ನಾಯಕ ವಿರಾಟ್ ಕೊಹ್ಲಿ ಹಾಗೂ NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಭೇಟಿ ಫೋಟೋ ಇದೀಗ ವೈರಲ್ ಆಗಿದೆ. ಬಿಸಿಸಿಐ ಟ್ವೀಟ್‌ಗೆ ತಿರುಗೇಟು ನೀಡಿರುವ ಫ್ಯಾನ್ಸ್, ನಿಜವಾದ ಇಬ್ಬರು ದಿಗ್ಗಜರು ಅಂದರೆ ಇವರು ಎಂದು ಟ್ವೀಟ್ ಮಾಡಿದ್ದಾರೆ. 

ಬೆಂಗಳೂರು(ಸೆ.21): ಉದ್ಯಾನ ನಗರಿ ಬೆಂಗಳೂರಿನಲ್ಲಿ ತಂಗಿರುವ ಟೀಂ ಇಂಡಿಯಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಸೌತ್ ಆಫ್ರಿಕಾ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕಾಗಿ ಅಂತಿಮ ಕಸರತ್ತು ನಡೆಸುತ್ತಿದೆ. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA) ನೂತನ ಚೇರ್ಮೆನ್ ರಾಹುಲ್ ದ್ರಾವಿಡ್ ಭೇಟಿಯಾಗಿದ್ದಾರೆ. ಈ ಫೋಟೋ ಮೂಲಕ ಅಭಿಮಾನಿಗಳು ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ.

Scroll to load tweet…

ಇದನ್ನೂ ಓದಿ: ದಿಗ್ಗಜ ದ್ರಾವಿಡ್‍‌ ಜೊತೆ ರವಿ ಶಾಸ್ತ್ರಿ ಹೋಲಿಸಬೇಡಿ; BCCIಗೆ ಅಭಿಮಾನಿಗಳ ಕ್ಲಾಸ್!

ಅಭ್ಯಾಸದ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಭೇಟಿಯಾಗಿದ್ದಾರೆ. ಈ ಫೋಟವನ್ನು ಸ್ವತಃ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಕ್ಷಣವೇ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ದಿಗ್ಗಜರ ಸಮಾಗಮ, ಇಬ್ಬರು ದಿಗ್ಗಜರು ಭೇಟಿಯಾದಾಗ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಬಿಸಿಸಿಐ ಇತ್ತೀಚೆಗೆ ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ಫೋಟೋ ಟ್ವೀಟ್ ಮಾಡಿ ಇಬ್ಬರು ದಿಗ್ಗಜರು ಎಂದಿತ್ತು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಬಿಸಿಸಿಐ ದಿಗ್ಗಜರಿಗೆ ಅಭಿಮಾನಿಗಳು ಕೊಹ್ಲಿ ಹಾಗೂ ದ್ರಾವಿಡ್ ನಿಜವಾದ ದಿಗ್ಗಜರು ಎಂದು ಹೇಳೋ ಮೂಲಕ ಟಾಂಗ್ ನೀಡಿದ್ದಾರೆ.

Scroll to load tweet…

ಇದನ್ನೂ ಓದಿ: ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಬಿರುಸಿನ ಅಭ್ಯಾಸ


Scroll to load tweet…
Scroll to load tweet…
Scroll to load tweet…
Scroll to load tweet…