ಪಾಕಿಸ್ತಾನದ ವೇಗಿ ಬೌಲರ್ ಹ್ಯಾರಿಸ್ ರೌಫ್ ಫೋಟೊ ಕೇಳಿದ ಅಭಿಮಾನಿಯ ಜೊತೆ ಆತ ಭಾರತೀಯನೆಂದು ಭಾವಿಸಿ ಕಿತ್ತಾಟಕ್ಕಿಳಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ವೇಗಿ ಬೌಲರ್ ಹ್ಯಾರಿಸ್ ರೌಫ್ ಫೋಟೊ ಕೇಳಿದ ಅಭಿಮಾನಿಯ ಜೊತೆ ಆತ ಭಾರತೀಯನೆಂದು ಭಾವಿಸಿ ಕಿತ್ತಾಟಕ್ಕಿಳಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಅಭಿಮಾನಿಗೆ ಸರಿಯಾಗಿ ಎರಡು ಬಾರಿಸುವುದಕ್ಕಾಗಿ ಹ್ಯಾರಿಸ್ ರೌಫ್ ಓಡಿಕೊಂಡು ಬರುವುದು ಕಾಣಿಸುತ್ತಿದೆ. ಆದರೆ ಈ ವೇಳೆ ರೌಫ್ ಪತ್ನಿ ಹಾಗೂ ಮ್ಯಾನೇಜರ್‌ ಇಬ್ಬರೂ ಆತನನ್ನು ಹಿಡಿದುಕೊಂಡು ದೊಡ್ಡ ಅನಾಹುತವೊಂದರಿಂದ ಪಾರು ಮಾಡಿದ್ದಾರೆ. ಅಮೆರಿಕಾದ ಪ್ಲೋರಿಡಾದಲ್ಲಿ ಪತ್ನಿಯ ಜೊತೆ ಕ್ರಿಕೆಟಿಗ ಸುತ್ತಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ರೌಫ್ ಆರಂಭದಲ್ಲಿ ತನ್ನ ಹಿಂದೆ ಹೀಗೆ ಸುತ್ತಾಡುತ್ತ ಕಿರುಕುಳ ನೀಡುತ್ತಿದ್ದ ಅಭಿಮಾನಿಯನ್ನು ಮೊದಲಿಗೆ ಭಾರತೀಯ ಎಂದು ಭಾವಿಸಿದ್ದಾನೆ. ಆದರೆ ಆತ ಭಾರತೀಯನಾಗಿರಲಿಲ್ಲ, ಆತ ಪಾಕಿಸ್ತಾನ ಕ್ರಿಕೆಟ್ ಟೀಮ್‌ನ ಅಭಿಮಾನಿಯಾಗಿದ್ದ. ವೈರಲ್ ಆಗಿರುವ ವೀಡಿಯೋದಲ್ಲಿ, ಹ್ಯಾರಿಸ್ ರೌಫ್, 'ತೇರಾ ಇಂಡಿಯಾ ನಹೀ ಹೈ ಯೇ' (ಇದು ನಿನ್ನ ಭಾರತವಲ್ಲ) ಎಂದು ಹೇಳುತ್ತಿರುವುದು ಕೂಡ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಹೀಗೆ ತನ್ನ ಹಿಂದೆ ಬಿದ್ದ ಅಭಿಮಾನಿಗಳ ಗುಂಪಿನೊಂದಿಗೆ ಕಿತ್ತಾಡಲು ಹೋಗುವುದಕ್ಕೆ ಮೊದಲು ರೌಫ್ ಹೀಗೆ ಹೇಳಿದ್ದಾನೆ. .

ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !

ಈ ವೇಳೆ ಪಾಕ್ ಕ್ರಿಕೆಟ್ ಅಭಿಮಾನಿ, ಇಲ್ಲ ನಾನು ಪಾಕಿಸ್ತಾನದವನಾಗಿದ್ದೇನೆ, ಕೇವಲ ಒಂದು ಫೋಟೋ ಕೇಳಿದೆ ಅಷ್ಟೇ, ಸಾಕು ನಾನು ನಿಮ್ಮ ಅಭಿಮಾನಿ ಎಂದು ಆತ ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀವು ಪಾಕಿಸ್ತಾನಿ ಮತ್ತು ಇದು ನಿಮ್ಮ ಸ್ಥಿತಿ. ನೀವು ನಿಮ್ಮ ತಂದೆಯನ್ನು ನಿಂದಿಸುತ್ತೀರಿ ಎಂದು ರೌಫ್ ಕೋಪಗೊಂಡ ತನ್ನ ಹೆಂಡತಿಯಿಂದ ತನ್ನ ಕೈಯನ್ನು ಬಿಡಿಸಿಕೊಂಡು ಎಳೆದಾಡುತ್ತಾ ಅಭಿಮಾನಿಗೆ ಹೊಡೆಯಲು ಬರುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ.

ಪಾಕಿಸ್ತಾನ ಕ್ರಿಕೆಟರ್‌ಗಳು ಅಮೆರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಹೀನಾಯವಾಗಿ ಸೋತ ನಂತರ ಪಾಕ್ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ಎದುರಿಸುತ್ತಿದ್ದಾರೆ. ಹೀಗಾಗಿ ಕ್ರಿಕೆಟಿಗರು ಇಂದು ಪಾಕ್‌ಗೆ ಆಗಮಿಸಬೇಕಿದ್ದರೂ ಕೆಲವು ಕ್ರಿಕೆಟಿಗರು ತಮ್ಮ ಪ್ರಯಾಣವನ್ನು ಬೇರೆಡೆಗೆ ಬದಲಾಯಿಸಿದ್ದಾರೆ. ಕ್ಯಾಪ್ಟನ್ ಬಾಬರ್ ಆಜಂ ಸೇರಿದಂತೆ ಹಲವು ಕ್ರಿಕೆಟರ್‌ಗಳು ತಮ್ಮ ತವರಿಗೆ ಮರಳದೇ ಲಂಡನ್‌ನತ್ತ ಹೋಗಿದ್ದಾರೆ. ಉಳಿದವರು ಹೇಗೋ ಪಾಕಿಸ್ತಾನದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಫ್ಯಾನ್‌ಗಳ ಆಕ್ರೋಶ ಎದುರಿಸಲಿದ್ದಾರೆ. 

ಪಾಕ್ ವಿರುದ್ಧದ ಗೆಲುವನ್ನು ಇಸ್ರೇಲ್‌ಗೆ ಅರ್ಪಿಸಿದ ಕ್ರಿಕೆಟ್ ಫ್ಯಾನ್ಸ್!

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಹೊಸ ಕೋಚ್ ಗೇರಿ ಕ್ರಿಸ್ಟೇನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಟೀಂನಲ್ಲಿ ಏಕತೆಯೇ ಇಲ್ಲ, ಅವರು ಅದನ್ನು ಟೀಂ ಎಂದು ಕರೆಯುತ್ತಾರೆ, ಆದರೆ ಅದು ತಂಡವೇ ಅಲ್ಲ, ಅವರು ಪರಸ್ಪರ ಬೆಂಬಲಿಸುವುದಿಲ್ಲ, ಪ್ರತಿಯೊಬ್ಬರು ಪ್ರತ್ಯೇಕವಾಗಿದ್ದು, ಎಡ ಬಲ ಎಂಬಂತಿದ್ದಾರೆ. ನಾನು ಹಲವು ತಂಡಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ನಾನು ಈ ರೀತಿಯ ಸ್ಥಿತಿ ಎಲ್ಲೂ ನೋಡಿಲ್ಲ ಎಂದು ಕೋಚ್ ಗೇರಿ ಕ್ರಿಸ್ಟೇನ್ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಈ ಹಿಂದೆ ವರದಿ ಆಗಿತ್ತು.

Scroll to load tweet…