ದುಬೈ(ಅ.31): 2020ರ ಐಸಿಸಿ ಟಿ20 ವಿಶ್ವ​ಕಪ್‌ಗೆ ನಮೀ​ಬಿಯಾ ಹಾಗೂ ಸ್ಕಾಟ್ಲೆಂಡ್‌ ತಂಡ​ಗಳು ಪ್ರವೇಶ ಪಡೆ​ದಿವೆ. ಇಲ್ಲಿ ನಡೆ​ಯು​ತ್ತಿ​ರುವ ವಿಶ್ವ​ಕಪ್‌ ಅರ್ಹತಾ ಟೂರ್ನಿಯ ಪ್ಲೇ-ಆಫ್‌ ಪಂದ್ಯ​ದಲ್ಲಿ ಒಮಾನ್‌ ವಿರುದ್ಧ ಗೆದ್ದ ನಮೀ​ಬಿಯಾ ಚೊಚ್ಚಲ ಬಾರಿಗೆ ವಿಶ್ವ​ಕಪ್‌ಗೆ ಪ್ರವೇಶ ಪಡೆ​ಯಿತು. 

"

 

ಇದನ್ನೂ ಓದಿ: 46 ವರ್ಷದ ಸತತ ಹೋರಾಟದಿಂದ ವಿಶ್ವಕಪ್‌ಗೆ ಲಗ್ಗೆ ಇಟ್ಟ ಪಪುವಾ ನ್ಯೂಗಿನಿ!

ಈ ಗೆಲುವಿನೊಂದಿಗೆ ನಮೀಬಿಯಾವು 2020ರಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ  T20 ವಿಶ್ವಕಪ್ ಟೂರ್ನಿಗೆ ಲಗ್ಗಯಿಟ್ಟ 4ನೇ ತಂಡ ಎನಿಸಿದೆ. ಪಪುವಾ ನ್ಯೂಗಿನಿಯಾ, ಐರ್ಲೆಂಡ್ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ.  

2003ರ ಏಕದಿನ ವಿಶ್ಚಕಪ್ ಬಳಿಕ ಇದೇ ಮೊದಲ ಬಾರಿಗೆ ನಮೀಬಿಯಾ ತಂಡವು ಸೀನಿಯರ್ಸ್ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ. ಓಮನ್ ವಿರುದ್ಧದ ಪಂದ್ಯದಲ್ಲಿ, ನಮೀಬಿಯಾದ ಜೆಜೆ ಸ್ಮಿತ್ ಕೇವಲ 25 ಎಸೆತಗಳಲ್ಲಿ 59 ರನ್ ಬಾರಿಸುವ ಮೂಲಕ ತಂಡದ ಐತಿಹಾಸಿಕ ಜಯಕ್ಕೆ ನೆರವಾದರು. T20 ವಿಶ್ವಕಪ್ ಟೂರ್ನಿ ಮುಂದಿನ ವರ್ಷ ನಡೆಯಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!.

ಸ್ಮಿತ್ 20 ಎಸೆತಗಳಲ್ಲಿ ಬಾರಿಸಿದ 50 ರನ್, ಈ ಟೂರ್ನಿಯಲ್ಲಿ ದಾಖಲಾದ ಅತಿವೇಗದ ಅರ್ಧಶತಕ ಎನಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನಮೀಬಿಯಾ ನಿಗದಿತ 20 ಓವರ್'ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿತ್ತು.
ಬ್ಯಾಟಿಂಗ್ ವೇಳೆ ನಮೀಬಿಯಾ 5 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಸ್ಮಿತ್ ಮತ್ತು ಕ್ರೇಗ್ ವಿಲಿಯಮ್ಸನ್ ಜತೆಯಾಟ ತಂಡವನ್ನು 160ರ ಗಡಿ ದಾಟುವಂತೆ ಮಾಡಿತು.

ಒಂದು ಹಂತದಲ್ಲಿ ಓಮನ್ ಪವರ್ ಪ್ಲೇ ಓವರ್'ನಲ್ಲೇ ಒಂದು ವಿಕೆಟ್ ಕಳೆದುಕೊಂಡು 57 ರನ್ ಬಾರಿಸುವ ಮೂಲಕ ಗೆಲುವಿನತ್ತ ದಾಪುಗಾಲು ಹಾಕಿತು. ಆದರೆ ನಮೀಬಿಯಾ ಸ್ಪಿನ್ನರ್'ಗಳನ್ನು ಕಣಕ್ಕಿಳಿಸುವ ಮೂಲಕ ಎದುರಾಳಿ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾಯಿತು.

ಕೊನೆಗೆ ನಮೀಬಿಯಾ ತಂಡವು ಕೇವಲ 107 ರನ್'ಗಳಿಗೆ ಓಮನ್ ತಂಡವನ್ನು ನಿಯಂತ್ರಿಸಿತು. ಪರಿಣಾಮ ನಮೀಬಿಯಾ 54 ರನ್'ಗಳ ಭರ್ಜರಿ ಜಯ ದಾಖಲಿಸಿತು. ಅರ್ಹತೆ ಗಿಟ್ಟಿಸುವ ಹೊರತಾಗಿ, ಶುಕ್ರವಾರ ಪಪುವಾ ನ್ಯೂಗಿನಿಯಾ ವಿರುದ್ಧ ನವೆಂಬರ್ ಒಂದರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನಮೀಬಿಯಾ ಗೆದ್ದರೆ, ಈವರೆಗೆ ಆಡಿದ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗುತ್ತದೆ.

ಮತ್ತೊಂದು ಪ್ಲೇ-ಆಫ್‌ ಪಂದ್ಯ​ದಲ್ಲಿ ಯುಎಇ ವಿರುದ್ಧ 90 ರನ್‌ಗಳ ಗೆಲುವು ಸಾಧಿ​ಸಿದ ಸ್ಕಾಟ್ಲೆಂಡ್‌, ವಿಶ್ವ​ಕಪ್‌ ಟಿಕೆಟ್‌ ನಿಗದಿಪಡಿ​ಸಿ​ಕೊಂಡಿತು. ಅರ್ಹತಾ ಟೂರ್ನಿ​ಯಲ್ಲಿ ಒಟ್ಟು 6 ತಂಡ​ಗಳು ವಿಶ್ವ​ಕಪ್‌ಗೆ ಪ್ರವೇಶ ಪಡೆಯಲಿದ್ದು, 5 ತಂಡ​ಗಳು ಯಾವು​ವೆಂದು ನಿರ್ಧಾರವಾಗಿದೆ. ಅಂತಿಮ ಸ್ಥಾನ​ಕ್ಕಾಗಿ ಒಮಾನ್‌ ಹಾಗೂ ಹಾಂಕಾಂಗ್‌ ನಡುವೆ ಸ್ಪರ್ಧೆ ಇದೆ.