ಐರ್ಲೆಂಡ್ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಆಟ ನೋಡ್ಬಹುದು ಅಂತ ಅಭಿಮಾನಿಗಳು ಕಾತತರಾಗಿದ್ದರು. ಆದ್ರೆ ಅವರಿಗೆ ನಿರಾಸೆಯಾಗಿದೆ. ವೈಭವ್ ಕಣಕ್ಕಿಳಿಯದಿರಲು ಕಾರಣ ಏನು ಎಂಬುದು ಈಗ ಬಹಿರಂಗವಾಗಿದೆ.

ಐರ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಮೈದಾನಕ್ಕಿಳಿಯಲಿಲ್ಲ. ಟೀಂ ಇಲವೆನ್ ನಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕಿರಲಿಲ್ಲ. ಟಿ20 ವಿಶ್ವಕಪ್ ಚಾಂಪಿಯನ್ ಭಾರತ ಎರಡು ಪಂದ್ಯಗಳ ಸರಣಿಯನ್ನು 0-2 ಅಂತರದಿಂದ ಸೋತಿದೆ. ಎರಡನೇ ಪಂದ್ಯವನ್ನು ಭಾರತ ಕೇವಲ ಒಂದು ರನ್ನಿಂದ ಸೋತಿದ್ದು, ಯುವ ಬ್ಯಾಟ್ಸ್ಮನ್ಗೆ ಅವಕಾಶ ನಿರಾಕರಿಸುವ ನಿರ್ಧಾರವನ್ನು ಕ್ರಿಕೆಟ್ ಫ್ಯಾನ್ಸ್ ವಿರೋಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಿಯಾನ್ ಟೆನ್ ಡೋಸ್ಚೇಟ್ ಮಹತ್ವದ ಹೇಳಿಕೆ

ಐರ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ ಏಕೆ ಆಡ್ಲಿಲ್ಲ ಎಂಬುದನ್ನು ಭಾರತದ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಸ್ಪಷ್ಟಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆದ್ರೆ ಟೀಂನಲ್ಲಿ ಸ್ಥಾನ ಪಡೆಯಲು ನಿಗದಿತ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ ಎಂದಿದ್ದಾರೆ. ರಿಯಾನ್ ಟೆನ್ ಡೋಸ್ಚೇಟ್ ಪ್ರಕಾರಮ ವೈಭವ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಮೂರು ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ಪ್ರಮುಖ ಆಟಗಾರ ಸಂಜು ಸ್ಯಾಮ್ಸನ್. ಅವರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಆಟಗಾರರ ಆತ್ಮವಿಶ್ವಾಸ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬ ಆಟಗಾರನು ಸ್ಥಿರವಾದ ಅವಕಾಶಗಳನ್ನು ಪಡೆಯುತ್ತಾನೆ ಅಂತ ಸಹಾಯಕ ಕೋಚ್ ಹೇಳಿದ್ದಾರೆ.

ಐರ್ಲೆಂಡ್ ಎದುರು ಟಿ20 ಸರಣಿ ಸೋಲುತ್ತಿದ್ದಂತೆಯೇ ಹೆಡ್‌ ಕೋಚ್ ಗೌತಮ್ ಗಂಭೀರ್‌ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ ಐಸ್‌ಲ್ಯಾಂಡ್!

ವೈಭವ್ , ಪ್ರತಿಭೆಗೆ ತಂಡದ ಆಡಳಿತ ಮಂಡಳಿ ಸಂಪೂರ್ಣವಾಗಿ ಪ್ರಭಾವಿತವಾಗಿದೆ. ಆದ್ರೆ ಆತುರದಲ್ಲಿ ನಿರ್ಧಾರ ತೆಗೆದುಕೊಳ್ತಿಲ್ಲ. ನಾವೆಲ್ಲರೂ ವೈಭವ್ ಆಟವನ್ನು ನೋಡಲು ಉತ್ಸುಕರಾಗಿದ್ದೇವೆ. ಅವರು ತುಂಬಾ ವಿಶೇಷ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರು ಇತರ ಆಟಗಾರರು ತಮ್ಮ ಚೊಚ್ಚಲ ಪಂದ್ಯ ಆಡುವ ಮೊದಲು ಅನುಭವಿಸಿದ ಅದೇ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ ಎಂದಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಅವಕಾಶ ಸಾಧ್ಯತೆ

ಐರ್ಲೆಂಡ್ ಎದುರು ಹೀನಾಯ ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್!

ವೈಭವ್ ಸೂರ್ಯವಂಶಿ ಐಪಿಎಲ್ 2026 ರಲ್ಲಿ 230 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ 776 ರನ್ ಗಳಿಸಿದ್ದರು. ಐರ್ಲೆಂಡ್ ವಿರುದ್ಧ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯ ಆಡ್ತಾರೆ ಎಂಬ ನಂಬಿಕೆ ಇತ್ತು. ಆದ್ರೆ ಅದು ಸುಳ್ಳಾಗಿದೆ. ಈಗ ಟೀಂ ಇಂಡಿಯಾ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ T20 ಸರಣಿಯನ್ನು ಆಡಲಿದೆ. ಇದ್ರಲ್ಲಿ ವೈಭವ್ ಮೈದಾನಕ್ಕಿಳಿಯುವ ಸಾಧ್ಯತೆ ಇದೆ.