Pro Kabaddi League: ಯುಪಿಗೆ ಗುದ್ದಿ ಕೊನೆಗೂ ಗೆದ್ದ ಬೆಂಗಳೂರು ಬುಲ್ಸ್

ಆರಂಭದಲ್ಲೇ ಎದುರಾದ 2-7ಅಂಕದ ಹಿನ್ನಡೆ ಹಿಮ್ಮೆಟ್ಟಿಸಿದ ಬುಲ್ಸ್‌ ಬಳಿಕ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ಮೊದಲಾರ್ಧಕ್ಕೆ 21-14ರಿಂದ ಮೇಲುಗೈ ಸಾಧಿ ಸಿದ್ದ ಬುಲ್ಸ್‌ ಕೊನೆ 3 ನಿಮಿಷವಿರುವಾಗ 8 ಅಂಕ ಮುಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಯೋಧಾಸ್ ಅಬ್ಬರಿಸಿ ಗೆಲುವಿನತ್ತ ಸಾಗಿದರೂ ಬುಲ್ಸ್‌ನ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ವಿಕಾಸ್ ಖಂಡೋಲ 11, ಭರತ್ 10 ರೈಡ್‌ಅಂಕಗಳಿಸಿದರು

Pro Kabaddi League Bengaluru Bulls register first victory after 4 Consecutive defeat kvn

ಬೆಂಗಳೂರು(ಡಿ.12): ಭಾರೀ ಪೈಪೋಟಿ, ರೋಚಕ ತಿರುವುಗಳಿಗೆ ಸಾಕ್ಷಿಯಾದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಯುಪಿ ಯೋಧಾಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-36 ಅಂಕಗಳ ಗೆಲುವು ಸಾಧಿಸಿದೆ. 4 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಬುಲ್ಸ್‌ ಟೂರ್ನಿಯ ಮೊದಲ ಜಯ ದಾಖಲಿಸಿದೆ.

ಆರಂಭದಲ್ಲೇ ಎದುರಾದ 2-7ಅಂಕದ ಹಿನ್ನಡೆ ಹಿಮ್ಮೆಟ್ಟಿಸಿದ ಬುಲ್ಸ್‌ ಬಳಿಕ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ಮೊದಲಾರ್ಧಕ್ಕೆ 21-14ರಿಂದ ಮೇಲುಗೈ ಸಾಧಿ ಸಿದ್ದ ಬುಲ್ಸ್‌ ಕೊನೆ 3 ನಿಮಿಷವಿರುವಾಗ 8 ಅಂಕ ಮುಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಯೋಧಾಸ್ ಅಬ್ಬರಿಸಿ ಗೆಲುವಿನತ್ತ ಸಾಗಿದರೂ ಬುಲ್ಸ್‌ನ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ವಿಕಾಸ್ ಖಂಡೋಲ 11, ಭರತ್ 10 ರೈಡ್‌ಅಂಕಗಳಿಸಿದರು.

ಜೈಪುರಕ್ಕೆ ಜಯ

ಸೋಮವಾರದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್‌ಸ್ ವಿರುದ್ಧ ಜೈಪುರ 35-32 ಅಂಕಗಳ ರೋಚಕ ಗೆಲುವು ಸಾಧಿಸಿತು. ಅರ್ಜುನ್ 15 ಅಂಕ ಸಂಪಾದಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಇದು ಜೈಪುರಕ್ಕೆ ಮೊದಲ ಗೆಲುವು. ಜೈಂಟ್‌ಸ್ ಸತತ 2ನೇ ಪಂದ್ಯದಲ್ಲೂ ಸೋಲನುಭವಿಸಿತು

ಇಂದಿನ ಪಂದ್ಯ: ಬೆಂಗಾಲ್ ವಾರಿಯರ್ಸ್‌-ಪಾಟ್ನಾ ಪೈರೇಟ್ಸ್‌
ಸಮಯ: ರಾತ್ರಿ 8ಕ್ಕೆ

ಕಿರಿಯರ ಹಾಕಿ ವಿಶ್ವಕಪ್‌: ಭಾರತ-ಡಚ್‌ ಕ್ವಾರ್ಟರ್‌

ಕೌಲಾಲಂಪುರ: ಎಫ್‌ಐಎಚ್‌ ಕಿರಿಯರ ಹಾಕಿ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮಂಗಳವಾರ ಭಾರತ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. 2001 ಹಾಗೂ 2016ರಲ್ಲಿ ಚಾಂಪಿಯನ್‌ ಆಗಿರುವ ಭಾರತ ಈ ಬಾರಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ‘ಸಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2ನೇ ಸ್ಥಾನಿಯಾಗಿ ಅಂತಿಮ 8ರ ಘಟ್ಟ ಪ್ರವೇಶಿಸಿದೆ.

ಭಾರತ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

ಆರಂಭಿಕ ಪಂದ್ಯದಲ್ಲಿ ಕೊರಿಯಾವನ್ನು 4-1ರಿಂದ ಮಣಿಸಿದ ಭಾರತ, ಸ್ಪೇನ್ ವಿರುದ್ಧ 1-4ರಿಂದ ಪರಾಭವಗೊಂಡಿತ್ತು. ನಿರ್ಣಾಯಕ ಪಂದ್ಯದಲ್ಲಿ ಕೆನಡಾವನ್ನು 10-1ರಿಂದ ಸೋಲಿಸಿತ್ತು. ಅತ್ತ 2 ಬಾರಿ ರನ್ನರ್‌-ಅಪ್‌ ನೆದರ್‌ಲೆಂಡ್ಸ್‌ ‘ಡಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು, 1 ಡ್ರಾದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಕಳೆದ ಆವೃತ್ತಿಯಲ್ಲಿ ಭಾರತ 4ನೇ ಸ್ಥಾನಿಯಾಗಿತ್ತು.

ಎಲೆಕ್ಷನ್‌ಗೆ ಬ್ರಿಜ್‌ ಆಪ್ತರ ಸ್ಪರ್ಧೆ ಬೇಡ: ರೆಸ್ಲರ್ಸ್‌

ನವದೆಹಲಿ: ಡಿ.21ಕ್ಕೆ ನಿಗದಿಯಾಗಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಆಪ್ತರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ಗೆ ಮನವಿ ಮಾಡಿದ್ದಾರೆ.

ಭಜರಂಗ್‌, ಸಾಕ್ಷಿ ಮಲಿಕ್‌ ಅವರು ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದು, ಬ್ರಿಜ್‌ ಆಪ್ತರಿಗೆ ಸ್ಪರ್ಧೆಗೆ ಅವಕಾಶ ನೀಡಲ್ಲ ಎಂದು ಭರವಸೆ ಸಿಕ್ಕ ಬಳಿಕವೇ ಪ್ರತಿಭಟನೆ ಹಿಂಪಡೆದಿದ್ದೇವೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಂಜಯ್‌ ಸಿಂಗ್‌ಗೆ ಅವಕಾಶ ನೀಡಬಾರದು ಎಂದಿದ್ದಾರೆ. ಅವಕಾಶ ನೀಡಿದರೆ ಶೀಘ್ರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಎಚ್ಚರಿಸಿದ್ದಾರೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಸಂಜಯ್‌ ಜೊತೆಗೆ 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಅನಿತಾ ಶೊರೇನ್ ಕೂಡಾ ಇದ್ದಾರೆ.

ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವೇಗದಲ್ಲೇ ಮರೆಯಾದ ಯಂಗ್‌ಸ್ಟರ್ಸ್‌ಗಳಿವರು..!

ಪ್ಯಾರಾ ಗೇಮ್ಸ್‌: ರಾಜ್ಯಕ್ಕೆ ಅಥ್ಲೆಟಿಕ್ಸ್‌ನಲ್ಲಿ 8 ಪದಕ

ನವದೆಹಲಿ: ಖೇಲೋ ಇಂಡಿಯಾ ಪ್ಯಾರಾ ಗೇಮ್‌ಸ್ನಲ್ಲಿ ಸೋಮವಾರ ಕರ್ನಾಟಕ ಅಥ್ಲೆಟಿಕ್‌ಸ್ನಲ್ಲಿ 8 ಪದಕ ಗೆದ್ದಿದೆ. ಮಹಿಳಾ 1500 ಮೀ. ಟಿ20ಯಲ್ಲಿ ರಾಧಾ ಚಿನ್ನ, ರಕ್ಷಿತಾ ರಾಜು ಬೆಳ್ಳಿ ಗೆದ್ದರು. ಪುರುಷರ ಶಾಟ್‌ಪುಟ್ ಹಾಗೂ ಜಾವೆಲಿನ್‌ನಲ್ಲಿ ಲೋಹಿತ್ 2 ಚಿನ್ನ ಗೆದ್ದರು. ಪುರುಷರ 1500 ಮೀ. ಟಿ12ನಲ್ಲಿ ಶರತ್, 1500 ಮೀ. ಟಿ11 ವಿಭಾಗದಲ್ಲಿ ಕೇಶವ ಮೂರ್ತಿ ಬೆಳ್ಳಿ, ಭೀಮಪ್ಪ ಪೂಜಾರಿ ಕಂಚುಜಯಿಸಿದರು.
 

Latest Videos
Follow Us:
Download App:
  • android
  • ios