ಮುಂಬೈ(ಅ.31): ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಸಜ್ಜಾಗುತ್ತಿದೆ. 2020ರ ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಟಿ20 ಟೂರ್ನಿಗಾಗಿ ಕಸರತ್ತು  ನಡೆಸುತ್ತಿದೆ.  ಇದೀಗ ನವೆಂಬರ್ 1 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಟ್ರೋಫಿ ಅನಾವರಣಗೊಳ್ಳಲಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಅನಾವರಣಕ್ಕೆ ಬಾಲಿವುಡ್ ನಟಿಯನ್ನು ಅಹ್ವಾನಿಸಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಅಭ್ಯಾಸ ಪಂದ್ಯ!

ಬಾಲಿವುಡ್ ಸ್ಟಾರ್ ನಟಿ, ಸೈಫ್ ಆಲಿ ಖಾನ್ ಪತ್ನಿ ಕರೀನಾ ಕಪೂರ್, ಮೆಲ್ಬೋರ್ನ್ ನಡೆಯಲಿರುವ ಟಿ20 ಕಾರ್ಯಕ್ರಮದಲ್ಲಿ ಟ್ರೋಫಿ ಅನಾವರಣ ಮಾಡಲಿದ್ದಾರೆ. ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ನನಗೆ ಸಿಕ್ಕ ಭಾಗ್ಯ. ನನ್ನ ಪತಿ ತಂದೆ(ಮನ್ಸೂರ್ ಆಲಿ ಖಾನ್) ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ. ಭಾರತ  ತಂಡ ಪ್ರತಿನಿಧಿಸಿದ ಮನ್ಸೂರ್ ಕುಟುಂದ ನಾನು  ಇದೀಗ ನಾನು ಟ್ರೋಫಿ ಅನಾವರಣ ಮಾಡುತ್ತಿರುವುದೇ ನನ್ಮ ಹೆಮ್ಮೆ ಎಂದು ಕರೀನಾ ಹೇಳಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ಪಪುವಾ ನ್ಯೂಗಿನಿಯಾ; ದಾಖಲೆ ಬರೆದ ಕ್ರಿಕೆಟ್ ಶಿಶು!

ಇದೇ ಮೊದಲ ಬಾರಿಗೆ ಬಾಲಿವುಡ್ ನಟಿಗೆ ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.  

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ  ಪ್ರಧಾನಿ ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾ ಆತಿಥ್ಯ ವಹಿಸಿರುವ ಟಿ20 ವಿಶ್ವಕಪ್ ಟೂರ್ನಿಗೆ ಆಗಮಿಸಿ ಪಂದ್ಯ ವೀಕ್ಷಿಸುವಂತೆ ಭಾರತೀಯ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು, ಆಸೀಸ್‌ಗೆ ಆಗಮಿಸುವ ಭರವಸೆ ಇದೆ ಎಂದು ಮೋದಿ ಹೇಳಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಅಕ್ಟೋಬರ್ 18 ರಿಂದ ಪುರುಷರ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಂಡರೆ, ಫೆಬ್ರವರಿಯಲ್ಲೇ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.