ಅಂಡರ್ 19 ಏಷ್ಯಾ ಕಪ್: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ
ಟೀಂ ಇಂಡಿಯಾ ಯುವ ಸ್ಪಿನ್ನರ್ ಅಥರ್ವ ಅಂಕೋಲೆಕರ್ ಮಾಂತ್ರಿಕ ಬೌಲಿಂಗ್ ನೆರವಿನಿಂದ ಭಾರತದ ಕಿರಿಯರ ತಂಡವು ಬಾಂಗ್ಲಾದೇಶದ ಎದುರು 5 ರನ್‌ಗಳ ರೋಚಕ ಜಯ ಸಾಧಿಸಿದೆ. ಇದು ಭಾರತಕ್ಕೆ ಏಳನೇ ಏಷ್ಯಾಕಪ್ ಪ್ರಶಸ್ತಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕೊಲಂಬೊ[ಸೆ.15]: ಯುವ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್ (5-28) ಅದ್ಭುತ ಸ್ಪಿನ್ ಮೋಡಿಯ ನೆರವಿನಿಂದ ಭಾರತ, ಬಾಂಗ್ಲಾದೇಶ ವಿರುದ್ಧ ಅಂಡರ್ 19 ಏಷ್ಯಾ ಕಪ್ ಫೈನಲ್‌ನಲ್ಲಿ 5 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ 7ನೇ ಬಾರಿ ಟ್ರೋಫಿ ಜಯಿಸಿದೆ.
ಅಂಡರ್ 19 ಏಷ್ಯಾಕಪ್: ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ
ಶನಿವಾರ ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 107 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ 5 ಓವರಲ್ಲಿ ಕೇವಲ 17 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ಅಕ್ಬರ್ ಅಲಿ (23), ಮ್ರಿಟನ್‌ಜಾಯ್ (21), ತಂಜಿಮ್ (12), ರಕಿಬುಲ್ (11) ರನ್‌ಗಳಿಸಿ 100ರ ಗಡಿ ದಾಟಿಸಿದರು. ಅಂತಿಮವಾಗಿ 33 ಓವರಲ್ಲಿ ಬಾಂಗ್ಲಾ 101 ರನ್‌ಗಳಿಗೆ ಆಲೌಟ್ ಆಯಿತು. ಸ್ಪಿನ್ನರ್ ಅಥರ್ವ 5, ವೇಗಿ ಆಕಾಶ್ ಸಿಂಗ್ 3 ವಿಕೆಟ್ ಪಡೆದರು.
ಟ್ವೀಟ್ ಮಾಡೋವಾಗ ಇನ್ಮೇಲೆ ಯೋಚನೆ ಮಾಡ್ತಿನಿ ಕೊಹ್ಲಿ!
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಧ್ರುವ್ ಜುರೆಲ್ (33), ಕರಣ್ ಲಾಲ್ (37), ಶಾಶ್ವತ್ ರಾವತ್ (19) ರನ್ ನೆರವಿನಿಂದ 32.4 ಓವರಲ್ಲಿ 106 ರನ್‌ಗಳಿಸಿತು. ಬಾಂಗ್ಲಾ ಪರ ಶಮೀಮ್, ಮ್ರಿಟನ್‌ಜಾಯ್ ತಲಾ 3 ವಿಕೆಟ್ ಪಡೆದರು.
7ನೇ ಪ್ರಶಸ್ತಿ
ಭಾರತ ತಂಡ 7ನೇ ಬಾರಿಗೆ ಏಷ್ಯಾ ಚಾಂಪಿಯನ್ ಆಗಿದೆ. 1989ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ, ಆ ಬಳಿಕ 2003ರಲ್ಲಿ ನಡೆದಿದ್ದ 2ನೇ ಆವೃತ್ತಿಯಲ್ಲೂ ಚಾಂಪಿಯನ್ ಆಗಿತ್ತು. 2012ರ ಫೈನಲ್ ಪಂದ್ಯ ಟೈ ಆದ ಕಾರಣ ಪಾಕಿಸ್ತಾನದ ಜತೆ ಟ್ರೋಫಿ ಹಂಚಿಕೊಂಡಿದ್ದ ಭಾರತ, 2013/14, 2016, 2018ರಲ್ಲಿ ಟ್ರೋಫಿ ಜಯಿಸಿತ್ತು.
ಈ ವರೆಗೂ 8 ಬಾರಿ ಅಂಡರ್-19 ಏಷ್ಯಾಕಪ್ ನಡೆದಿದ್ದು 2017ರಲ್ಲಿ ಮಾತ್ರ ಭಾರತ ಪ್ರಶಸ್ತಿ ಗೆದ್ದಿರಲಿಲ್ಲ. ಆ ವರ್ಷ ಭಾರತ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಇದುವರೆಗೂ ಟೂರ್ನಿಗೆ ಒಮ್ಮೆಯೂ ಭಾರತ ಆತಿಥ್ಯ ವಹಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ.
ಸ್ಕೋರ್:
ಭಾರತ 106/10 (ಕರಣ್ 37, ಧ್ರುವ್ 33, ಶಮೀಮ್ 3-8)
ಬಾಂಗ್ಲಾದೇಶ 101/10 (ಅಕ್ಬರ್ 23, ಅಥವ್‌ರ್ 5-28, ಆಕಾಶ್ 3-12)