ವಿಶ್ವ ಕ್ರಿಕೆಟ್‌ನಲ್ಲಿ ಹಲವು ಅತ್ಯುತ್ತಮ ಫೀಲ್ಡರ್‌ಗಳಿದ್ದಾರೆ. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಸದ್ಯ ಕ್ರಿಕೆಟ್‌ನಲ್ಲಿರುವ ಅತ್ಯುತ್ತಮ ಫೀಲ್ಡರ್ ಯಾರು ಅನ್ನೋದನ್ನು ಹೇಳಿದ್ದಾರೆ. 

ಮೆಲ್ಬೋರ್ನ್(ಜೂ.15): ಆಧುನಿಕ ಕ್ರಿಕೆಟ್ ಬದಲಾಗಿದೆ. ಫಿಟ್ನೆಸ್‌ಗೆ ಮೊದಲ ಆದ್ಯತೆ ಸಿಕ್ಕಿದೆ. ಎಲ್ಲಾ ತಂಡಗಳು ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡಿದೆ. ಎಲ್ಲರೂ ಫಿಟ್ ಆಗಿರುವ ಕಾರಣ ಫೀಲ್ಡಿಂಗ್ ಅತ್ಯುತ್ತಮವಾಗಿದೆ. ಇದರಲ್ಲಿ ಬೆಸ್ಟ್ ಫೀಲ್ಡರ್ ಯಾರು ಅನ್ನೋದನ್ನು ಸ್ಟೀವ್ ಸ್ಮಿತ್ ಬಹಿರಂಗ ಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಪ್ರಕಾರ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ ಬೆಸ್ಟ್ ಫೀಲ್ಡರ್ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ರವೀಂದ್ರ ಜಡೇಜಾ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ!...

ರವೀಂದ್ರ ಜಡೇಜಾ ಫೀಲ್ಡಿಂಗನ್ನು ಬಹುತೇಕ ಎಲ್ಲಾ ದಿಗ್ಗಜ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಜಡ್ಡು ಬಳಿ ಬಾಲ್ ಹೋದಾಗ ರನ್ ಓಡಿದರೆ ರನೌಟ್ ಪಕ್ಕಾ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿದೆ. ಅಷ್ಟರ ಮಟ್ಟಿಗೆ ಚುರುಕುತನ ಹಾಗೂ ನಿಖರತೆ ಜಡೇಜಾ ಹೊಂದಿದ್ದಾರೆ. ಇದೀಗ ಸ್ಟೀವ್ ಸ್ಮಿತ್ ಕೂಡ ರವೀಂದ್ರ ಜಡೇಜಾ ಬೆಸ್ಟ್ ಫೀಲ್ಡರ್ ಎಂದಿದ್ದಾರೆ.

ಸಚಿನ್-ಸೆಹ್ವಾಗ್ ಇಬ್ಬರಲ್ಲಿ ಯಾರು ಬೆಸ್ಟ್? ರೋಹಿತ್ ಕೊಟ್ರು ಡಿಫರೆಂಟ್ ಉತ್ರ

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಶ್ನೆಗೆ ಸ್ಟೀವ್ ಸ್ಮಿತ್ ಉತ್ತರಿಸಿತ್ತು ಜಡ್ಡುಗೆ ಬೆಸ್ಟ್ ಫೀಲ್ಡರ್ ಪಟ್ಟ ನೀಡಿದ್ದಾರೆ. ಇನ್ನು ಪ್ರದರ್ಶನದಲ್ಲಿ ನಿಮ್ಮನ್ನು ಆಕರ್ಷಿಸಿದ ಭಾರತೀಯ ಬ್ಯಾಟ್ಸ‌್‌ಮನ್ ಯಾರು ಅನ್ನೋ ಪ್ರಶ್ನೆಗೆ ಸ್ಟೀವ್ ಸ್ಮಿತ್, ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ. ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದಿದ್ದಾರೆ. ಯುವ ಜನರೇಶನ್‌ನಲ್ಲಿ ರಾಹುಲ್ ಬೆಸ್ಟ್ ಎಂದಿದ್ದಾರೆ.