ಟೀಂ ಇಂಡಿಯಾ ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಏನಾಗುತ್ತಿದೆ? ಹಾರ್ದಿಕ್ ಪಾಂಡ್ಯ ಡಿವೋರ್ಸ್ ಬಳಿಕ ಹಲವು ಕ್ರಿಕೆಟಿಗರ ಬಾಳಲ್ಲಿ ಕೋಲಾಹಲ ಶುರುವಾಗಿದೆ. ಇದೀಗ ಈ ಸಾಲಿನಲ್ಲಿ ಯಾರೂ ಊಹಿಸದ ವಿರೇಂದ್ರ ಸೆಹ್ವಾಗ್ ಹೆಸರು ಕೇಳಿಬರುತ್ತಿದೆ.  

ದೆಹೆಲಿ(ಜ.24) ಟೀಂ ಇಂಡಿಯಾದ ಹಲವು ಕ್ರಿಕೆಟಿಗ ವೈಯುಕ್ತಿಕ ಬದುಕು ಈಗಾಗಲೇ ಹಲವು ಏರಿಳಿತ ಕಂಡಿದೆ. ಮೊಹಮ್ಮದ ಶಮ, ಹಾರ್ದಿಕ್ ಪಾಂಡ್ಯ ಈಗಾಗಲೇ ಡಿವೋರ್ಸ್ ನೀಡಿ ಹೊರಬಂದಿದ್ದಾನೆ. ಇತ್ತೀಚೆಗೆ ಯಜುವೇಂದ್ರ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಯಾರೂ ಊಹಿಸದ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹೌದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ದಾಂಪತ್ಯ ಜೀವನ ಬಿರುಕು ಬಿಟ್ಟಿದೆ ಎಂದು ವರದಿಯಾಗಿದೆ. ಕಳೆದ ಹಲವು ತಿಂಗಳಿನಿಂದ ಸೆಹ್ವಾಗ್ ಹಾಗೂ ಪತ್ನಿ ಆರತಿ ಬೇರೆ ಬೇರೆ ನೆಲೆಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. 20 ವರ್ಷ ಸಂಸಾರ ಮಾಡಿದ ಸೆಹ್ವಾಗ್ ಇದೀಗ ಗ್ರೇ ಡಿವೋರ್ಸ್‌ಗೆ ರೆಡಿಯಾದ್ರಾ ಅನ್ನೋ ಅನುಮಾನಗಳು ಬಲವಾಗುತ್ತಿದೆ. 

ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಾರ, ವೇರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಇಬ್ಬರು ಬೇರೆ ಬೇರೆ ನೆಲೆಸಿದ್ದಾರೆ. ಇಷ್ಟೇ ಅಲ್ಲ ಇನ್‌ಸ್ಟಾಗ್ರಾಂನಲ್ಲಿ ವಿರೇಂದ್ರ ಸೆಹ್ವಾಗ್, ಪತ್ನಿ ಆರತಿಯನ್ನು ಅನ್‌ಫಾಲೋ ಮಾಡಿದ್ದಾರೆ. ಇತ್ತ ಆರತಿ ಇನ್‌ಸ್ಟಾಗ್ರಾಂ ಪ್ರೊಫೈಲ್ ಪ್ರೈವೇಟ್ ಮಾಡಲಾಗಿದೆ. ಬರೋಬ್ಬರಿ 20 ವರ್ಷಗಳ ಸೆಹ್ವಾಗ್ ಹಾಗೂ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ.

ಪ್ರಸಿದ್ಧ ರೆಸ್ಟೋರೆಂಟ್‌ ಹೊಂದಿರುವ ಭಾರತದ ಕ್ರಿಕೆಟಿಗರು, ಬೆಂಗಳೂರಿನಲ್ಲಿ ಯಾರಿಗೆಲ್ಲ ಹೊಟೇಲ್ ಇದೆ ಗೊತ್ತೇ?

ಸೆಹ್ವಾಗ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತ್ನಿ ಜೊತೆಗಿನ ಯಾವುದೇ ಫೋಟೋ ಹಂಚಿಕೊಂಡಿಲ್ಲ. ಕಳೆದ ವರ್ಷ ಆಚರಿಸಿದ ದೀಪಾವಳಿ ಸೇರಿದಂತೆ ಹಲವು ಹಬ್ಬಗಳಲ್ಲಿ ಸೆಹ್ವಾಗ್ ಮಕ್ಕಳು, ತಾಯಿ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ ಪತ್ನಿ ಆರತಿಯ ಫೋಟೋ ಆಗಲಿ,ಆರತಿ ಜೊತೆಯಾಗಲಿ ಯಾವುದೇ ಫೋಟೋ ಇಲ್ಲ. ಪುತ್ರರ ಜೊತೆ ಪ್ರವಾಸ ಮಾಡಿದ ಫೋಟೋಗಳನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲೂ ಪತ್ನಿ ಆರತಿಯ ಒಂದೇ ಒಂದು ಫೋಟೋ ಇಲ್ಲ. ಒಂದೆಡೆ ಅನ್‌ಫಾಲೋ, ಮತ್ತೊಂದೆಡೆ ಪತಿ ಪತ್ನಿ ಜೊತೆಗಿರುವ ಅಥವಾ ಕನಿಷ್ಠ ಸಿಂಗಲ್ ಫೋಟೋಗಳು ಇವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿಲ್ಲ. 

ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಡಿವೋರ್ಸ್ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಕುರಿತು ವಿರೇಂದ್ರ ಸೆಹ್ವಾಗ್ ಅಥವಾ ಆರತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ವೀರೇಂದ್ರ ಸೆಹ್ವಾಗ್ ಕೇರಳದ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇಲ್ಲೂ ಕೂಡ ಪತ್ನಿ ಜೊತೆಗಿರುವುದಾಗಲಿ, ಪತ್ನಿ ಫೋಟೋ ವಿಡಿಯೋಗಳಾಗಲಿ ಇಲ್ಲ. ಈ ಎಲ್ಲಾ ಬೆಳವಣಿಗೆಗಳು ಸದ್ಯ ಹರಿದಾಡುತ್ತಿರುವ ಸುದ್ದಿಗಳಿಗೆ ಪುಷ್ಠಿ ನೀಡುತ್ತಿದೆ.

2004ರಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಆರತಿ ಮದುವೆ ನಡೆದಿತ್ತು. ಭಾರತ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಮಿಂಚುತ್ತಿದ್ದ ಸಂದರ್ಭದಲ್ಲಿ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಸೆಹ್ವಾಗ್ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ 2008ರಲ್ಲೂ ಸೆಹ್ವಾಗ್ ಎರಡನೇ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು.

ಸೆಹ್ವಾಗ್ ದಾಂಪತ್ಯ ಜೀವನದಲ್ಲಿ ಬಿರುಕು ಅನ್ನೋ ಸುದ್ದಿ ಹಲವು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ತಂದಿದೆ. ಕಾರಣ ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರಲ್ಲಿ ಡಿವೋರ್ಸ್, ಬಿರುಕು ಹೆಚ್ಚಾಗುತ್ತಿದೆ ನಿಜ. ಆದರೆ 2000ನೇ ಇಸವಿ ಆಸುಪಾಸಿನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು ಆನ್ ಫೀಲ್ಡ್‌ನಲ್ಲಿ ಮಾತ್ರವಲ್ಲ, ಆಫ್ ದಿ ಫೀಲ್ಡ್‌ನಲ್ಲೂ ಆದರ್ಶವಾಗಿದ್ದರು. ಇಷ್ಟೇ ಅಲ್ಲ ಸೆಹ್ವಾಗ್ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಸೆಹ್ವಾಗ್ ದಾಂಪತ್ಯ ಜೀವನದಲ್ಲಿ ಬಿರುಕು ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಅಭಿಮಾನಿಗಳು ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.

ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!