Asianet Suvarna News Asianet Suvarna News

ಇಂಡೋ ಪಾಕ್ ಪಂದ್ಯ ವೀಕ್ಷಿಸಿದರೆ 5 ಸಾವಿರ ರೂ ದಂಡ, ಶ್ರೀನಗರದ ಕಾಲೇಜು ಆಡಳಿತ ಮಂಡಳಿ ಆದೇಶ!

ಜಮ್ಮ ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿಶೇಷ ಆದೇಶ ನೀಡಿದೆ. ಕಾಲೇಜಿನ  ವಿದ್ಯಾರ್ಥಿಗಳು ಇಂಡೋ-ಪಾಕ್ ಪಂದ್ಯ ವೀಕ್ಷಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.  ಕಾಲೇಜು ಆದೇಶಕ್ಕೆ ಕಾರಣವೇನು? ಇಲ್ಲಿದೆ
 

Srinagar NIT college asked students not watch India vs Pakistan Asia cup match rs 5k fine for rules violation ckm
Author
Bengaluru, First Published Aug 28, 2022, 3:44 PM IST

ಶ್ರೀನಗರ(ಆ.28): ಇಡೀ ಜಗತ್ತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ವೀಕ್ಷಿಸಲು ಸಜ್ಜಾಗಿದೆ.  ರೋಚಕ ಹೋರಾಟಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಎಲ್ಲಾ ತಯಾರಿ ಮಾಡಿಕೊಂಡು ಟಿವಿ ಮುಂದ ಕುಳಿತಿದ್ದಾರೆ. ಆದರೆ ಇಂಡೋ ಪಾಕ್ ಪಂದ್ಯವನ್ನು ನೋಡಬಾರದು. ಒಂದು ವೇಳೆ ಆದೇಶ ಉಲ್ಲಂಘಿಸಿದರೆ 5,000 ರೂಪಾಯಿ ದಂಡ ಹಾಕಲಾಗುತ್ತದೆ. ಇಷ್ಟೇ ಅಲ್ಲ ಪಂದ್ಯದ ಕುರಿತು ಯಾವುದೇ ಕಮೆಂಟ್ ಮಾಡಿದರೂ ಶಿಕ್ಷೆ ತಪ್ಪಿದ್ದಲ್ಲ. ಇದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ನೀಡಿರುವ ಆದೇಶ. ಜಮ್ಮು ಮತ್ತು ಕಾಶ್ಮೀರದ ಶ್ರೀಗನರದಲ್ಲಿರುವ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(NIT) ಕಾಲೇಜು ಆಡಳಿತ ಮಂಡಳಿ ಈ ಆದೇಶ ಹೊರಡಿಸಿದೆ. ಭಾನುವಾರ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ನೀಡಿರುವ ಹಾಸ್ಟೆಲ್ ರೂಂ ಬಿಟ್ಟು ಹೊರಗೆ ಬರುವಂತಿಲ್ಲ.  ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಕೋಣೆ ಪ್ರವೇಶಿಸಿ ಪಂದ್ಯ ನೋಡುವಂತಿಲ್ಲ ಎಂದು ಆಡಳಿತ ಮಂಡಳಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

NIT ಕಾಲೇಜಿನ ಡೀನ್ ಈ ಆದೇಶ ಹೊರಡಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಯಾವುದೇ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಹೇಳಿದೆ.  ನಿಮಯ ಉಲ್ಲಂಘಿಸಿದರೆ ದಂಡದ ಜೊತೆಗೆ ಕಾಲೇಜಿನಿಂದ ಡಿಬಾರ್ ಮಾಡಲಾಗುವುದು ಎಂದು ಡೀನ್ ಹೇಳಿದ್ದಾರೆ.  ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಕಾಲೇಜು ವಿದ್ಯಾರ್ಥಿಗಳು ಗುಂಪಾಗಿ ನೋಡುವಂತಿಲ್ಲ. ತಮ್ಮ ತಮ್ಮ ಹಾಸ್ಟೆಲ್‌ ರೂಂನಲ್ಲೇ ವಿದ್ಯಾರ್ಥಿಗಳು ಇರಬೇಕು. ಇತರರ ಕೋಣೆಯೊಳಗೆ ವಿದ್ಯಾರ್ಥಿಗಳು ಪ್ರವೇಶಿಸಿ ಗುಂಪಾಗಿ ಪಂದ್ಯ ನೋಡುವಂತಿಲ್ಲ. ಇನ್ನು ಪಂದ್ಯದ ಕುರಿತು ಯಾವುದೇ ಪ್ರತಿಕ್ರಿಯೆ, ಅಭಿಪ್ರಾಯ, ಕಮೆಂಟ್ ಹಾಕುವಂತಿಲ್ಲ. ಪಂದ್ಯ ಮುಗಿದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಹೊರಬರುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ 5,000 ರೂಪಾಯಿ ದಂಡ ಹಾಗೂ ಕಾಲೇಜಿನಿಂದ ಡಿಬಾರ್ ಮಾಡಲಾಗುತ್ತದೆ.

3 ಮಾದರಿಯಲ್ಲೂ 100 ಪಂದ್ಯ: ಹೊಸ ಮೈಲಿಗಲ್ಲು ನೆಡಲು ಕಿಂಗ್ ಕೊಹ್ಲಿ ರೆಡಿ..!

ಈ ಆದೇಶಕ್ಕೆ ಮುಖ್ಯ ಕಾರಣ ಈ ಹಿಂದಿನ ಟೀಂ ಇಂಡಿಯಾ ಪಂದ್ಯವನ್ನು ವೀಕ್ಷಿಸಿದ ಬಳಿಕ ಕಾಲೇಜು ವಿದ್ಯಾರ್ಥಿಗಳು ಹಲವು ಘೋಷಣೆಗಳನ್ನು ಕೂಗಿದ್ದಾರೆ. ಭಾರತ ವಿರೋಧಿ ಘೋಷಣೆ, ಎದುರಾಳಿ ತಂಡದ ಪರ ಘೋಷಣೆ ಕೂಗಿದ  ವಿಡಿಯೋ ವೈರಲ್ ಆಗಿತ್ತು. ಇದರಿಂದ ದಾರು ದಾಖಲಾಗಿತ್ತು. ಕ್ರಿಕೆಟ್ ಪಂದ್ಯದಲ್ಲಿ ಕಾಲೇಜು ವಿವಾದಕ್ಕೆ ಸಿಲುಕಿತ್ತು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವ ಆಡಳಿತ ಮಂಡಳಿ ಗುಂಪಾಗಿ ಪಂದ್ಯ ನೋಡದಂತೆ ತಾಕೀತು ಮಾಡಿದೆ. ಆದರೆ ಕಾಲೇಜು ಹಾಸ್ಟೆಲ್‌ನಲ್ಲಿ ಒಬ್ಬರೆ ಪಂದ್ಯ ವೀಕ್ಷಿಸಲು ಅವಕಾಶ ನೀಡಿದೆ. 

ಏಷ್ಯಾಕಪ್ ಟೂರ್ನಿಯ ದ್ವಿತೀಯ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಗೆಲುವಿನ ವಿಶ್ವಾಸದಲ್ಲಿದೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಮುಗ್ಗರಿಸಿತ್ತು. 

ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನ್ ಶುಭಾರಂಭ, ಲಂಕಾ ವಿರುದ್ಧ ಭರ್ಜರಿ ಗೆಲುವು!

 

Follow Us:
Download App:
  • android
  • ios