Asianet Suvarna News Asianet Suvarna News

Team India ಸ್ಟಾರ್ ಕ್ರಿಕೆಟಿಗನಿಗೆ ಕೋವಿಡ್ ದೃಢ, ಇಂಗ್ಲೆಂಡ್ ಪ್ರಯಾಣ ಕೊಂಚ ತಡ..!

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್
ಜುಲೈ 01ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ
ಇಂಗ್ಲೆಂಡ್‌ ಎದುರು ಟೆಸ್ಟ್‌ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿರುವ ಭಾರತ

Ravichandran Ashwin England departure delayed after testing Covid 19 positive kvn
Author
Bengaluru, First Published Jun 21, 2022, 11:25 AM IST

ನವದೆಹಲಿ(ಜೂ.21): ಟೀಂ ಇಂಡಿಯಾ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ (Ravichandran Ashwin) ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಂಗ್ಲೆಂಡ್ ಪ್ರವಾಸಕ್ಕೆ ಹೊರಟಿದ್ದ ಭಾರತ ವಿಮಾನವನ್ನು ಅವರು ಮಿಸ್ ಮಾಡಿಕೊಂಡಿದ್ದಾರೆ. ಜೂನ್ 16ರಂದೇ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನೊಳಗೊಂಡ ತಂಡವು ಇಂಗ್ಲೆಂಡ್‌ಗೆ ಹಾರಿದೆ. ಆದರೆ ಅಶ್ವಿನ್ ಕೊಂಚ ತಡವಾಗಿ ಭಾರತ ಟೆಸ್ಟ್ ತಂಡವನ್ನು ಕೂಡಿಕೊಳ್ಳಿದ್ದಾರೆ ಎಂದು ವರದಿಯಾಗಿದೆ. ಸದ್ಯ ರವಿಚಂದ್ರನ್ ಅಶ್ವಿನ್ ಕ್ವಾರಂಟೈನ್‌ನಲ್ಲಿದ್ದು, ಲೀಸೆಸ್ಟರ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಸದ್ಯ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್‌ಗೆ ಬಂದಿಳಿದ್ದು, ಲೀಸೆಸ್ಟರ್‌ಶೈರ್ ಕೌಂಟಿ ಗ್ರೌಂಡ್‌ನಲ್ಲಿ ಜೂನ್ 24ರಿಂದ 4 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಅಭ್ಯಾಸ ಪಂದ್ಯದಿಂದ ಅಶ್ವಿನ್ ಹೊರಗುಳಿಯಲಿದ್ದಾರೆ. ಇನ್ನು ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಕಳೆದ ವರ್ಷ ನಡೆಯಬೇಕಿದ್ದ ಕೊನೆಯ ಹಾಗೂ 5ನೇ ಟೆಸ್ಟ್ ಪಂದ್ಯವು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆ ಟೆಸ್ಟ್ ಪಂದ್ಯವು ಇದೀಗ ಮುಂಬರುವ ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.

ರವಿಚಂದ್ರನ್ ಅಶ್ವಿನ್‌, ಎಲ್ಲಾ ರೀತಿಯ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿದ ಬಳಿಕವಷ್ಟೇ ಇಂಗ್ಲೆಂಡ್‌ನತ್ತ ವಿಮಾನವೇರಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈಗಾಗಲೇ ಬಹುತೇಕ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ಜೂನ್ 16ರಂದೇ ಇಂಗ್ಲೆಂಡ್‌ಗೆ ಬಂದಿಳಿದಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಒಂದು ದಿನ ತಡವಾಗಿ ಇಂಗ್ಲೆಂಡ್ ತಲುಪಿದ್ದಾರೆ. ಇನ್ನುಳಿದಂತೆ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಜೂನ್ 19ರಂದು ಬೆಂಗಳೂರಿನಲ್ಲಿ ಮಳೆಯಿಂದ ರದ್ದಾದ ಪಂದ್ಯವನ್ನು ಮುಗಿಸಿ ಇಂಗ್ಲೆಂಡ್‌ನತ್ತ ಹಾರಿದ್ದಾರೆ.

ಇಂಗ್ಲೆಂಡ್ ತೆರಳುವ ಮುನ್ನ ರವಿಚಂದ್ರನ್ ಅಶ್ವಿನ್‌ಗೆ ಕೋವಿಡ್ ದೃಢಪಟ್ಟಿದ್ದರಿಂದ ಅವರು ಭಾರತ ತಂಡದ (Indian Cricket Team) ಜತೆಗೆ ಇಂಗ್ಲೆಂಡ್‌ಗೆ ವಿಮಾನವನ್ನು ಏರಲಿಲ್ಲ. ಆದರೆ ಅಶ್ವಿನ್ ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗುವ ವಿಶ್ವಾಸವಿದ್ದು, ಜುಲೈ 01ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಗುಣಮುಖರಾಗುವ ವಿಶ್ವಾಸವಿದೆ. ಆದರೆ ಲೀಸೆಸ್ಟರ್‌ಶೈರ್‌ ವಿರುದ್ದ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅಶ್ವಿನ್ ಪಾಲ್ಗೊಳ್ಳುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗೋದು ಡೌಟ್ ಎಂದ ಮಾಜಿ ವೇಗಿ..!

ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್‌, ರಾಜಸ್ಥಾನ ರಾಯಲ್ಸ್ ವಿರುದ್ದ ಕಣಕ್ಕಿಳಿದಿದ್ದರು. ಇದಾದ ಬಳಿ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದಾರೆ. ಅಚ್ಚರಿ ಎನ್ನುವಂತೆ ರವಿಚಂದ್ರನ್ ಅಶ್ವಿನ್, ಕಳೆದ ವರ್ಷ ಇಂಗ್ಲೆಂಡ್‌ ವಿರುದ್ದ ನಡೆದ ಮೊದಲ 4 ಪಂದ್ಯಗಳಲ್ಲೂ ಅಶ್ವಿನ್ ಬೆಂಚ್ ಕಾಯಿಸಿದ್ದರು. ಅಶ್ವಿನ್‌ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

Follow Us:
Download App:
  • android
  • ios