Asianet Suvarna News Asianet Suvarna News

ಕಳಪೆ ಆಟವಾಡಿ ಟಿ20 ವಿಶ್ವಕಪ್‌ನಿಂದ ಔಟ್‌: ಪಾಕ್‌ ಆಟಗಾರರ ಸಂಬಳ ಕಟ್‌?

ಮೂಲಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪಿಸಿಬಿ ಶೀಘ್ರವೇ ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದ್ದು, ಆಟಗಾರರಿಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Babar Rizwan Shaheen and others salaries to be reduced PCB plans strict action after T20 World Cup debacle kvn
Author
First Published Jun 16, 2024, 11:58 AM IST

ಲಾಹೋರ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ, ಗುಂಪು ಹಂತದಲ್ಲೇ ಪಾಕಿಸ್ತಾನ ತಂಡ ಹೊರಬಿದ್ದಿದ್ದಕ್ಕೆ ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದ್ದು, ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪಿಸಿಬಿ ಶೀಘ್ರವೇ ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದ್ದು, ಆಟಗಾರರಿಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಟ್ರೋಫಿ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಯುಎಸ್‌ ಡಾಲರ್‌(83 ಲಕ್ಷ ರು.) ನೀಡುವುದಾಗಿ ಪಿಸಿಬಿ ಘೋಷಿಸಿತ್ತು. ಆದರೆ ಈಗ ಸಂಬಳವನ್ನೇ ಕಡಿತಗೊಳಿಸಲು ಮುಂದಾಗಿದೆ.

ಈ ಬಾರಿ ಕನಿಷ್ಠ ಮೊತ್ತಗಳ ಟಿ20 ವಿಶ್ವಕಪ್‌: 10 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್..!

ಪಾಕ್‌ ತಂಡದಲ್ಲಿ 3 ಬಣ!

ತಂಡದೊಳಗಿನ ಬಣ ರಾಜಕೀಯವೇ ಈ ಬಾರಿ ಪಾಕ್‌ನ ವಿಶ್ವಕಪ್‌ ಸೋಲಿಗೆ ಕಾರಣ ಎಂದು ವರದಿಯಾಗಿದೆ. ತಂಡದಲ್ಲಿ ಬಣಗಳಿರುವ ಬಗ್ಗೆ ಪಿಸಿಬಿ ಮೂಲಗಳಿಂದಲೇ ತಿಳಿದುಬಂದಿದ್ದು, ಇದರಿಂದಾಗಿ ಆಟಗಾರರ ನಡುವೆ ಸಮನ್ವಯತೆ ಇರಲಿಲ್ಲ ಎನ್ನಲಾಗಿದೆ. ಏಕದಿನ ವಿಶ್ವಕಪ್‌ ಬಳಿಕ ಬಾಬರ್ ಆಜಂ ನಾಯಕತ್ವ ತೊರೆದಿದ್ದರು. ಹೀಗಾಗಿ ಶಾಹೀನ್‌ ಅಫ್ರಿದಿಯನ್ನು ಟಿ20 ನಾಯಕನಾಗಿ ನೇಮಿಸಲಾಗಿತ್ತು. ಆದರೆ ಟಿ20 ವಿಶ್ವಕಪ್‌ಗೂ ಮುನ್ನ ಆಜಂರನ್ನೇ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ತಂಡದಲ್ಲಿ ಆಜಂ, ಶಾಹೀನ್‌ ಹಾಗೂ ರಿಜ್ವಾನ್‌ರ 3 ಬಣಗಳು ಸೃಷ್ಟಿಯಾಗಿವೆ ಎಂದು ಮೂಲಗಳು ತಿಳಿಸಿದೆ.

ಇದು ನನ್ನ ಕೊನೆ ಟಿ20 ವಿಶ್ವಕಪ್: ಟ್ರೆಂಟ್ ಬೌಲ್ಡ್

ಟ್ರಿನಿಡಾಡ್: ನ್ಯೂಜಿಲೆಂಡ್‌ನ ತಾರಾ ವೇಗದ ಬೌಲರ್ ಟ್ರೆಂಟ್ ಬೌಲ್ಡ್, ಇದು ತನ್ನ ಕೊನೆಯ ಟಿ20 ವಿಶ್ವಕಪ್ ಎಂದು ಹೇಳಿದ್ದಾರೆ. ಉಗಾಂಡ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಗೆಲುವಿನ ಬಳಿಕ ಮಾತನಾಡಿರುವ ಅವರು, 'ಇದುವೇ ನನ್ನ ಕೊನೆಯ ಟಿ20 ವಿಶ್ವಕಪ್. ಮುಂದೆ ಆಡುವುದಿಲ್ಲ ಎಂದಿದ್ದಾರೆ. 

ಆದರೆ ಅವರು ನ್ಯೂಜಿಲೆಂಡ್ ಪರ ಬೇರೆ ಮಾದರಿಗಳಲ್ಲಿ ಆಡುತ್ತಾರೊ ಇಲ್ಲವೊ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. 2022ರಲ್ಲಿ ಬೌಲ್ಡ್ ನ್ಯೂಜಿಲೆಂಡ್‌ನ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದರು. ಬಳಿಕ ವಿಶ್ವದ ಬೇರೆ ಬೇರೆ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದರು. ರಾಷ್ಟ್ರೀಯ ತಂಡದಿಂದ ದೂರ ಉಳಿದ ಹೊರತಾಗಿಯೂ ಈ ಬಾರಿ ಟಿ20 ವಿಶ್ವಕಪ್‌ಗೆ ಆಯ್ಕೆ ಯಾಗಿದ್ದರು. ಟೂರ್ನಿಯಲ್ಲಿ ಅವರು 3 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ.

ಈ ಬಾರಿ ಕನಿಷ್ಠ ಮೊತ್ತಗಳ ಟಿ20 ವಿಶ್ವಕಪ್‌: 10 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್..!

ಕೊನೆಗೂ ಕಿವೀಸ್‌ಗೆ ಗೆಲುವಿನ ಸಿಹಿ

ಟ್ರಿನಿಡಾಡ್: ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್ -8 ರೇಸ್‌ನಿಂದ ಈಗಾಗಲೇ ಹೊರಬಿದ್ದಿರುವ 2021ರ ರನ್ನರ್-ಅಪ್ ನ್ಯೂಜಿಲೆಂಡ್, ಶನಿವಾರ ಉಗಾಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಸತತ 2 ಪಂದ್ಯ ಸೋತಿದ್ದ ಕಿವೀಸ್ ಕೊನೆಗೂ ಮೊದಲ ಜಯ ದಾಖಲಿಸಿ 'ಸಿ' ಗುಂಪಿನಲ್ಲಿ ಅಂಕ ಖಾತೆ ತೆರೆದರೆ, ಉಗಾಂಡ 3 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಮೊದಲು ಬ್ಯಾಟ್ ಮಾಡಿದ ಉಗಾಂಡ 18.4 ಓವರ್‌ಗಳಲ್ಲಿ 40 ರನ್‌ಗೆ ಆಲೌಟಾಯಿತು. 2 ರನ್‌ 3 ವಿಕೆಟ್ ಕಳೆದುಕೊಂಡ ತಂಡ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಟ್ರೆಂಟ್ ಬೌಲ್ಟ್ ಸೌಥಿ ಮಾರಕ ವೇಗ, ಸ್ಯಾಂಟರ್, ರಚನ್ ರವೀಂದ್ರ ಸ್ಪಿನ್ ಮೋಡಿ ಮುಂದೆ ಉಗಾಂಡ ನಿರುತ್ತರವಾಯಿತು. ಸೌಥಿ 4 ಓವರಲ್ಲಿ 1 ಮೇಡಿನ್ ಸಹಿತ 4 ರನ್‌ಗೆ 3 ವಿಕೆಟ್ ಕಿತ್ತರೆ, ಬೌಲ್ಡ್, ಸ್ಯಾಂಟರ್ ಹಾಗೂ ರಚಿನ್ ತಲಾ 2 ವಿಕೆಟ್ ಪಡೆದರು. ಸುಲಭ ಗುರಿಯನ್ನು ಕಿವೀಸ್ ಕೇವಲ 5.2 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ಡೆವೋನ್ ಕಾನ್ವೇ 15 ಎಸೆತಗಳಲ್ಲಿ 22 ರನ್ ಗಳಿಸಿದರು. 

ಸ್ಕೋರ್: 
ಉಗಾಂಡ 18.4 ಓವರಲ್ಲಿ 40/10 (ಕೆನ್ನೆತ್ 11, ಸೌಥಿ 3-4, ಬೌಲ್ಟ್ 2-7)
ನ್ಯೂಜಿಲೆಂಡ್ 5.2 ಓವರಲ್ಲಿ 41/1 (ಕಾನ್ವೇ 22*, ಅಲಿ ಶಾ 1-10) 
ಪಂದ್ಯಶ್ರೇಷ್ಠ: ಟಿಮ್ ಸೌಥಿ

02ನೇ ಕನಿಷ್ಠ: ಕಿವೀಸ್ ತಂಡದ ವಿರುದ್ಧ ಉಗಾಂಡ ಗಳಿಸಿದ 40 ರನ್ ಐಸಿಸಿ ಟಿ20 ವಿಶ್ವಕಪ್‌ನಲ್ಲೇ 2ನೇ ಕನಿಷ್ಠ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡ ತಂಡ 39 ರನ್‌ಗೆ ಆಲೌಟಾಗಿತ್ತು. 2014ರಲ್ಲಿ ಶ್ರೀಲಂಕಾ ತಂಡದ ವಿರುದ್ಧ ನೆದ‌ಲೆಂಡ್ 39 ರನ್‌ಗೆ ಆಲೌಟಾಗಿದ್ದು ಈಗಲೂ ಅತಿ ಕನಿಷ್ಠ ಎನಿಸಿಕೊಂಡಿದೆ.

 

Latest Videos
Follow Us:
Download App:
  • android
  • ios