Asianet Suvarna News Asianet Suvarna News

ಜನರು ಈ ಕ್ರಿಕೆಟಿನಲ್ಲಿ ಮುಂದಿನ ಯುವರಾಜ್ ಸಿಂಗ್ ನಿರೀಕ್ಷಿಸುತ್ತಿದ್ದಾರೆ: ಸನ್ನಿ

"ಈಗವರು ಭಾರತ ತಂಡದ ಭಾಗವಾಗಿದ್ದಾರೆ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗ ಜನರು ಅವರಲ್ಲಿ ಯುವರಾಜ್ ಸಿಂಗ್ ಅವರನ್ನು ನಿರೀಕ್ಷಿಸುತ್ತಿದ್ದಾರೆ. ರಿಂಕು ಸಿಂಗ್-ಯುವರಾಜ್ ಸಿಂಗ್. ಹೀಗಾಗಿ ಭಾರತ ತಂಡಕ್ಕೆ ಯುವರಾಜ್ ಸಿಂಗ್ ನೀಡಿದ ಕೊಡುಗೆಯಲ್ಲಿ ಒಂದು ಪರ್ಸೆಂಟ್ ನೀವು ನೀಡಿದರೂ ಸಾಕು" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

People are expecting Rinku Singh to be India next Yuvraj Singh says Sunil Gavaskar kvn
Author
First Published Dec 11, 2023, 6:06 PM IST

ಮುಂಬೈ(ಡಿ.11): ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ರಿಂಕು ಸಿಂಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ತಮ್ಮ ಮ್ಯಾಚ್ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಾ ಮುನ್ನಗ್ಗುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ರಿಂಕು ಅವರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 

ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಮಿಂಚಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿರುವ ರಿಂಕು ಸಿಂಗ್, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಭರ್ಜರಿ ಪ್ರದರ್ಶನದ ಮೂಲಕ ತಮ್ಮ ಹೆಜ್ಜೆಗುರುತು ದಾಖಲಿಸುತ್ತಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್‌ನ ಯಶ್ ದಯಾಳ್ ಬೌಲಿಂಗ್‌ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದರು. ಇದೀಗ ರಿಂಕು ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ರಿಂಕು ಅವರ ದೊಡ್ಡ ಶಕ್ತಿಯೇನೆಂದರೆ ಅವರು ಅವರ ಆಟದ ಮೇಲೆ ವಿಶ್ವಾಸ ಇಟ್ಟುಕೊಂಡಿರುವುದು ಎಂದು ಹೇಳಿದ್ದಾರೆ.

Good News: ನಿವೃತ್ತಿ ವಾಪಾಸ್ ಪಡೆದು ಟಿ20 ವಿಶ್ವಕಪ್ ಆಡಲು ತೀರ್ಮಾನಿಸಿದ ದಕ್ಷಿಣ ಆಫ್ರಿಕಾದ ಆರ್‌ಸಿಬಿ ಕ್ರಿಕೆಟಿಗ..!

"ಪ್ರತಿಯೊಬ್ಬರಿಗೂ ಪ್ರತಿಭೆ ಎನ್ನುವುದು ಇದ್ದೇ ಇರುತ್ತದೆ. ನೀವು ಕ್ರೀಡೆಯನ್ನು ಪ್ರೀತಿಸಬಹುದು. ನೀವು ಪ್ರತಿದಿನ ಆಡಲೂಬಹುದು. ಆದರೆ ಕೇವಲ ಪ್ರತಿಭೆಯಿಂದಲೇ ಎಲ್ಲವೂ ಆಗುವುದಿಲ್ಲ. ಆದರೆ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ಈ ಕಾರಣಕ್ಕಾಗಿಯೇ ಅವರು ಕಳೆದ 2-3 ವರ್ಷಗಳಿಂದ ಈ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ನಲ್ಲೂ ಕೂಡಾ ಕೆಲವು ಕಾಲ ತಂಡದ ಒಳಗೆ ಹೊರಗೆ ಆಗುತ್ತಿದ್ದರು. ಕೊನೆಗೆ ಒಮ್ಮೆ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ" ಎಂದು ಸನ್ನಿ ಹೇಳಿದ್ದಾರೆ.

"ಈಗವರು ಭಾರತ ತಂಡದ ಭಾಗವಾಗಿದ್ದಾರೆ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗ ಜನರು ಅವರಲ್ಲಿ ಯುವರಾಜ್ ಸಿಂಗ್ ಅವರನ್ನು ನಿರೀಕ್ಷಿಸುತ್ತಿದ್ದಾರೆ. ರಿಂಕು ಸಿಂಗ್-ಯುವರಾಜ್ ಸಿಂಗ್. ಹೀಗಾಗಿ ಭಾರತ ತಂಡಕ್ಕೆ ಯುವರಾಜ್ ಸಿಂಗ್ ನೀಡಿದ ಕೊಡುಗೆಯಲ್ಲಿ ಒಂದು ಪರ್ಸೆಂಟ್ ನೀವು ನೀಡಿದರೂ ಸಾಕು" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವೇಗದಲ್ಲೇ ಮರೆಯಾದ ಯಂಗ್‌ಸ್ಟರ್ಸ್‌ಗಳಿವರು..!

ಸದ್ಯ ರಿಂಕು ಸಿಂಗ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಇದೀಗ ಎರಡನೇ ಟಿ20 ಪಂದ್ಯವು ಡಿಸೆಂಬರ್ 12ರಂದು ನಡೆಯಲಿದೆ.
 

Follow Us:
Download App:
  • android
  • ios