ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯ ಹಂತ ತಲುಪಿವೆ. ಈಗಾಗಲೇ 35 ಪಂದ್ಯಗಳು ಮುಗಿದು ಹೋಗಿವೆ. ಇನ್ನೂ 5 ಮ್ಯಾಚ್‌ಗಳು ಬಾಕಿ ಇವೆ. ಮಂಗಳವಾರ ಗ್ರೂಪ್ ಸ್ಟೇಜ್ ಪಂದ್ಯಗಳು ಕೊನೆಗೊಳ್ಳಲಿವೆ. 20 ತಂಡಗಳ ಪೈಕಿ 12 ಟೀಮ್ಸ್ ಟಿ20 ವರ್ಲ್ಡ್‌ಕಪ್‌ನಿಂದ ಹೊರಬೀಳಲಿವೆ. ಅಮೇಲೆ ಏನಿದ್ದರೂ 8 ತಂಡಗಳ ನಡುವೆ ವಿಶ್ವಕಪ್‌ಗಾಗಿ ಭಾರಿ ಪೈಪೋಟಿ ನಡೆಯಲಿದೆ.

ಬೆಂಗಳೂರು: ಟಿ20 ವಿಶ್ವಕಪ್‌ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯದ ಬೆನ್ನಲ್ಲೇ ಸೂಪರ್-8 ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಈ ಸುತ್ತಿನಲ್ಲಿ 8 ತಂಡಗಳ ನಡುವೆ ಕಾದಾಟ ನಡೆಯಲಿದೆ. ಏನಿದು ಸೂಪರ್-8 ಸುತ್ತು..? ಯಾರೆಲ್ಲಾ ಮುಖಾಮುಖಿಯಾಗಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟೀಂ ಇಂಡಿಯಾ ಎದುರಾಳಿಗಳು ಯಾರ್ಯಾರು ಗೊತ್ತಾ..?

ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯ ಹಂತ ತಲುಪಿವೆ. ಈಗಾಗಲೇ 35 ಪಂದ್ಯಗಳು ಮುಗಿದು ಹೋಗಿವೆ. ಇನ್ನೂ 5 ಮ್ಯಾಚ್‌ಗಳು ಬಾಕಿ ಇವೆ. ಮಂಗಳವಾರ ಗ್ರೂಪ್ ಸ್ಟೇಜ್ ಪಂದ್ಯಗಳು ಕೊನೆಗೊಳ್ಳಲಿವೆ. 20 ತಂಡಗಳ ಪೈಕಿ 12 ಟೀಮ್ಸ್ ಟಿ20 ವರ್ಲ್ಡ್‌ಕಪ್‌ನಿಂದ ಹೊರಬೀಳಲಿವೆ. ಅಮೇಲೆ ಏನಿದ್ದರೂ 8 ತಂಡಗಳ ನಡುವೆ ವಿಶ್ವಕಪ್‌ಗಾಗಿ ಭಾರಿ ಪೈಪೋಟಿ ನಡೆಯಲಿದೆ.

ಶುಭ್‌ಮನ್ ಗಿಲ್ ಡೇಟಿಂಗ್ ಕಹಾನಿ: ಸಾರಾ ಒಬ್ಬಳೇ ಅಲ್ಲ ಈ ಐವರ ಜತೆ ಗಿಲ್ ಗುಟ್ಟಾಗಿ ಡೇಟಿಂಗ್..!

4 ಗ್ರೂಪ್‌ನಿಂದ 8 ಟೀಮ್ಸ್ ಸೂಪರ್-8ಗೆ ಬರಲಿವೆ. ಸೂಪರ್-8ರಲ್ಲಿ ತಲಾ 4 ತಂಡಗಳಿರುವ ಎರಡು ಗ್ರೂಪ್ಗಳನ್ನು ಮಾಡಲಾಗುವುದು. ಒಂದು ಗ್ರೂಪ್ನಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅಂದರೆ ಸೂಪರ್-8ರಲ್ಲಿ ಮೂರು ಮ್ಯಾಚ್‌ನಲ್ಲಿ ಎರಡು ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ. ಟೀಂ ಇಂಡಿಯಾ ಎದುರಾಳಿಗಳು ಬಹುತೇಕ ಫಿಕ್ಸ್ ಆಗಿದ್ದಾರೆ.

ಸೂಪರ್-8 - ಜುಲೈ 20ರಂದು ಭಾರತ-ಅಫ್ಘನ್ ಕದನ

ಸೂಪರ್-8ರಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಜುಲೈ 20ರಂದು ರಾತ್ರಿ 8ರಿಂದ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಈ ಕದನ ನಡೆಯಲಿದೆ. ಅಫ್ಘನ್ ಸ್ಟ್ರೇಂಥೇ ಸ್ಪಿನ್ನರ್ಸ್. ಸ್ಪಿನ್ನರ್ಗಳಿಂದಲೇ ನ್ಯೂಜಿಲೆಂಡ್ ತಂಡವನ್ನ ಸೋಲಿಸಿದ್ದ ಅಫ್ಘಾನಿಸ್ತಾನ, ವೆರಿ ವೆರಿ ಡೇಂಜರರ್ಸ್ ಟೀಮ್. ಅಂದು ಇಂಡಿಯಾ ಬ್ಯಾಟರ್ಸ್ ವರ್ಸಸ್ ಅಫ್ಘನ್ ಸ್ಪಿನ್ನರ್ಸ್ ನಡುವೆ ಬಿಗ್ ವಾರ್ ನಡೆಯಲಿದೆ.

ಸೂಪರ್-8 - ಜುಲೈ 22ರಂದು ಭಾರತ ಎದುರಾಳಿ ಯಾರು..?

ಸೂಪರ್-8ರ 2ನೇ ಪಂದ್ಯದಲ್ಲಿ ಭಾರತ ತಂಡ ಯಾರನ್ನ ಎದುರಿಸಲಿದೆ ಅನ್ನೋದು ಡಿಸೈಡ್ ಆಗಿಲ್ಲ. ಪಂದ್ಯ ಜುಲೈ 22ರಂದು ನಾರ್ಥ್ ಸೌಂಡ್ನಲ್ಲಿ ನಡೆಯಲಿದೆ. ಭಾರತ ಎದುರಾಳಿ ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ಅನ್ನೋದು ನಾಳೆ ಡಿಸೈಡ್ ಆಗಲಿದೆ. ನಾಳೆ ಬಾಂಗ್ಲಾ ತಂಡ ನೇಪಾಳ ವಿರುದ್ಧ ಮತ್ತು ನೆದರ್ಲ್ಯಾಂಡ್ಸ್ ತಂಡ ಶ್ರೀಲಂಕಾ ವಿರುದ್ಧ ಆಡಲಿದೆ. ಈ ಪಂದ್ಯಗಳ ಫಲಿತಾಂಶದ ಬಂದ ಮೇಲೆ ಟೀಂ ಇಂಡಿಯಾ ಎದುರಾಳಿ ಯಾರು ಅನ್ನೋದು ಕನ್ಫರ್ಮ್ ಆಗಲಿದೆ.

ಕಳಪೆ ಆಟವಾಡಿ ಟಿ20 ವಿಶ್ವಕಪ್‌ನಿಂದ ಔಟ್‌: ಪಾಕ್‌ ಆಟಗಾರರ ಸಂಬಳ ಕಟ್‌?

ಸೂಪರ್-8 - ಜುಲೈ 24ರಂದು ಭಾರತ-ಆಸೀಸ್ ಬಿಗ್ ಮ್ಯಾಚ್

ಜುಲೈ 24ರಂದು ಸೋಮವಾರ ರಾತ್ರಿ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಸೂಪರ್-8ರಲ್ಲಿ ಭಾರತಕ್ಕೆ ಕಡಿಣ ಎದುರಾಳಿ ಅಂದ್ರೆ ಆಸೀಸ್ ತಂಡವೇ. ಇಂಡಿಯಾ-ಪಾಕಿಸ್ತಾನ ಪಂದ್ಯ ಬಿಟ್ರೆ ಹೆಚ್ಚು ಕುತೂಹಲ ಕೆರಳಿಸಿರುವ ಪಂದ್ಯವಿದು. ಮಾಜಿ ಚಾಂಪಿಯನ್ಸ್ ಆಸ್ಟ್ರೇಲಿಯಾ, ಈ ಸಲ ಚಾಂಪಿಯನ್ ಆಗೋ ಕನಸು ಕಾಣ್ತಿದೆ. ಹಾಗಾಗಿ ಸೂಪರ್-8ರಲ್ಲಿ ಭಾರತಕ್ಕೆ ಕಠಿಣ ಎದುರಾಳಿ ಅಂದ್ರೆ ಆಸೀಸ್.

ಸೂಪರ್-8ರಲ್ಲಿ ಭಾರತದ ಎದುರಾಳಿಗಳು ಬಲಿಷ್ಠರೇ. ಆದ್ರೆ ಭಾರತಕ್ಕೆ ಹೋಲಿಸಿದ್ರೆ, ಅಫ್ಘನ್, ಬಾಂಗ್ಲಾ, ನೆದರ್ಲ್ಯಾಂಡ್ಸ್ ವೀಕ್ ಇವೆ. ಇನ್ನು ಆಸೀಸ್ ವಿರುದ್ಧ ಸೋತರೂ ಇನ್ನುಳಿದ ಎರಡು ಪಂದ್ಯವನ್ನ ಗೆದ್ರೆ ಸೆಮಿಫೈನಲ್ ಪ್ರವೇಶಿಸಬಹುದು. 2010ರಲ್ಲಿ ವೆಸ್ಟ್ ಇಂಡೀಸ್ನಲ್ಲೇ ನಡೆದ ಟಿ20 ವಿಶ್ವಕಪ್‌ನ ಸೂಪರ್-8ರಲ್ಲಿ ಒಂದೂ ಪಂದ್ಯ ಗೆಲ್ಲದೆ ಟೀಂ ಇಂಡಿಯಾ ನಿರಾಸೆ ಅನುಭವಿಸಿತ್ತು. ಈ ಸಲವೂ ವಿಂಡೀಸ್ನಲ್ಲೇ ವರ್ಲ್ಡ್‌ಕಪ್ ನಡೆಯುತ್ತಿರುವುದರಿಂದ ಭಾರತೀಯರಿಗೆ ಆತಂಕ ಶುರುವಾಗಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್