ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !
2024ರ ಐಪಿಎಲ್ ಟೂರ್ನಿ ರಂಗು ಹೆಚ್ಚಾಗಲಿದೆ. ಕಾರಣ ಐಪಿಎಲ್ ಟೂರ್ನಿಯಿಂದಲೂ ಧೋನಿ ನಿವೃತ್ತಿ ಪಡೆಯಲಿದ್ದಾರೆ ಅನ್ನೋ ಮಾತಿಗ ಖುದ್ದು ಧೋನಿಯೇ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಮೂಲಕ 2024ರ ಐಪಿಎಲ್ ಟೂರ್ನಿಯಲ್ಲಿ ಆಡುವ ಸೂಚನೆ ನೀಡಿದ್ದಾರೆ.
ನವದೆಹಲಿ(ಅ.27) ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿಯನ್ನು ಗುಡ್ ನ್ಯೂಸ್ ನೀಡಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡುವ ಸೂಚನೆ ನೀಡಿದ್ದಾರೆ. ಹೌದು, ಸ್ವತಃ ಧೋನಿಯೇ ಈ ಸೂಚನೆ ನೀಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ, ಐಪಿಎಲ್ ಟೂರ್ನಿಯಿಂದಲೂ ದೂರ ಸರಿಯುವ ಮಾತುಗಳನ್ನಾಡಿದ್ದರು. ಹೀಗಾಗಿ ಧೋನಿ ಐಪಿಎಲ್‌ನಿಂದಲೂ ನಿವೃತ್ತಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಎಲ್ಲಾ ಮಾತುಗಳನ್ನು ಧೋನಿ ತಳ್ಳಿಹಾಕಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ ಜೊತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಧೋನಿಗೆ ನಿವೃತ್ತಿ ಕುರಿತು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ನೀವು ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದೀರಿ ಎಂದು ಸಂವಾದ ನಡೆಸಿಕೊಟ್ಟವರು ಪ್ರಶ್ನೆ ಆರಂಭದಲ್ಲೇ ಹೇಳಿದ್ದರು. ಈ ವೇಳೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದೇನೆ. ಆದರೆ ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ, ಐಪಿಎಲ್‌ನಿಂದ ಅಲ್ಲ ಎಂದು ಧೋನಿ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ 2024ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿಲ್ಲ ಅನ್ನೋ ಸೂಚನೆಯನ್ನು ಧೋನಿ ನೀಡಿದ್ದಾರೆ.
ನನ್ನ ಗರ್ಲ್‌ಫ್ರೆಂಡ್___!ಬ್ಯಾಚುಲರ್ ಹುಡುಗರಿಗೆ ಒಂದೇ ವಾಕ್ಯದಲ್ಲಿ ಪ್ರೀತಿ ಪಾಠ ಹೇಳಿದ ಧೋನಿ!
2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5ನೇ ಟ್ರೋಫಿ ಗೆಲ್ಲಿಸಿಕೊಟ್ಟ ಧೋನಿ ಮತ್ತೆ ತಮ್ಮ ಮ್ಯಾಜಿಕ್ ಪ್ರದರ್ಶಿಸಿದ್ದರು. ಕಳೆದ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಅಭಿಮಾನಿಗಳೇ ತುಂಬಿಕೊಂಡಿದ್ದರು. ಕಾರಣ 2023 ಧೋನಿಯ ಕೊನೆಯ ಐಪಿಎಲ್ ಟೂರ್ನಿ ಎಂದೇ ಬಿಂಬಿತವಾಗಿತ್ತು. ಆದರೆ ಟ್ರೋಫಿ ಗೆದ್ದ ಬೆನ್ನಲ್ಲೇ ವಿದಾಯ ತಳ್ಳಿ ಹಾಕಿದ್ದ ಧೋನಿ, ಫಿಟ್ನೆಸ್ ನೋಡಿಕೊಂಡು ಮುಂದಿನ ಐಪಿಎಲ್ ಆಡುವುದಾಗಿ ಹೇಳಿದ್ದರು.
2024ರ ಐಪಿಎಲ್ ಟೂರ್ನಿಗೆ 5 ತಿಂಗಳು ಮಾತ್ರ ಬಾಕಿ ಇದೆ. ಈಗಲೇ ಧೋನಿ ಐಪಿಎಲ್ ಟೂರ್ನಿಯಿಂದ ನಿವೃತ್ತಿಯಾಗಿಲ್ಲ ಅನ್ನೋದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಎಲ್ಲಾ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2019ರ ನ್ಯೂಜಿಲೆಂಡ್ ವಿರುದ್ದಧ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಧೋನಿ ವಿಶ್ರಾಂತಿಗೆ ಜಾರಿದ್ದರು. ಒಂದು ವರ್ಷದ ಬಳಿಕ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬೆನ್ನಲ್ಲೇ ತಾನು ನಿವೃತ್ತಿ ನಿರ್ಧಾರ ಮಾಡಿದ್ದೆ. ಇದು ನನ್ನ ಕೊನೆಯ ಪಂದ್ಯ ಎಂದು ನಿರ್ಧರಿಸಿದ್ದೇ ಎಂದು ಇದೇ ಕಾರ್ಯಕ್ರಮದಲ್ಲಿ ಧೋನಿ ಹೇಳಿದ್ದರು.
ದ್ರಾವಿಡ್ ಕೋಚ್ ಅವಧಿ ಶೀಘ್ರದಲ್ಲೇ ಅಂತ್ಯ, ಆಸ್ಟ್ರೇಲಿಯಾ ಸರಣಿಗೆ ವಿವಿಎಸ್ ಲಕ್ಷ್ಮಣ್‌ಗೆ ಜವಾಬ್ಜಾರಿ!