ದುಬೈ(ಅ.26): ಬಿಸಿಸಿಐ ನೂತನ ಅಧ್ಯಕ್ಷ, ಮಾಜಿ ನಾಯಕ ಸೌರವ್ ಗಂಗೂಲಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಸನ್ಮಾನ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಪಾಲ್ಗೊಂಡಿದ್ದರು. ಇಬ್ಬರು ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರು. ಇದೀಗ ಇವರಿಬ್ಬರ ಫೋಟೋವನ್ನು ಶೇರ್ ಮಾಡಿದ ಐಸಿಸಿ, ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾದರೆ ಯಾರನ್ನು ಎಂದು ಪ್ರಶ್ನಿಸಿತ್ತು. ಇದಕ್ಕೆ ಭಾರತೀಯ ಅಭಿಮಾನಿಗಳು ಉತ್ತರಿಸಿದ್ದಾರೆ.

 

ಇದನ್ನೂ ಓದಿ: ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!

ಲಕ್ಷ್ಮಣ್ ಹಾಗೂ ಗಂಗೂಲಿ ಇಬ್ಬರಲ್ಲಿ ಒಬ್ಬರ ಆಯ್ಕೆ ಕಷ್ಟ. ಇಬ್ಬರೂ ದಿಗ್ಗಜ ಕ್ರಿಕೆಟಿಗರು. ಇಬ್ಬರ ಕೂಡುಗೆ ಅಮೂಲ್ಯವಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಏಕದಿನಕ್ಕೆ ಗಂಗೂಲಿ, ಟೆಸ್ಟ್‌ಗೆ ಲಕ್ಷ್ಮಣ್ ಎಂದಿದ್ದಾರೆ.