ಬಾಂಗ್ಲಾ ಎದುರಿನ ಪಂದ್ಯಕ್ಕೂ ಮುನ್ನ ಬಿಗ್ ಶಾಕ್: ರೋಹಿತ್ ಶರ್ಮಾ ಮೇಲೆ ಪೊಲೀಸರಿಂದ 3 ಪ್ರತ್ಯೇಕ ಕೇಸ್ ದಾಖಲು..!
ಪ್ರಸಕ್ತ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ, ಭರ್ಜರಿ ಲಯದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದ ರೋಹಿತ್ ಶರ್ಮಾ, ಆಫ್ಘಾನಿಸ್ತಾನ ಎದುರು ಸ್ಪೋಟಕ 131 ರನ್ ಸಿಡಿಸಿದ್ದರು. ಇದಾದ ಬಳಿಕ ಬದ್ದ ಎದುರಾಳಿ ಪಾಕಿಸ್ತಾನ ಎದುರು ಹಿಟ್‌ಮ್ಯಾನ್ ಚುರುಕಿನ 86 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಟೀಂ ಇಂಡಿಯಾ ನಾಯಕ, ಬಾಂಗ್ಲಾದೇಶ ಎದುರು ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
ಮುಂಬೈ(ಅ.19): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂದು ವಿಶ್ವಕಪ್ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಹೀಗಿರುವಾಗಲೇ ರೋಹಿತ್ ಶರ್ಮಾಗೆ ಪುಣೆ ಪೊಲೀಸರು ಶಾಕ್ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನಾಡಲು ಪುಣೆಗೆ ತಮ್ಮ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ರೋಹಿತ್ ಶರ್ಮಾ, ಅತಿವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಪೊಲೀಸರು 3 ಪ್ರತ್ಯೇಕ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.
ಅಕ್ಟೋಬರ್ 14ರಂದು ಪಾಕಿಸ್ತಾನ ವಿರುದ್ಧ ಅಹಮದಾಬಾದ್‌ನಲ್ಲಿ ಪಂದ್ಯ ಮುಗಿಸಿ ಮುಂಬೈನ ತಮ್ಮ ನಿವಾಸಕ್ಕೆ ತೆರಳಿದ್ದ ರೋಹಿತ್, 2 ದಿನಗಳ ಹಿಂದೆ ತಂಡ ಕೂಡಿಕೊಳ್ಳಲು ಪುಣೆಗೆ ತೆರಳುವಾಗ ಎಕ್ಸ್‌ಪ್ರೆಸ್ ವೇನಲ್ಲಿ ತಮ್ಮ ಲಾಂಬೊರ್ಗಿನಿ ಕಾರಿನಲ್ಲಿ ಗಂಟೆಗೆ 200 ಕಿ.ಮೀ. ಗಿಂತಲೂ ವೇಗವಾಗಿ ಕಾರು ಚಲಾಯಿಸಿದ್ದಾರೆ. ಕೆಲವೊಮ್ಮೆ ಅವರ ಕಾರು 215 ಕಿ.ಮೀ. ವೇಗವನ್ನೂ ದಾಟಿತ್ತು ಎಂದು ತಿಳಿದುಬಂದಿದೆ.
ಪ್ರಸಕ್ತ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ, ಭರ್ಜರಿ ಲಯದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದ ರೋಹಿತ್ ಶರ್ಮಾ, ಆಫ್ಘಾನಿಸ್ತಾನ ಎದುರು ಸ್ಪೋಟಕ 131 ರನ್ ಸಿಡಿಸಿದ್ದರು. ಇದಾದ ಬಳಿಕ ಬದ್ದ ಎದುರಾಳಿ ಪಾಕಿಸ್ತಾನ ಎದುರು ಹಿಟ್‌ಮ್ಯಾನ್ ಚುರುಕಿನ 86 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಟೀಂ ಇಂಡಿಯಾ ನಾಯಕ, ಬಾಂಗ್ಲಾದೇಶ ಎದುರು ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
ಭಾರತ ತನ್ನ ನಿರ್ಭೀತ ಆಟದಿಂದ ಎಲ್ಲರಲ್ಲೂ ಭಯ ಹುಟ್ಟಿಸಿದೆ: ಬಾಂಗ್ಲಾ ಕೋಚ್!
ಪುಣೆ: ಭಾರತ ತಂಡ ವಿಶ್ವಕಪ್‌ನಲ್ಲಿ ನಿಭೀತ ಆಟವಾಡುತ್ತಿದ್ದು, ಇದು ಉಳಿದೆಲ್ಲಾ ತಂಡಗಳಲ್ಲಿ ಭಯ ಮೂಡಿಸಿದೆ ಎಂದು ಬಾಂಗ್ಲಾದೇಶ ತಂಡದ ಪ್ರಧಾನ ಕೋಚ್ ಚಂದಿಕಾ ಹತುರುಸಿಂಘ ಅಭಿಪ್ರಾಯಿಸಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಲ್ಲಾ ವಿಭಾಗಗಳಲ್ಲೂ ಭಾರತ ಬಲಿಷ್ಠ ಸಂಪನ್ಮೂಲಗಳನ್ನು ಹೊಂದಿದೆ. ಬುಮ್ರಾರಂತಹ ವಿಶ್ವ ಶ್ರೇಷ್ಠ ಬೌಲರ್ ಇದ್ದಾರೆ. ಅನುಭವಿ ಸ್ಪಿನ್ನರ್‌ಗಳ ಬಲವಿದೆ. ತಂಡದ ಬ್ಯಾಟಿಂಗ್ ವಿಭಾಗ ಅದರಲ್ಲೂ ಅಗ್ರ ಕ್ರಮಾಂಕದ ಸಿಡಿಲಬ್ಬರದ ಆಟ ಎದುರಾಳಿಗಳಲ್ಲಿ ಭಯ ಹುಟ್ಟಿಸಿರುವುದು ಸುಳ್ಳಲ್ಲ’ ಎಂದಿದ್ದಾರೆ.
ICC World Cup 2023: ಬಾಂಗ್ಲಾ ಹುಲಿಗಳ ಬೇಟೆಗೆ ಭಾರತ ರೆಡಿ..!
ಕಳೆದ 12 ತಿಂಗಳಲ್ಲಿ ಭಾರತವನ್ನು ಬಲವಾಗಿ ಕಾಡಿರುವ ಬಾಂಗ್ಲಾದೇಶ!
ಕಳೆದ ಒಂದು ವರ್ಷದಲ್ಲಿ ಭಾರತವನ್ನು ಅತಿಯಾಗಿ ಕಾಡಿರುವ ತಂಡ ಬಾಂಗ್ಲಾದೇಶ. ಇತ್ತೀಚಿನ ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ ಭಾರತ, ಶುಭ್‌ಮನ್ ಗಿಲ್‌ರ ಶತಕದ ಹೊರತಾಗಿಯೂ ಬಾಂಗ್ಲಾಕ್ಕೆ ಶರಣಾಗಿತ್ತು. ಕಳೆದ ವರ್ಷ ಬಾಂಗ್ಲಾ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 1-2ರಲ್ಲಿ ಸೋತಿತ್ತು.
1998ರ ಬಳಿಕ ಮೊದಲ ಪಂದ್ಯ!
ಬಾಂಗ್ಲಾದೇಶಕ್ಕೆ ಇದು 1998ರ ಬಳಿಕ ಭಾರತದಲ್ಲಿ ಭಾರತ ವಿರುದ್ಧ ಮೊದಲ ಪಂದ್ಯ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 1998ರಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಎದುರಾಗಿದ್ದವು. ಆಗ ಬಾಂಗ್ಲಾ ತಂಡದಲ್ಲಿದ್ದ ಮಿನ್ಹಜುಲ್ ಅಬೆದಿನ್ ಈಗ ತಂಡದ ಪ್ರಧಾನ ಆಯ್ಕೆಗಾರ, ಖಾಲೆದ್ ಮಹ್ಮುದ್ ತಂಡದ ನಿರ್ದೇಶಕ, ಅಥರ್ ಅಲಿ ಖಾನ್ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಹಮದಾಬಾದ್‌ನಲ್ಲಿ ಬಿಸಿಸಿಐ ವಾಮಾಚಾರ ಮಾಡಿ ಪಾಕಿಸ್ತಾನವನ್ನು ಸೋಲಿಸಿದೆ..!
ಯಾವ ತಂಡವನ್ನೂ ಲಘುವಾಗಿ ಪರಿಗಣಿಸಬಾರದು: ಕೊಹ್ಲಿ!
ಪುಣೆ: ವಿಶ್ವಕಪ್‌ನಲ್ಲಿ ‘ದೊಡ್ಡ ತಂಡ’ ಎಂದು ಯಾವುದೂ ಇಲ್ಲ ಎಂದು ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಪ್ರಾಯಿಸಿದ್ದಾರೆ. ನೆದರ್‌ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡಗಳ ಪ್ರದರ್ಶನದ ಬಗ್ಗೆ ವಿಮರ್ಶೆ ಮಾಡಿರುವ ಕೊಹ್ಲಿ, ‘ವಿಶ್ವಕಪ್‌ನಲ್ಲಿ ದೊಡ್ಡ ತಂಡ ಎಂದು ಯಾವುದೂ ಇಲ್ಲ. ಬಲಿಷ್ಠ ತಂಡಗಳನ್ನು ಎದುರಿಸುವುದರ ಕಡೆಗಷ್ಟೇ ಗಮನ ಹರಿಸಿದಾಗ ಇಂತಹ ಆಘಾತಕಾರಿ ಫಲಿತಾಂಶಗಳು ಹೊರಬೀಳುವುದು ಸಾಮಾನ್ಯ. ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಬಾರದು’ ಎಂದಿದ್ದಾರೆ.