Asianet Suvarna News Asianet Suvarna News

ಬೆಂಗ್ಳೂ​ರಲ್ಲಿ ದ್ರಾವಿಡ್‌ ಭೇಟಿಯಾಗಲಿದ್ದಾರೆ ಗಂಗೂಲಿ!

ಬಿಸಿಸಿಐ ಅಧ್ಯಕ್ಷರಾದ ಬಳಿಕ ಸೌರವ್ ಗಂಗೂಲಿ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

sourav ganguly will meet rahul dravid in national cricket academy bengaluru
Author
Bengaluru, First Published Oct 29, 2019, 10:23 AM IST

ಬೆಂಗಳೂರು(ಅ.29):  ಹಲವು ವರ್ಷಗಳ ಕಾಲ ಜತೆಯಲ್ಲಿ ಆಡಿದ ಸೌರವ್‌ ಗಂಗೂಲಿ ಹಾಗೂ ರಾಹುಲ್‌ ದ್ರಾವಿಡ್‌ ಬುಧ​ವಾರ( ಅ.30) ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆ​ಮಿ (ಎನ್‌ಸಿಎ)ಯಲ್ಲಿ ಭೇಟಿ​ಯಾ​ಗ​ಲಿ​ದ್ದಾರೆ. ಭಾರತೀಯ ಕ್ರಿಕೆಟ್‌ನ ಮಾರ್ಗಸೂಚಿ ಬಗ್ಗೆ ಮಾಜಿ ನಾಯಕರಿಬ್ಬರು ಚರ್ಚಿಸಲಿದ್ದಾರೆ. 

ಇದನ್ನೂ ಓದಿ: ಗಂಗೂಲಿ ಅಥವಾ ಲಕ್ಷ್ಮಣ್? ICC ಪ್ರಶ್ನೆಗೆ ಫ್ಯಾನ್ಸ್ ಉತ್ತರ!

ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಅಧಿಕಾರ ಸ್ವೀಕರಿಸಿದ ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಜುಲೈನಲ್ಲಿ ಎನ್‌ಸಿಎ ಜವಾಬ್ದಾರಿ ವಹಿಸಿದ ದ್ರಾವಿಡ್‌, ಭಾರ​ತೀಯ ಕ್ರಿಕೆಟ್‌ಗೆ ಮಾರ್ಗಸೂಚಿ ರಚಿಸಿದ್ದಾರೆ. ಈ ಭೇಟಿ ವೇಳೆ ಗಂಗೂಲಿ ತಮ್ಮ ಸಲಹೆಗಳನ್ನೂ ದ್ರಾವಿಡ್‌ ಜೊತೆ ಹಂಚಿಕೊಳ್ಳಲಿದ್ದಾರೆ. 

ಇದನ್ನೂ ಓದಿ: ದ್ರಾವಿಡ್ ಭೇಟಿಯಾದ ಕೊಹ್ಲಿ; ನಿಜವಾದ ದಿಗ್ಗಜರ ಸಮಾಗಮ ಎಂದ ಫ್ಯಾನ್ಸ್!

ಪೃಥ್ವಿ ಶಾ ಡೋಪಿಂಗ್‌, ವೃದ್ಧಿ​ಮಾ​ನ್‌ ಸಾಹ, ಹಾರ್ದಿಕ್‌ ಪಾಂಡ್ಯ ಅವರ ಫಿಟ್ನೆಸ್‌ ನಿರ್ವ​ಹಣೆಯಲ್ಲಿ ಎನ್‌ಸಿಎ ಎಡ​ವಟ್ಟು ಮಾಡಿದ್ದು, ಅಂತಹ ಘಟನೆಗಳನ್ನು ತಪ್ಪಿ​ಸು​ವುದು ಹೇಗೆ ಎನ್ನುವ ಬಗ್ಗೆ ಪ್ರಮು​ಖ​ವಾಗಿ ಚರ್ಚೆಯಾಗ​ಲಿದೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.

ಇದನ್ನೂ ಓದಿ: ಕೋಲ್ಕತಾದಲ್ಲಿ ಮೊದಲ ಹಗ​ಲು-ರಾತ್ರಿ ಟೆಸ್ಟ್‌?

ಬಿಸಿಸಿಐ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸೌರವ್ ಗಂಗೂಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಗಂಗೂಲಿಯನ್ನು ಆತ್ಮೀಯವಾಗಿ ಸ್ವಾಗತಿಸಲು ಕರ್ನಾಟಕ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. 
 

Follow Us:
Download App:
  • android
  • ios