Asianet Suvarna News Asianet Suvarna News

Ravindra Jadeja Injury ಟೀಂ ಇಂಡಿಯಾಗೆ ಬಿಗ್ ಶಾಕ್, ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಔಟ್!

ಟೀಂ ಇಂಡಿಯಾಗೆ ಇದೀಗ ಇಂಜುರಿ ಸಮಸ್ಯೆ ಅತೀಯಾಗಿ ಕಾಡುತ್ತಿದೆ. ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಇಂಜುರಿ ಕಾರಣದಿಂದ ಹೊರಬಿದ್ದಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಜಡೇಜಾ ಹೊರಬಿದ್ದಿದ್ದಾರೆ. 

Team India All rounder Ravindra Jadeja set to miss T20 World cup due to Knee injury says reports ckm
Author
First Published Sep 3, 2022, 8:15 PM IST

ಮುಂಬೈ(ಸೆ.03): ಟೀಂ ಇಂಡಿಯಾಗೆ ಸವಾಲುಗಳು ಹೆಚ್ಚಾಗಿದೆ.  ಇದರ ನಡುವೆ ಇಂಜುರಿ ಸಮಸ್ಯೆ ತೀವ್ರ ಹಿನ್ನಡೆ ತರುತ್ತಿದೆ.  ಇಂಜುರಿ ಕಾರಣದಿಂದ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದಿದ್ದಾರೆ. ಈ ಶಾಕ್‌ನಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದಲೂ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜಾ ಟಿ20 ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ಜಡೇಜಾ ಬಲ ಮೊಣಕಾಲಿನ ಗಾಯ ಗಂಭೀರವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಸಿಸಿಐ ಪಿಟಿಐಗೆ ಮಾಹಿತಿ ನೀಡಿದೆ. ಇದು ಟಿ20 ವಿಶ್ವಕಪ್ ತಯಾರಿಯಲ್ಲಿರುವ ಭಾರತ ತಂಡಕ್ಕೆ ಅತೀ ದೊಡ್ಡ ಹೊಡೆತ ನೀಡಿದೆ.

ಏಷ್ಯಾಕಪ್ ಟೂರ್ನಿಯಲ್ಲಿ(Asia Cup 2022) ಭಾರತ ತಂಡದ ಬಲ ಹೆಚ್ಚಿಸಿದ್ದ ರವೀಂದ್ರ ಜಡೇಜಾ(Ravindra Jadeja Injury) ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ಧದ ಪಂದ್ಯ ಆಡಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನದೊಂದಿಗೆ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಆದರೆ ಸೂಪರ್ 4 ಹಂತದಲ್ಲಿ ಜಡೇಜಾ ಅಲಭ್ಯರಾಗಿದ್ದಾರೆ. ಜಡೇಜಾ ಬದಲು ಅಕ್ಸರ್ ಪಟೇಲ್‌ಗೆ(Axar Patel) ಸ್ಥಾನ ನೀಡಲಾಗಿದೆ. ರವೀಂದ್ರ ಜಡೇಜಾ ಟಿ20 ವಿಶ್ವಕಪ್ ಟೂರ್ನಿಗೆ(T20 World Cup ) ಮರಳಲಿದ್ದಾರೆ ಅನ್ನೋ ಅಭಿಮಾನಿಗಳ ವಿಶ್ವಾಸ ಹುಸಿಯಾಗಿದೆ. ಜಡ್ಡು ಅಲಭ್ಯತೆ ರೋಹಿತ್ ಶರ್ಮಾ(Rohit Sharma) ತಂಡಕ್ಕೆ ಬಹುವಾಗಿ ಕಾಡಲಿದೆ.

Asia Cup: ಏಷ್ಯಾಕಪ್‌ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್‌ ಪಟೇಲ್‌ಗೆ ಬುಲಾವ್‌!

ಜಡೇಜಾ ಮೊಣಕಾಲಿನ ಗಾಯಕ್ಕೆ(Ravindra Jadeja Knee Injury) ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಬಳಿಕ ಚೇತರಿಸಿಕೊಳ್ಳಲು ವಿಶ್ರಾಂತಿ ಅಗತ್ಯವಿದೆ. ಇತ್ತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(NCA Bengaluru) ಜಡೇಜಾ ಫಿಟ್ನೆಸ್ ಪರೀಕ್ಷೆ ಬಳಿಕ ಲಭ್ಯರಾಗಲಿದ್ದಾರೆ. ಇದು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಳಿಯುವ ಸಾಧ್ಯತೆಗಳು ಹೆಚ್ಚು ಎಂದು ಬಿಸಿಸಿಐ(BCCI) ಹೇಳಿದೆ.  3 ತಿಂಗಳು ಜಡೇಜಾ ಕ್ರಿಕೆಟ್‌ನಿಂದ(Cricket) ದೂರ ಉಳಿಯಲಿದ್ದಾರೆ ಅನ್ನೋ ವರದಿಗಳು ಬಹಿರಂಗವಾಗಿದೆ. 

ಏಷ್ಯಾಕಪ್‌ನಿಂದ ಔಟ್‌
ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಮಂಡಿ ಗಾಯಕ್ಕೆ ತುತ್ತಾಗಿದ್ದು ಏಷ್ಯಾಕಪ್‌ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮೀಸಲು ಪಡೆಯಲ್ಲಿದ್ದ ಅಕ್ಷರ್‌ ಪಟೇಲ್‌ರನ್ನು ಬಿಸಿಸಿಐ ಆಯ್ಕೆ ಸಮಿತಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಫೀಲ್ಡಿಂಗ್‌ ವೇಳೆ ಜಡೇಜಾ ಗಾಯಗೊಂಡರು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಭಾರತ ಸೂಪರ್‌-4 ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಸೆ.4ರಂದು ಆಡಲಿದೆ.

Asia Cup ಹಾಂಕಾಂಗ್ ವಿರುದ್ದ ಭಾರತಕ್ಕೆ 40 ರನ್ ಗೆಲುವು, ಸೂಪರ್ 4 ಹಂತಕ್ಕೆ ಲಗ್ಗೆ!

ಭಾರತದ ತಾರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಐಸಿಸಿ ಟಿ20 ಆಲ್ರೌಂಡರ್‌ಗಳ ಪಟ್ಟಿಯಲ್ಲಿ ವೃತ್ತಿಬದುಕಿನ ಶ್ರೇಷ್ಠ 5ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ ಬಳಿಕ ಅವರು 8 ಸ್ಥಾನ ಜಿಗಿತ ಕಂಡರು. ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.
 

Follow Us:
Download App:
  • android
  • ios