ಮುಂಬೈ(ಜೂ.15): ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿದ್ದು, ಕ್ರಿಕೆಟ್ ಆಟಗಾರರು ಮನೆಯಲ್ಲಿಯೇ ಟೈಮ್‌ ಪಾಸ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕೆಲವು ಆಟಗಾರರು ಅಭಿಮಾನಿಗಳೊಂದಿಗೆ ಚಾಟಿಂಗ್ ನಡೆಸುವ ಮೂಲಕ ಸಂಪರ್ಕ ಕಾಯ್ದುಕೊಂಡಿದ್ದಾರೆ. ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ಅಭಿಮಾನಿಗಳು ಕೇಳಿದ ಟ್ರಿಕ್ಕಿ ಪ್ರಶ್ನೆಗಳಿಗೆ ಡಿಫೆರೆಂಟ್ ಆಗಿ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬ ಹಿಟ್‌ಮ್ಯಾನ್‌ಗೆ ಮುಂಬೈಕರ್ ಸಚಿನ್ ತೆಂಡುಲ್ಕರ್ ಹಾಗೂ ಡೆಲ್ಲಿ ಡ್ಯಾಷರ್ ವಿರೇಂದ್ರ ಸೆಹ್ವಾಗ್ ಇಬ್ಬರಲ್ಲಿ ಯಾರು ಬೆಸ್ಟ್ ಎಂದು ಪ್ರಶ್ನಿಸಿದ್ದಾರೆ.

ಈ ಇಬ್ಬರು ಆಟಗಾರರು ತಮ್ಮದೇ ಆದ ಸ್ಪೋಟಕ ಬ್ಯಾಟಿಂಗ್ ಶೈಲಿಯ ಮೂಲಕ ಮಿಂಚಿದ್ದಾರೆ. ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಎಂತಹ ಎದುರಾಳಿ ಬೌಲಿಂಗ್ ಪಡೆಯಿದ್ದರೂ ಅದನ್ನು ಧ್ವಂಸ ಮಾಡಿದ್ದಾರೆ. ಈ ಇಬ್ಬರು ಆರಂಭಿಕರು ಜಗತ್ತಿನಾದ್ಯಂತ ತಮ್ಮದೇ ಆದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳ ಈ ವಿವಾದಾತ್ಮಕ ಪ್ರಶ್ನೆಗೆ ರೋಹಿತ್ ಚಾಣಾಕ್ಷವಾದ ಉತ್ತರ ನೀಡಿದ್ದಾರೆ. ನನ್ನನ್ನು ಸಾಯಿಸಬೇಕು ಅಂತಾ ಇದ್ದೀರಾ ಎಂದು ಅಭಿಮಾನಿಗೆ ಮರು ಪ್ರಶ್ನೆ ಹಾಕಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಉಪ​ನಾ​ಯಕ ರೋಹಿತ್‌ ಶರ್ಮಾ, ಈ ವರ್ಷ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌) ಹಾಗೂ ಐಸಿಸಿ ಟಿ20 ವಿಶ್ವ​ಕಪ್‌ ಎರಡೂ ನಡೆ​ಯ​ಲಿ ಎಂದಿ​ದ್ದಾರೆ. 

ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆ ಶೂನ್ಯ; ಗೌತಮ್ ಗಂಭೀರ್!

ಇನ್‌ಸ್ಟಾಗ್ರಾಂನಲ್ಲಿ ಸಂವಾದ ನಡೆ​ಸಿದ ರೋಹಿತ್‌, ಅಭಿ​ಮಾ​ನಿ​ಯೊಬ್ಬ ‘ಈ ವರ್ಷ ಯಾವ ಟೂರ್ನಿ ಆಡಲು ಬಯ​ಸು​ತ್ತೀರಾ’ ಎಂದು ಕೇಳಿದ ಪ್ರಶ್ನೆಗೆ ಉತ್ತ​ರಿ​ಸಿದ ರೋಹಿತ್‌, ‘ಎ​ರಡೂ ಟೂರ್ನಿ​ಗ​ಳಿಗೆ ಆದ್ಯತೆ ನೀಡ​ಲಿ​ದ್ದೇನೆ’ ಎಂದರು. ಅಕ್ಟೋ​ಬರ್‌-ನವೆಂಬರ್‌ನಲ್ಲಿ ನಡೆ​ಯ​ಬೇ​ಕಿ​ರುವ ವಿಶ್ವ​ಕಪ್‌ ಬಗ್ಗೆ ಮುಂದಿನ ತಿಂಗಳು ನಿರ್ಧಾರ ಕೈಗೊ​ಳ್ಳು​ವು​ದಾಗಿ ಐಸಿಸಿ ತಿಳಿ​ಸಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್"