T20 World Cup 2024: ಒಂದಲ್ಲ, ಎರಡಲ್ಲ ಬರೋಬ್ಬರಿ 3 ಬಲಿಷ್ಠ ತಂಡಗಳು ಗ್ರೂಪ್ ಹಂತದಲ್ಲೇ ಔಟ್...!
ಅಮೆರಿಕ-ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್‌ನ 30ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಅದಕ್ಕೂ ಪಾಕಿಸ್ತಾನಕ್ಕೂ ಏನ್ ಸಂಬಂಧ ಅಂತ ಕೇಳಬೇಡಿ. ಆ ಮ್ಯಾಚ್ ಮಳೆಗೆ ಕೊಚ್ಚಿ ಹೋಗುತ್ತಿದಂತೆ ಪಾಕ್ ಸೂಪರ್ 8 ಹಂತದ ಕನಸು ಸಹ ಕೊಚ್ಚಿ ಹೋಗಿದೆ.
ಬೆಂಗಳೂರು: ಒಂದಲ್ಲ. ಎರಡಲ್ಲ. ಮೂರು ಬಲಿಷ್ಠ ತಂಡಗಳು ಟಿ20 ವಿಶ್ವಕಪ್‌ನ ಗ್ರೂಪ್ ಹಂತದಿಂದಲೇ ಹೊರಬಿದ್ದಿವೆ. ಅದರಲ್ಲಿ ಎರಡು, ಮಾಜಿ ಚಾಂಪಿಯನ್ ತಂಡಗಳು. ಎರಡು ಟೀಮ್‌ಗೆ ಕಳಪೆ ಆಟ ಮುಳುವಾದ್ರೆ, ಒಂದು ತಂಡಕ್ಕೆ ಮಳೆ ಕಾಟ ಕೊಟ್ಟಿದೆ. ಮಳೆಗೆ ಕೊಚ್ಚಿ ಹೋದ ತಂಡ ಯಾವುದು ಗೊತ್ತಾ..? ಅದೇ ನಮ್ಮ ಬದ್ಧವೈರಿ ಪಾಕಿಸ್ತಾನ.
ಮಳೆಗೆ ಕೊಚ್ಚಿ ಹೋಯ್ತು ಭಾರತದ ಬದ್ಧವೈರಿಗಳ ಕನಸು
ಅಮೆರಿಕ-ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್‌ನ 30ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಅದಕ್ಕೂ ಪಾಕಿಸ್ತಾನಕ್ಕೂ ಏನ್ ಸಂಬಂಧ ಅಂತ ಕೇಳಬೇಡಿ. ಆ ಮ್ಯಾಚ್ ಮಳೆಗೆ ಕೊಚ್ಚಿ ಹೋಗುತ್ತಿದಂತೆ ಪಾಕ್ ಸೂಪರ್ 8 ಹಂತದ ಕನಸು ಸಹ ಕೊಚ್ಚಿ ಹೋಗಿದೆ. ಹೌದು, ಅಮೆರಿಕ 5 ಪಾಯಿಂಟ್‌ಗಳೊಂದಿಗೆ ಭಾರತದ ಜೊತೆ A ಗ್ರೂಪ್ನಿಂದ ಸೂಪರ್-8ಗೆ ಎಂಟ್ರಿ ಪಡೆಯಿತು. ಪಾಕಿಸ್ತಾನ ಗ್ರೂಪ್ ಹಂತದಿಂದಲೇ ಕಿಕೌಟ್ ಆಗಿದೆ. ಈ ಮೂಲಕ 2ನೇ ಬಾರಿ ಟಿ20 ವರ್ಲ್ಡ್‌ಕಪ್ ಗೆಲ್ಲೋ ಪಾಕಿಗಳ ಕನಸು ನುಚ್ಚು ನೂರಾಗಿದೆ.
T20 World Cup 2024: ಭಾರತದ ಸೂಪರ್ 8 ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..!
ಕರಾಚಿ ಏರ್‌ಪೋರ್ಟ್‌ಗೆ ಅರ್ಹತೆ ಪಡೆದ ಪಾಕಿಸ್ತಾನ..!
ಪಾಕಿಸ್ತಾನ ಗ್ರೂಪ್ ಸ್ಟೇಜ್ನಿಂದಲೇ ಟಿ20 ವಿಶ್ವಕಪ್ ಅಭಿಯಾನ ಅಂತ್ಯಗೊಳಿಸುತ್ತಿದಂತೆ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳ ಸುರಿಮಳೆಯಾಗಿವೆ. ಬಾಬರ್ ಪಡೆ ಸೂಪರ್-8ಗೆ ಅಲ್ಲ. ಕರಾಚಿ ಏರ್ ಪೋರ್ಟ್‌ಗೆ ಅರ್ಹತೆ ಪಡೆದಿದೆ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ. ಪಾಕ್ ತಂಡವನ್ನ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಪಾಕಿಸ್ತಾನ ತಂಡ ಅಮೆರಿಕಗೆ ಫ್ಲೈಟ್ ಹತ್ತುವ ಮುನ್ನ ಮಿಲಿಟರಿ ಶೈಲಿಯಲ್ಲಿ ತರಬೇತಿ ಪಡೆದುಕೊಂಡಿತ್ತು. ಹೌದು, ಪಾಕ್ ಆರ್ಮಿ ಟ್ರೈನಿಂಗ್ನಲ್ಲಿ ಪಾಕ್ ಆಟಗಾರರಿಗೆ ತರಬೇತಿ ನೀಡಲಾಗಿತ್ತು. ಎಲ್ಲಾ ಆಟಗಾರರು ಆ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಇಷ್ಟೆಲ್ಲಾ ಟ್ರೈನಿಂಗ್ ಕೊಟ್ರೂ ಪಾಕ್ ಗೆದ್ದಿರುವುದು ಏಕೈಕ ಪಂದ್ಯವನ್ನ ಮಾತ್ರ. ಟಿ20 ವಿಶ್ವಕಪ್‌ಗೂ ಮುನ್ನ ಆರ್ಮಿ ಟ್ರೈನಿಂಗ್ ಪಡೆದಿದ್ದ ಪಾಕ್ ಆಟಗಾರರನ್ನು ಸ್ಟೇಡಿಯಂ ನವೀಕರಣಕ್ಕಾಗಿ ಬಳಸಿಕೊಳ್ಳಬೇಕೆಂದು ಅಭಿಮಾನಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾನೆ.
ಕಳಪೆ ಆಟವಾಡಿ ಟಿ20 ವಿಶ್ವಕಪ್‌ನಿಂದ ಔಟ್: ಪಾಕ್ ಆಟಗಾರರ ಸಂಬಳ ಕಟ್?
ಒಂದು ಬಾರಿ ಚಾಂಪಿಯನ್ಸ್. ಎರಡು ಬಾರಿ ರನ್ನರ್ ಅಪ್, ಈ ಬಾರಿ ಗ್ರೂಪ್‌ನಲ್ಲೇ ಔಟ್..!
2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ನಲ್ಲೇ ಪಾಕಿಸ್ತಾನ ಫೈನಲ್ ಪ್ರವೇಶಿಸಿತ್ತು. ಆದ್ರೆ ಟೀಂ ಇಂಡಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತು. 2009ರಲ್ಲಿ ಟಿ20 ಚಾಂಪಿಯನ್ ಆಗಿ ಮೆರೆದಾಡಿತು. 2022ರಲ್ಲಿ ಫೈನಲ್ ಪ್ರವೇಶಿಸಿದ್ದ ಪಾಕ್, ಇಂಗ್ಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. ಈ ಸಲವಾದ್ರೂ ಮತ್ತೆ ಚಾಂಪಿಯನ್ ಆಗಬೇಕು ಅಂತ ಪಣ ತೊಟ್ಟು ಅಮೆರಿಕಗೆ ಬಂದಿತ್ತು. ಆದ್ರೆ ಮಳೆ ಪಾಕಿಗಳ ಕನಸಿಗೆ ತಣ್ಣೀರೆರಚಿದೆ. ಬರಿಗೈಯಲ್ಲಿ ಕರಾಚಿ ಫ್ಲೈಟ್ ಹತ್ತಲು ಸಿದ್ದತೆ ಮಾಡಿಕೊಳ್ತಿದೆ. ಅದಕ್ಕೂ ಮುನ್ನ ಇಂದು ಗ್ರೂಪ್ ಹಂತದ ತನ್ನ ಕೊನೆ ಪಂದ್ಯವನ್ನ ಐರ್ಲೆಂಡ್ ವಿರುದ್ಧ ಆಡಲಿದೆ.
ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ
2023ರ ಏಕದಿನ ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿತ್ತು. ಬಾಬರ್ ಅಜಂ ಅವರನ್ನ ನಾಯಕತ್ವದಿಂದ ಕೆಳಗಿಳಿಸಿ, ಮೂರು ಮಾದರಿಗೆ ಮೂವರು ನಾಯಕನ್ನ ನೇಮಿಸಲಾಗಿತ್ತು. ಆದ್ರೆ ಆ ಮೂವರು ಸಹ ಮುಗ್ಗರಿಸಿದ್ರು. ಪರಿಣಾಮ ಮತ್ತೆ ಬಾಬರ್ ಅಜಂ ಕೈಗೆ ಟಿ20 ನಾಯಕತ್ವ ಸಿಕ್ಕಿತು. ಅವರು ಸರ್ವಾಧಿಕಾರತ್ವ ಪಾಕ್ ತಂಡಕ್ಕೆ ಮುಳುವಾಯ್ತು. ಒಟ್ನಲ್ಲಿ ಬಲಿಷ್ಠ ತಂಡ.. ಸೂಪರ್-8ಗೆ ಎಂಟ್ರಿ ಪಡೆಯೋ ಫೇವರಿಟ್ ಎನಿಸಿಕೊಂಡು ಟಿ20 ವಿಶ್ವಕಪ್ಗೆ ಬಂದಿದ್ದ ಪಾಕಿಸ್ತಾನ, ದುರ್ಬಲ ತಂಡವಾಗಿ ವಾಪಾಸ್ ಹೋಗ್ತಿದೆ.
ಇನ್ನು ಟಿ20 ವಿಶ್ವಕಪ್ ಟೂರ್ನಿಯ ಮಾಜಿ ಚಾಂಪಿಯನ್ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕೂಡಾ ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿವೆ. 2014ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡದ ಹೋರಾಟ ಕೂಡಾ ಈ ಬಾರಿ ಗ್ರೂಪ್ ಹಂತದಲ್ಲೇ ಮುಕ್ತಾಯ ಕಂಡಿದೆ. ಇನ್ನೊಂದೆಡೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ನ್ಯೂಜಿಲೆಂಡ್ ತಂಡ ಕೂಡಾ ಆಘಾತಕಾರಿ ಸೋಲುಗಳನ್ನು ಕಂಡು ತನ್ನ ಅಭಿಯಾನ ಮುಗಿಸಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್