ದುಬೈ (ಅ.25): 2020ರ ಅಂಡರ್‌-19 ಕ್ರಿಕೆಟ್‌ ವಿಶ್ವ​ಕಪ್‌ನ ವೇಳಾ​ಪಟ್ಟಿ ಗುರು​ವಾರ ಬಿಡು​ಗಡೆಯಾಗಿದ್ದು, ಹಾಲಿ ಚಾಂಪಿ​ಯನ್‌ ಭಾರ​ತಕ್ಕೆ ‘ಎ’ ಗುಂಪಿ​ನಲ್ಲಿ ಸ್ಥಾನ ಸಿಕ್ಕಿದೆ. 

ಅಂಡರ್‌ 19 ಏಷ್ಯಾ ಕಪ್‌: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ

ಜ.17ರಿಂದ ಆರಂಭ​ಗೊ​ಳ್ಳ​ಲಿ​ರುವ ಟೂರ್ನಿ​ಯ ಆರಂಭವಾದರೂ,  ಭಾರತ ತಂಡ ತನ್ನ ಮೊದಲ ಪಂದ್ಯ​ವನ್ನು ಜ.19ರಂದು ಶ್ರೀಲಂಕಾ ವಿರುದ್ಧ ಆಡ​ಲಿದೆ. ಜ.21ರಂದು ಜಪಾನ್‌, ಜ.24ರಂದು ನ್ಯೂಜಿ​ಲೆಂಡ್‌ ತಂಡ​ವನ್ನು ಭಾರತ ಎದು​ರಿ​ಸ​ಲಿದೆ. ಇನ್ನು ಉದ್ಘಾಟನಾ ಪಂದ್ಯದಲ್ಲಿ ಟೂರ್ನಿಗೆ ಆತಿಥ್ಯ ವಹಿಸಿರುವ ದಕ್ಷಿಣ ಆಫ್ರಿಕಾ ತಂಡವು ಆಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಮೂರು ಬಾರಿ ಅಂಡರ್ 19 ಚಾಂಪಿಯನ್ಸ್ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ನೈಜೀರಿಯಾ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. 

ಅಂಡರ್ 19 ಟೀಂ ಇಂಡಿಯಾ ಚಾಂಪಿಯನ್ ಆದ ಬಳಿಕ ಕೋಚ್ ದ್ರಾವಿಡ್ ಹೇಳಿದ್ದೇನು..?

16 ತಂಡ​ಗ​ಳನ್ನು 4 ಗುಂಪು​ಗ​ಳಾಗಿ ವಿಂಗ​ಡಿ​ಸ​ಲಾ​ಗಿದ್ದು, ಗುಂಪಿ​ನಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆ​ಯುವ ತಂಡ​ಗಳು ಸೂಪರ್‌ ಲೀಗ್‌ಗೆ ಪ್ರವೇ​ಶಿ​ಸ​ಲಿವೆ. ಫೆ.9ರಂದು ಫೈನಲ್‌ ಪಂದ್ಯ ನಡೆ​ಯ​ಲಿದೆ.

2018ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿದ ಪೃಥ್ವಿ ಶಾ ನೇತೃತ್ವದ ಭಾರತ ತಂಡ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಜೇಯ ಶತಕ ಸಿಡಿಸಿದ್ದ ಮನ್ಜೋತ್ ಕಾಲ್ರ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. 

ವಿಶ್ವ​ಕಪ್‌ಗೆ ತಂಡ​ಗಳು

‘ಎ’ ಗುಂಪು : ಭಾರತ, ನ್ಯೂಜಿಲೆಂಡ್‌, ಶ್ರೀಲಂಕಾ, ಜಪಾನ್‌

‘ಬಿ’ ಗುಂಪು : ಆಸ್ಪ್ರೇಲಿಯಾ, ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌, ನೈಜೀರಿಯಾ

‘ಸಿ’ ಗುಂಪು : ಪಾಕಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ, ಸ್ಕಾಟ್ಲೆಂಡ್‌

‘ಡಿ’ ಗುಂಪು : ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ, ಯುಎಇ, ಕೆನಡಾ