ಮುಂಬೈ(ಜೂ.10): ಕೊರೋನಾ ವೈರಸ್ ಕಾರಣ ಕ್ರಿಕೆಟಿಗರೆಲ್ಲಾ ಮನೆಯೊಳಗೆ ಬಂದಿಯಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.  ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಇತ್ತೀಚೆಗೆ ನಾಯಕ ವಿರಾಟ್ ಕೊಹ್ಲಿ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಇದೀಗ ಕೊಹ್ಲಿ ತಿರುಗೇಟು ನೀಡಿದ್ದಾರೆ. 

ಕೊನೆಗೂ ಟಿಕ್‌ ಟಾಕ್‌ ಖಾತೆ ತೆರೆದ ಕ್ಯಾಪ್ಟನ್ ವಿರಾಟ್‌ ಕೊಹ್ಲಿ?

ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ಪೋಟೋ ಶೇರ್ ಮಾಡಿದ್ದರು. ಈ ಫೋಟದಲ್ಲಿ ಕೊಹ್ಲಿ ಅಂಪೈರ್ ರಿವ್ಯೂ ಕೇಳುತ್ತಿದ್ದರೆ. ಜಡೇಜಾ, ಕೊಹ್ಲಿಯನ್ನೇ ನೋಡುತ್ತಿದ್ದಾರೆ. ಬಳಿಕ ಜಡೇಜಾ , ನೋಡು ಸಹೋದರ  ನಾನು DRS ತೆಗೆದುಕೊಳ್ಳಲು ಹೇಳಿಲ್ಲ ಎಂದು ಕ್ಯಾಪ್ಶನ್ ಹಾಕಿದ್ದರು. 

 

 
 
 
 
 
 
 
 
 
 
 
 
 

Dekho bhai meine nai bola hai review lene ko🤪@virat.kohli #DRS #skipper

A post shared by Ravindra Jadeja (@royalnavghan) on Jun 9, 2020 at 10:17pm PDT

ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯೋಚಿಸಿದ್ದರಂತೆ ರಾಬಿನ್ ಉತ್ತಪ್ಪ..!.

ಜಡೇಜಾ ಈ ಪೋಸ್ಟ್‌ಗೆ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿನಗೆ ಎಲ್ಲವೂ ಔಟ್ ಎಂದೇ ಕಾಣಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರವೀಂದ್ ಜಡೇಜಾ ಪ್ರತಿ ಬಾರಿ ಕೊಹ್ಲಿ ಬಳಿ ರಿವ್ಯೂವ್ ಕೇಳಲು ಹೇಳುತ್ತಾರೆ. ಜಡೇಜಾ ಮಾತಿನಂತೆ ರಿವ್ಯೂ ಕೇಳಿದರೆ ಇದ್ದ ಎರಡು ಆಯ್ಕೆಯೂ ಇಲ್ಲದಾಗುತ್ತದೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.