Asianet Suvarna News Asianet Suvarna News

ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನ್ ಶುಭಾರಂಭ, ಲಂಕಾ ವಿರುದ್ಧ ಭರ್ಜರಿ ಗೆಲುವು!

ಏಷ್ಯಾಕಪ್ ಉದ್ಘಟನಾ ಪಂದ್ಯದಲ್ಲಿ ಆಫ್ಘಾನಿಸ್ತಾನ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಆಫ್ಘಾನ್ 8 ವಿಕೆಟ್ ಗೆಲುವು ಕಂಡಿದೆ.

Allrounder performance help Afghanistan to beat sri lanka by 8 wickets in Asia cup opening match ckm
Author
Bengaluru, First Published Aug 27, 2022, 10:51 PM IST

ದುಬೈ(ಆ.28): ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಶುಭಾರಂಭ ಮಾಡಿದೆ. ಶ್ರೀಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ಹಾಗೂ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. 106 ರನ್‌ಗಳ ಸುಲಭ ಗುರಿ ಪಡೆದಿದ್ದ ಆಫ್ಘಾನಿಸ್ತಾನ ಕೇವಲ 2 ವಿಕೆಟ್ ಕಳೆದುಕೊಂಡು 10.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿದೆ. ಸುಲಭ ಟಾರ್ಗೆಟ್ ಪಡೆದ ಆಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಹಜ್ರತುಲ್ಹಾ ಝಝೈ ಹಾಗೂ ರಹೆಮಾನುಲ್ಲಾ ಗುರ್ಬಾಜ್ ಆರಂಭಕ್ಕೆ ಲಂಕಾ ಹೈರಾಣಾಯಿತು. ಝೈಝೈ ಕೇವಲ 27 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಇತ್ತ ಗುರ್ಜಾಬ್ ಕೇವಲ 18 ಎಸೆತದಲ್ಲಿ 40 ರನ್ ಸಿಡಿಸಿದರು. ಇತ್ತ ಇಬ್ರಾಹಿಂ ಜರ್ದಾನ್ ಹಾಗೂ ನಜೀಬುಲ್ಲ ಜರ್ದಾನ್ ಹೋರಾಟದಿಂದ ಆಫ್ಘಾನ್ ಸುಲಭವಾಗಿ ಗೆಲುವಿನತ್ತ ದಾಪುಗಾಲಿಟ್ಟಿತು. ಇಬ್ರಾಹಿಂ ಅಜೇಯ 15 ರನ್ ಸಿಡಿಸಿದರೆ, ನಜೀಬುಲ್ಲಾ ಅಜೇಯ 2 ರನ್ ಸಿಡಿಸಿದರು. ಅತ್ಯುತ್ತಮ ಬೌಲಿಂಗ್ ಮೂಲಕ ಶ್ರೀಲಂಕಾ ತಂಡದ ಪತನಕ್ಕೆ ಕಾರಣವಾದ ಫಜಲಾಖ್ ಫೂರೂಖಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ತಂಡಕ್ಕೆ ಆಫ್ಘಾನಿಸ್ತಾನ ಬೌಲರ್‌ಗಳು ಶಾಕ್ ನೀಡಿದರು. ಫಜಲಾಖ್ ಫೂರೂಖಿ ಆರಂಭದಲ್ಲೇ ಲಂಕಾ ತಂಡಕ್ಕೆ ಹೊಡೆತ ನೀಡಿದರು. ಕುಸಾಲ್ ಮೆಂಡಿಸ್ ಹಾಗೂ ಅಸಲಂಕಾ ವಿಕೆಟ್ ಕಬಳಿಸಿದ ಫಾರೂಖಿ ಆಫ್ಘಾನಿಸ್ತಾನ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿದರು. ಪಥುಮ್ ನಿಸಂಕಾ 3 ರನ್ ಸಿಡಿಸಿ ಔಟಾದರು. ಗುಣತಿಲಕ 17 ರನ್ ಸಿಡಿಸಿ ಔಟಾದರು. 49 ರನ್‌ಗಳಿಗೆ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡಿತು. 

10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಭಾನುಕಾ ರಾಜಪಕ್ಸೆ ಹೋರಾಟ ನೀಡಿದರೆ, ಇತರರು ಕಳಪೆ ಆಟ ಪ್ರದರ್ಶಿಸಿದರು. ಆದರೆ ಭಾನುಕ ಜೊತೆ ಚಾಮಿರ ಕರುಣಾರತ್ನೆ ಹೊರಾಟ ಲಂಕಾ ತಂಡವನ್ನು 100 ರನ ಗಡಿ ದಾಟಿಸಿತು. ಭಾನುಜ ರಾಜಪಕ್ಸೆ 38 ರನ್ ಸಿಡಿಸಿ ಔಟಾದರೆ, ಕರುಣಾರತ್ನೆ 31 ರನ್ ಸಿಡಿಸಿ ಔಟಾದರು. ಈ ಮೂಲಕ ಶ್ರೀಲಂಕಾ 105 ರನ್ ಸಿಡಿಸಿತು. 

ಟೂರ್ನಿ ಮಾದರಿ ಹೇಗೆ?
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಷ್ಘಾನಿಸ್ತಾನ ಮತ್ತು ಹಾಂಕಾಂಗ್‌ ತಂಡಗಳು ಸೆಣಸಲಿವೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್‌ ಇದ್ದರೆ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಷ್ಘಾನಿಸ್ತಾನ ಇವೆ. ಪ್ರತಿ ತಂಡಗಳು ಉಳಿದ 2 ತಂಡಗಳು ವಿರುದ್ಧ ಆಡಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್‌-4ಗೆ ಪ್ರವೇಶಿಸಲಿವೆ. ಸೂಪರ್‌-4ನಲ್ಲಿ ಒಂದು ತಂಡ ಉಳಿದ 3 ತಂಡಗಳು ವಿರುದ್ಧ ಸೆಣಸಲಿದ್ದು, ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ಗೇರಲಿವೆ.

ರೋಹಿತ್ ಶರ್ಮಾ 'ರಿಯಲ್' ಕ್ಯಾಪ್ಟನ್‌: ಚಹಲ್‌ ದಾಂಪತ್ಯದ ಗಾಳಿಸುದ್ದಿಗೆ ಹಿಟ್‌ಮ್ಯಾನ್ ಚಾಟಿ..!

Follow Us:
Download App:
  • android
  • ios