ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ ಬ್ಯಾಟಿಂಗ್ ಕಂಡು ವಿಚಿತ್ರವೆನಿಸಿತು ಎಂದ ರವಿಶಾಸ್ತ್ರಿ..!

* ಬರ್ಮಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
* ಸ್ಟುವರ್ಟ್ ಬ್ರಾಡ್ ಓವರ್‌ವೊಂದರಲ್ಲಿ 29 ರನ್ ಚಚ್ಚಿದ ಬುಮ್ರಾ
* ಬುಮ್ರಾ ಬ್ಯಾಟಿಂಗ್ ಕುರಿತಂತೆ ಅಚ್ಚರಿ ಹೊರಹಾಕಿದ ರವಿಶಾಸ್ತ್ರಿ

Ravi Shastri stunned with Jasprit Bumrah world record against England Pacer Stuart Broad in Birmingham Test kvn

ಬರ್ಮಿಂಗ್‌ಹ್ಯಾಮ್(ಜು.03): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಎಜ್‌ಬಾಸ್ಟನ್ ಟೆಸ್ಟ್‌ ಪಂದ್ಯದಲ್ಲಿ ಬುಮ್ರಾ, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ವೊಂದರಲ್ಲಿ ಬರೋಬ್ಬರಿ 29 ರನ್ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ವಿಶ್ವದಾಖಲೆ ಬರೆದಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ಜಸ್ಪ್ರೀತ್ ಬುಮ್ರಾ ಅವರ ಬ್ಯಾಟಿಂಗ್ ಕುರಿತಂತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮೊದಲು ಕ್ರಿಕೆಟ್‌ ದಿಗ್ಗಜ ಬ್ರಿಯಾನ್ ಲಾರಾ, ಆಸ್ಟ್ರೇಲಿಯಾದ ಜಾರ್ಜ್‌ ಬೈಲಿ ಹಾಗೂ ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್ ಟೆಸ್ಟ್‌ ಪಂದ್ಯದ ಓವರ್‌ವೊಂದರಲ್ಲಿ 28 ರನ್ ಬಾರಿಸಿದ್ದರು. ಆದರೆ ಇದೀಗ ಬುಮ್ರಾ 29 ರನ್ ಚಚ್ಚುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದೀಗ ಬುಮ್ರಾ ಬ್ಯಾಟಿಂಗ್ ಕುರಿತಂತೆ ರವಿಶಾಸ್ತ್ರಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ. 

35 ರನ್ ಬಾರಿಸಿದ್ದಾಗ ಮತ್ತೊಮ್ಮೆ ಮೈಕ್‌ ಹಿಡಿಯಿರಿ ಎಂದು ಹೇಳಬೇಡಿ. ಯುವರಾಜ್ ಸಿಂಗ್ (Yuvraj Singh) ಓವರ್‌ವೊಂದರಲ್ಲಿ 36 ರನ್ ಬಾರಿಸಿದ್ದಾಗ, ನಾನೇ 36 ರನ್‌ ಬಾರಿಸಿದ್ದ ಅನುಭವವಾಗಿತ್ತು. ಆದರೆ ನಾನಿಂದು ನೋಡಿದ್ದು ನಿಜಕ್ಕೂ ವಿಚಿತ್ರವಾಗಿತ್ತು ಎಂದು ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿದ್ದ ರವಿಶಾಸ್ತ್ರಿ ಹೇಳಿದ್ದಾರೆ.

ನಾನಿದನ್ನು ಕಲ್ಪನೆಯನ್ನೂ ಸಹಾ ಮಾಡಿಕೊಂಡಿರಲಿಲ್ಲ. ಭಾರತದ ನಾಯಕನಾಗಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ (Jasprit Bumrah) 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ರಿಯಾನ್ ಲಾರಾ, ಜಾರ್ಜ್‌ ಬೈಲಿ, ಕೇಶವ್ ಮಹರಾಜ್ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ದಾಖಲೆಯನ್ನು ಅಳಿಸಿಹಾಕಿದ್ದಾರೆ. ಓವರ್‌ವೊಂದರಲ್ಲಿ ಬ್ಯಾಟಿಂದಲೇ ಬುಮ್ರಾ 29 ರನ್‌ ಸಿಡಿಸಿದ್ದಾರೆ. ಯುವರಾಜ್ ಸಿಂಗ್ 6 ಬಾಲಿಗೆ 6 ಸಿಕ್ಸರ್ ಚಚ್ಚಿದ ಬೌಲರ್ ಎದುರೇ ಬುಮ್ರಾ ಈ ಸಾಧನೆ ಮಾಡಿದ್ದಾರೆ. ಸ್ಟುವರ್ಟ್‌ ಬ್ರಾಡ್ ಓವರ್‌ವೊಂದರಲ್ಲಿ 35 ರನ್ ನೀಡುವ ಮೂಲಕ ಮತ್ತೆ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Ind vs Eng ಆಕರ್ಷಕ ಶತಕ ಚಚ್ಚಿ ಟೀಂ ಇಂಡಿಯಾಗೆ ಆಸರೆಯಾದ ಜಡೇಜಾ..!

ರಿಷಭ್ ಪಂತ್ (Rshabh Pant), ರವೀಂದ್ರ ಜಡೇಜಾ (Ravindra Jadeja) ಶತಕ ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎದುರು ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 416 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಭಾರತ ತಂಡವನ್ನು ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡುವಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದಂತ್ಯದ ವೇಳೆ ಇಂಗ್ಲೆಂಡ್ ತಂಡವು 84 ರನ್‌ಗಳಿಗೆ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Latest Videos
Follow Us:
Download App:
  • android
  • ios