Asianet Suvarna News Asianet Suvarna News

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 20 ದಿನ ರಜೆ

* ಇಂಗ್ಲೆಂಡ್ ವಿರುದ್ದದ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 20 ದಿನ ವಿಶ್ರಾಂತಿ

* ಜೂನ್‌ 18ರಿಂದು ನ್ಯೂಜಿಲೆಂಡ್ ಎದುರು ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನಾಡಲಿರುವ ಟೀಂ ಇಂಡಿಯಾ

* ಆಗಸ್ಟ್ 4ರಿಂದ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.

Team India Cricket players to get 20 days Break between ICC Test Championship and England Series kvn
Author
London, First Published Jun 9, 2021, 11:01 AM IST

ಲಂಡನ್(ಜೂ.09)‌: ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ 20 ದಿನಗಳ ಬಿಡುವು ಸಿಗಲಿದೆ. ಆಟಗಾರರು ಇಂಗ್ಲೆಂಡ್‌ನಲ್ಲೇ ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯಲು ಬಿಸಿಸಿಐ ಅವಕಾಶ ನೀಡಿದೆ. 

ಜೂನ್‌ 18ರಿಂದ 22ರ ವರೆಗೂ ಸೌಥಾಂಫ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ನಡೆಯಲಿದ್ದು, ಆ ಬಳಿಕ ಆಟಗಾರರು ತಮ್ಮಿಷ್ಟದ ಸ್ಥಳಗಳಿಗೆ ತೆರಳಬಹುದಾಗಿದೆ. ಜುಲೈ 14ರಂದು ಆಟಗಾರರು ತಂಡ ಕೂಡಿಕೊಳ್ಳಬೇಕಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. ಆಟಗಾರರ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿ ನಡುವೆ 6 ವಾರಗಳ ಕಾಲ ಬಿಡುವಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಕೂಡಾ ಆಟಗಾರರಿಗೆ ಟೆಸ್ಟ್ ವಿಶ್ವಕಪ್ ಫೈನಲ್‌ ಬಳಿಕ ಬ್ರೇಕ್ ಸಿಗಲಿದೆ ಎಂದು ತಿಳಿದ್ದಾರೆ. ಹೀಗಾಗಿ ಬಯೋ ಬಬಲ್ ತೊರೆದು ಆಟಗಾರರು ಇಂಗ್ಲೆಂಡ್‌ನಲ್ಲೇ ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಬಹುದಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

6 ವಾರಗಳ ಅವಧಿಯಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡುವುದು ತಮಾಷೆಯಲ್ಲ. ಇದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಾಕಷ್ಟು ಸವಾಲಿನ ಕೆಲಸವಾಗಲಿದೆ. ಹೀಗಾಗಿ ಆಟಗಾರರು ದೀರ್ಘಕಾಲಿಕ ಸರಣಿಗೆ ಸಜ್ಜಾಗಲು ವಿಶ್ರಾಂತಿಯ ಅವಶ್ಯಕತೆಯಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದರು.

Follow Us:
Download App:
  • android
  • ios