ದುಬೈ[ನ.01]: 2020ರ ಐಸಿಸಿ ಟಿ20 ವಿಶ್ವ​ಕಪ್‌ಗೆ ಒಮಾನ್‌ ಪ್ರವೇಶ ಪಡೆ​ದಿದೆ. ಇದ​ರೊಂದಿಗೆ 2020ರ ಅ.18ರಿಂದ ನ.15ರ ವರೆಗೂ ಆಸ್ಪ್ರೇ​ಲಿ​ಯಾ​ದಲ್ಲಿ ನಡೆಯಲಿರುವ ಟಿ20 ವಿಶ್ವ​ಕಪ್‌ ಟೂರ್ನಿಗೆ ಲಭ್ಯ​ವಿದ್ದ ಎಲ್ಲಾ 16 ಸ್ಥಾನ​ಗಳು ಭರ್ತಿ​ಯಾಗಿವೆ.

ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ನಮೀ​ಬಿಯಾ, ಸ್ಕಾಟ್ಲೆಂಡ್‌

ಇಲ್ಲಿ ನಡೆ​ಯು​ತ್ತಿ​ರುವ ಅರ್ಹತಾ ಟೂರ್ನಿಯ ಪ್ಲೇ-ಆಫ್‌ ಪಂದ್ಯ​ದಲ್ಲಿ ಒಮಾನ್‌, ಹಾಂಕಾಂಗ್‌ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿ​ಸಿತು. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿದ 16ನೇ ತಂಡ ಎನಿಸಿಕೊಂಡಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 8 ಸ್ಥಾನ​ಗ​ಳ​ಲ್ಲಿದ್ದ ತಂಡ​ಗಳು ನೇರವಾಗಿ ಸೂಪರ್‌ 12 ಹಂತಕ್ಕೆ ಪ್ರವೇ​ಶಿ​ಸಿ​ದ್ದರೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಗುಂಪು ಹಂತ​ಕ್ಕೇ​ರಿ​ದ್ದವು.

T20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಲಿದ್ದಾರೆ ಬಾಲಿವುಡ್ ನಟಿ!

ಸದ್ಯ ನಡೆ​ಯು​ತ್ತಿ​ರುವ ಅರ್ಹತಾ ಟೂರ್ನಿ​ಯಲ್ಲಿ 6 ಸ್ಥಾನ​ಗಳು ಲಭ್ಯವಿದ್ದವು. ಒಮಾನ್‌ ಜತೆ ಸ್ಕಾಟ್ಲೆಂಡ್‌, ನಮೀ​ಬಿಯಾ, ನೆದರ್‌ಲೆಂಡ್ಸ್‌, ಪಪುವಾ ನ್ಯೂ ಗಿನಿ ಹಾಗೂ ಐರ್ಲೆಂಡ್‌ ತಂಡ​ಗಳು ವಿಶ್ವ​ಕಪ್‌ಗೆ ಪ್ರವೇಶ ಪಡೆದವು. ಇನ್ನು 5 ಹಾಗೂ 6ನೇ ಸ್ಥಾನಕ್ಕೆ ಸ್ಕಾಟ್’ಲ್ಯಾಂಡ್ ಹಾಗೂ ಓಮನ್ ತಂಡಗಳು ಕಾದಾಡಲಿವೆ.

ದೆಹಲಿಯಲ್ಲೇ ನಡೆಯುತ್ತೆ ಮೊದಲ ಟಿ20!

ಇದೇ ಶುಕ್ರವಾರ ನಡೆಯಲಿರುವ ಮೊದಲ ಸೆಮಿಫೈನಲ್’ನಲ್ಲಿ ಐರ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಕಾದಾಡಿದರೆ, ಇದೇ ದಿನ ನಡೆಯಲಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ನಮೀಬಿಯಾ ತಂಡಗಳು ಫೈನಲ್’ಗಾಗಿ ಕಾದಾಡಲಿವೆ. ಇನ್ನು ಅರ್ಹತಾ ಸುತ್ತಿನ ಫೈನಲ್ ಪಂದ್ಯವು ಶನಿವಾರ[ಅ.02] ನಡೆಯಲಿದ್ದು, ದುಬೈ ಅಂತಾರಾಷ್ಟ್ರೀಯ ಮೈದಾನ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಆತಿಥೇಯ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡಗಳೆನಿಸಿವೆ. ಇದರ ಜತೆಗೆ ವಿಶ್ವ ನಂ.1 ಶ್ರೇಯಾಂಕಿತ ತಂಡ ಪಾಕಿಸ್ತಾನ ಹಾಗೂ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಅಚ್ಚರಿಯ ಫಲಿತಾಂಶ ನೀಡಲು ಎದುರು ನೋಡುತ್ತಿವೆ.