38, ವೈಶಾಕ್‌ 4-44)
ಕರ್ನಾಟಕ 40.3 ಓವರ್‌ಗಳಲ್ಲಿ 177/3(ಸಮರ್ಥ್‌ 72, ಮಯಾಂಕ್‌ 51, ಹರ್ಷ್‌ 2-32)

ತಮಿಳ್ನಾಡು, ಹರ್ಯಾಣ ರಾಜಸ್ಥಾನ ಸೆಮೀಸ್‌ಗೆ

ಸೋಮವಾರ ಮತ್ತೆ 3 ಕ್ವಾರ್ಟರ್‌ ಪಂದ್ಯಗಳಲ್ಲಿ ರಾಜಸ್ಥಾನ, ಹರ್ಯಾಣ, ತಮಿಳುನಾಡು ಜಯಗಳಿಸಿದವು. ಕೇರಳ ವಿರುದ್ಧ ರಾಜಸ್ಥಾನ 200 ರನ್‌ ಗೆಲುವು ಸಾಧಿಸಿದರೆ, ಹರ್ಯಾಣಕ್ಕೆ ಬಂಗಾಳ ವಿರುದ್ಧ 4 ವಿಕೆಟ್‌ ಜಯ ಲಭಿಸಿತು. ಮುಂಬೈಯನ್ನು 7 ವಿಕೆಟ್‌ಗಳಿಂದ ಮಣಿಸಿ ತಮಿಳುನಾಡು ಸೆಮೀಸ್‌ಗೇರಿತು.

ಜನರು ಈ ಕ್ರಿಕೆಟಿನಲ್ಲಿ ಮುಂದಿನ ಯುವರಾಜ್ ಸಿಂಗ್ ನಿರೀಕ್ಷಿಸುತ್ತಿದ್ದಾರೆ: ಸನ್ನಿ

ನಾಡಿದ್ದು ಸೆಮೀಸ್‌ನಲ್ಲಿ ಕರ್ನಾಟಕ-ರಾಜಸ್ಥಾನ

ಕಳೆದ ಬಾರಿ ಸೆಮೀಸ್‌ನಲ್ಲಿ ಸೋತು ಹೊರಬಿದ್ದಿದ್ದ ಕರ್ನಾಟಕ ಈ ಬಾರಿ ಸೆಮಿಫೈನಲ್‌ನಲ್ಲಿ ಡಿ.14ರಂದು ರಾಜಸ್ಥಾನ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಡಿ.13ರಂದು ಹರ್ಯಾಣ ಹಾಗೂ ತಮಿಳುನಾಡು ತಂಡಗಳು ಪರಸ್ಪರ ಸೆಣಸಾಡಲಿವೆ.

ಅಂಡರ್‌-19 ಏಷ್ಯಾಕಪ್‌: ಇಂದು ಭಾರತ-ನೇಪಾಳ

ದುಬೈ: ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿರುವ 8 ಬಾರಿ ಚಾಂಪಿಯನ್‌ ಭಾರತ, ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ನೇಪಾಳ ವಿರುದ್ಧ ಸೆಣಸಾಡಲಿದೆ.

ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸೋಲುಣಿಸಿ, 2ನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನಕ್ಕೆ ಶರಣಾಗಿರುವ ಟೀಂ ಇಂಡಿಯಾ ಸದ್ಯ ‘ಎ’ ಗುಂಪಿನಲ್ಲಿ 2 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಪಾಕ್‌ ಈಗಾಗಲೇ 2 ಜಯದೊಂದಿಗೆ 4 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಗುಂಪಿನಿಂದ ಅಗ್ರ-2 ತಂಡಗಳು ಸೆಮೀಸ್‌ಗೇರಲಿದ್ದು, ಭಾರತಕ್ಕೆ ಈ ಅವಕಾಶ ಸಿಗಬೇಕಿದ್ದರೆ ನೇಪಾಳ ವಿರುದ್ಧ ಗೆಲ್ಲಲೇಬೇಕು. ಒಂದು ವೇಳೆ ಸೋತರೆ, ಅತ್ತ ಪಾಕ್‌ ವಿರುದ್ಧ ಆಫ್ಘನ್‌ ಗೆಲ್ಲಬಾರದು. ಹೀಗಾದರೆ ಭಾರತಕ್ಕೆ ಸೆಮೀಸ್‌ಗೇರಬಹುದು.

ಪಂದ್ಯ: ಬೆಳಗ್ಗೆ 11ಕ್ಕೆ