Asianet Suvarna News Asianet Suvarna News

IND vs PAK ಪ್ರದರ್ಶನದಿಂದ ಅಲ್ಲ, ಆದಾಯದಿಂದ ಟೀಂ ಇಂಡಿಯಾ ವಿಶ್ವಕ್ರಿಕೆಟ್‌ನಲ್ಲಿ ಪ್ರಾಬಲ್ಯ, ಪಾಕ್ ಕ್ರಿಕೆಟಿಗನ ವಿವಾದ!

ಟೀಂ ಇಂಡಿಯಾ ಮೂರು ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ  ವಿಶ್ವಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಟೀಂ ಇಂಡಿಯಾ ಪ್ರಾಬಲ್ಯ ಸಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾದ್ದಾರೆ.

Team india players receive respect due to BCCI income not by performance says Former Pakistan captain Mohammad Hafeez  ckm
Author
First Published Sep 3, 2022, 8:42 PM IST

ದುಬೈ(ಸೆ.03): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿದೆ. ಸೂಪರ್ 4 ಹಂತದಲ್ಲಿ ಇಂಡೋ ಪಾಕ್ ಹೋರಾಟ ನಡೆಯಲಿದೆ.  ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಮಣಿಸಿತ್ತು. ಇದೀಗ ಮತ್ತೆ ಅದೇ ಕುತೂಹಲ ಮನೆ ಮಾಡಿದೆ. ಇದರ ನಡುವೆ ಟೀಂ ಇಂಡಿಯಾದ ಪ್ರದರ್ಶನ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟಿ20 ಮಾತ್ರವಲ್ಲ, ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲೂ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಸಿದೆ. ಆದರೆ ಟೀಂ ಇಂಡಿಯಾದ ಪ್ರಾಬಲ್ಯ ಕೇವಲ ಹಣದಿಂದ, ಆದಾಯದಿಂದ ಮಾತ್ರ, ಪ್ರದರ್ಶನದಿಂದ ಅಲ್ಲ ಎಂದು ಹಫೀಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಫೀಜ್ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ. ನಿಮಗೆ ಪ್ರೋಫೆಸರ್ ಎಂದು ಯಾರು ಹೆಸರಿಟ್ಟರು? ನಿಮಗಿಂತ ಚೆನ್ನಾಗಿ ರಿಕ್ಷಾವಾಲ ಮಾತನಾಡುತ್ತಾನೆ. ಭಾರತದ ಪ್ರದರ್ಶನ ಹೇಗಿದೆ ಅನ್ನೋದು ವಿಶ್ವಕ್ಕೆ ತಿಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.

ಟೀಂ ಇಂಡಿಯಾಗೆ(Team India) ಇತರೆಡೆ ಅತ್ಯಂತ ಗೌರವ ನೀಡಲಾಗುತ್ತದೆ. ನಮ್ಮ ಸಮಾಜದಲ್ಲಿ ಹೇಗೆ ಅಂದರೆ ಯಾರು ಹೆಚ್ಚು ಆದಾಯ ಗಳಿಸುತ್ತಾರೋ ಅವರ ಮೇಲೆ ಪ್ರೀತಿ ಹೆಚ್ಚು. ಅವರಿಗೆ ಹೆಚ್ಚು ಸಿಹಿ ಮುತ್ತು ಸಿಗುತ್ತದೆ. ಹೀಗೆ ಬಿಸಿಸಿಐ(BCCI) ಆದಾಯವನ್ನು ಸೃಷ್ಟಿಸುವ ಹಾಗೂ ಹೆಚ್ಚಿನ ಆದಾಯ ಗಳಿಸುವ ಕ್ರಿಕೆಟ್ ಸಂಸ್ಥೆ. ಹೀಗಾಗಿ ಟೀಂ ಇಂಡಿಯಾ ಆಟಗಾರರಿಗೆ ಹೆಚ್ಚಿನ ಗೌರವವಿದೆ. ಆದರೆ ಪ್ರದರ್ಶನ ವಿಚಾರಕ್ಕೆ ಬಂದರೆ ಟೀಂ ಇಂಡಿಯಾ ಏನೂ ಇಲ್ಲ. ಪಾಕಿಸ್ತಾನ(Pakistan) ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಮಹೊಮ್ಮದ್ ಹಫೀಜ್(Mohammad Hafeez) ಹೇಳಿದ್ದಾರೆ.

RAVINDRA JADEJA INJURY ಟೀಂ ಇಂಡಿಯಾಗೆ ಬಿಗ್ ಶಾಕ್, ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಔಟ್!

ನಾಳೆ ಭಾರತ-ಪಾಕಿಸ್ತಾನ
ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ(Asia Cup 2022) 2ನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ನಿಗದಿಯಾಗಿದೆ. ಭಾನುವಾರ ಬದ್ಧವೈರಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹಾಂಕಾಂಗ್‌(Hong Kong) ವಿರುದ್ಧ ಶುಕ್ರವಾರ ನಡೆದ ನಾಕೌಟ್‌ ಪಂದ್ಯದಲ್ಲಿ 155 ರನ್‌ಗಳ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ, ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆಯಿತು. ‘ಎ’ ಗುಂಪಿನಿಂದ ಭಾರತ, ಪಾಕಿಸ್ತಾನ ‘ಬಿ’ ಗುಂಪಿನಿಂದ ಶ್ರೀಲಂಕಾ, ಅಷ್ಘಾನಿಸ್ತಾನ ಸೂಪರ್‌-4ಗೇರಿದ್ದು ನಾಲ್ಕೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಶುಕ್ರವಾರದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಪಾಕಿಸ್ತಾನ 20 ಓವರಲ್ಲಿ 2 ವಿಕೆಟ್‌ಗೆ 193 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಹಾಂಕಾಂಗ್‌ 10.4 ಓವರಲ್ಲಿ ಕೇವಲ 38 ರನ್‌ಗೆ ಆಲೌಟ್‌ ಆಯಿತು. ಎರಡಂಕಿ ತಲುಪಲಿಲ್ಲ: ಹಾಂಕಾಂಗ್‌ನ ಯಾವ ಬ್ಯಾಟರ್‌ ಕೂಡ ಎರಡಂಕಿ ಮೊತ್ತ ತಲುಪಲಿಲ್ಲ. ಇತರೆ ಮೂಲಕ ದೊರೆತ 10 ರನ್‌, ಹಾಂಕಾಂಗ್‌ನ ಎಲ್ಲಾ ಬ್ಯಾಟರ್‌ಗಳ ವೈಯಕ್ತಿಕ ಮೊತ್ತಕ್ಕಿಂತ ಹೆಚ್ಚೆನಿಸಿಕೊಂಡಿತು. ನಾಯಕ ನಿಜಾಖತ್‌ ಖಾನ್‌ 8 ರನ್‌ ಗಳಿಸಿದ್ದು ಗರಿಷ್ಠ ವೈಯಕ್ತಿಕ ಮೊತ್ತ. ಸ್ಪಿನ್ನರ್‌ ಶದಾಬ್‌ ಖಾನ್‌ 4, ಮೊಹಮದ್‌ ನವಾಜ್‌ 3 ವಿಕೆಟ್‌ ಕಿತ್ತರು. ವೇಗಿ ನಸೀಂ ಶಾಗೆ 2 ವಿಕೆಟ್‌ ಸಿಕ್ಕಿತು.
 

Follow Us:
Download App:
  • android
  • ios