ರಾಜ್‌ಕೋಟ್‌ನಲ್ಲಿ ಇತಿಹಾಸ ನಿರ್ಮಿಸಲು ಇಬ್ಬರು ಲೆಜೆಂಡ್ ಬೌಲರ್ಸ್ ರೆಡಿ..!
ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ. 3ನೇ ಟೆಸ್ಟ್ ನಾಡಿದ್ದು ಆರಂಭವಾಗಲಿದೆ. ಈಗ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡು ತಂಡಗಳು ಹೋರಾಟ ನಡೆಸಲಿವೆ. 3ನೇ ಟೆಸ್ಟ್ ಗೆದ್ದು ಸರಣಿ ಮೇಲೆ ಹಿಡಿತ ಸಾಧಿಸಬೇಕಿದೆ.
ರಾಜ್‌ಕೋಟ್(ಫೆ.13): 3ನೇ ಟೆಸ್ಟ್ ಗೆಲ್ಲೋ ಒತ್ತಡದಲ್ಲಿ ಭಾರತ-ಇಂಗ್ಲೆಂಡ್ ತಂಡಗಳಿವೆ. ಹಾಗೆ ಟೆಸ್ಟ್ ಗೆಲ್ಲಿಸಿಕೊಡುವ ಒತ್ತಡದಲ್ಲಿ ಇಬ್ಬರು ಪ್ಲೇಯರ್ಸ್ ಇದ್ದಾರೆ. ಈ ಇಬ್ಬರು ರಾಜ್‌ಕೋಟ್‌ನಲ್ಲಿ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ವಿಕೆಟ್ ಬೇಟೆಯಾಡಿದ್ರೆ ಈ ಇಬ್ಬರು ಅಪರೂಪದ ದಾಖಲೆ ಮಾಡಲಿದ್ದಾರೆ.......
3ನೇ ಟೆಸ್ಟ್‌ನಲ್ಲಿ ದಾಖಲೆ ಮಾಡಲು ಇಬ್ಬರು ರೆಡಿ..!
ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ. 3ನೇ ಟೆಸ್ಟ್ ನಾಡಿದ್ದು ಆರಂಭವಾಗಲಿದೆ. ಈಗ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡು ತಂಡಗಳು ಹೋರಾಟ ನಡೆಸಲಿವೆ. 3ನೇ ಟೆಸ್ಟ್ ಗೆದ್ದು ಸರಣಿ ಮೇಲೆ ಹಿಡಿತ ಸಾಧಿಸಬೇಕಿದೆ. ಹಾಗಾಗಿ ರಾಜ್‌ಕೋಟ್‌ನಲ್ಲಿ ಗೆಲುವು ಅನಿವಾರ್ಯ. ರಾಜ್‌ಕೋಟ್‌ನಲ್ಲಿ ರಾಜನಂತೆ ಮರೆಯಬೇಕಾದ್ರೆ ಆಯಾ ತಂಡದ ಸ್ಟಾರ್ ಬೌಲರ್ಸ್ ಮಿಂಚಬೇಕು. ಆ ಬೌಲರ್ಸ್ ತಮ್ಮ ತಂಡಕ್ಕೆ ಗೆಲುವು ತಂದುಕೊಡುವುದರ ಜೊತೆ ಹೊಸ ಮೈಲಿಗಲ್ಲು ಮುಟ್ಟುವ ಸನಿಹದಲ್ಲಿದ್ದಾರೆ.
Rajkot Test: ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ ರೆಡಿ..!
700 ವಿಕೆಟ್‌ಗೆ ಬೇಕಿದೆ ಇನ್ನೈದು ವಿಕೆಟ್
21 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್, 184 ಟೆಸ್ಟ್‌ಗಳಿಂದ 695 ವಿಕೆಟ್ ಪಡೆದಿದ್ದಾರೆ. ಇನ್ನೈದು ವಿಕೆಟ್ ಪಡೆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ವಿಶ್ವದ ಮೂರನೇ ಹಾಗೂ ಮೊದಲ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಮುರಳೀಧರನ್ 800 ಮತ್ತು ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್, 3ನೇ ಟೆಸ್ಟ್ನಲ್ಲಿ ಐದು ವಿಕೆಟ್ ಕಬಳಿಸಿದ್ರೆ, 700 ಕ್ಲಬ್‌ಗೆ ಸೇರಲಿದ್ದಾರೆ.
ಎರಡು ದಶಕಗಳಿಂದ ಆಡುತ್ತಿದ್ದರೂ ಆಂಡರ್ಸನ್, ಮೊಣಚು ಕಡಿಮೆಯಾಗಿಲ್ಲ. ಸ್ವಿಂಗ್ ಮಾಸ್ಟರ್ ಎಂದೇ ಫೇಮಸ್ ಆಗಿದ್ದಾರೆ. ಸ್ಪಿನ್ ಟ್ರ್ಯಾಕ್ ಪಿಚ್ನಲ್ಲೂ ಅದ್ಭುತವಾಗಿ ಬೌಲಿಂಗ್ ಮಾಡಲಿದ್ದಾರೆ. ಮೊದಲ ಟೆಸ್ಟ್ ಆಡಿದ್ದರೆ, ಇಷ್ಟೊತ್ತಿಗೆ ಈ ರೆಕಾರ್ಡ್ ಬ್ರೇಕ್ ಮಾಡುತ್ತಿದ್ದರು. ಆದ್ರೆ ಅವರನ್ನ ಆಡಿಸಲಿಲ್ಲ. 2ನೇ ಟೆಸ್ಟ್ನಲ್ಲಿ ಐದು ವಿಕೆಟ್ ಪಡೆದಿದ್ದರು. ಇನ್ನೈದು ವಿಕೆಟ್ ಅನ್ನ ರಾಜ್‌ಕೋಟ್‌ನಲ್ಲಿ ಪಡೆಯುವ ಗುರಿ ಹೊಂದಿದ್ದಾರೆ. ಅಲ್ಲಿಗೆ ಜೇಮ್ಸ್ ವಿಶ್ವದಾಖಲೆ ನಿರ್ಮಿಸುವ ಸಮೀಪದಲ್ಲಿದ್ದಾರೆ.
Ind vs Eng 3rd Test: ಕೆ ಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್ ಇನ್..!
500 ವಿಕೆಟ್‌ಗೆ ಅಶ್ವಿನ್‌ಗೆ ಬೇಕು ಇನ್ನೊಂದು ವಿಕೆಟ್
ಆಫ್ ಸ್ಪಿನ್ನರ್ ಆರ್. ಅಶ್ವಿನ್, 97 ಟೆಸ್ಟ್‌ಗಳಿಂದ 499 ವಿಕೆಟ್ ಪಡೆದಿದ್ದಾರೆ. 3ನೇ ಟೆಸ್ಟ್ನಲ್ಲಿ ಇನ್ನೊಂದು ವಿಕೆಟ್ ಕಬಳಿಸಿದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 500 ವಿಕೆಟ್ ಪಡೆದ, ವಿಶ್ವದ 9ನೇ ಹಾಗೂ ಭಾರತದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ. 600 ವಿಕೆಟ್ ಪಡೆದ 5ನೇ ಸ್ಪಿನ್ನರ್ ಆಗಲಿದ್ದಾರೆ. ವಿಶಾಖಪಟ್ಟಣದಲ್ಲಿ ಈ ಸಾಧನೆ ಮಾಡಬೇಕಿತ್ತು. ಆದ್ರೆ 3 ವಿಕೆಟ್ ಪಡೆದಿದ್ದ ಅಶ್ವಿನ್, ಇನ್ನೊಂದು ವಿಕೆಟ್ ಪಡೆಯಲಾಗಲಿಲ್ಲ. ಈಗ ರಾಜ್‌ಕೋಟ್‌ನಲ್ಲಿ ಈ ದಾಖಲೆ ಮಾಡಲು ಎದುರು ನೋಡ್ತಿದ್ದಾರೆ.
ಭಾರತದಲ್ಲಿ ಟೆಸ್ಟ್ ನಡೆದ್ರೆ ಅಶ್ವಿನ್, ಎದುರಾಳಿ ಪಡೆಗೆ ಸಿಂಹಸ್ವಪ್ನ. ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್ ಪಡೆದಿದ್ದ ಚೆನ್ನೈ ಬೌಲರ್, 2ನೇ ಟೆಸ್ಟ್‌ನಲ್ಲಿ ಯಾಕೋ ಡಲ್ ಆದ್ರೂ. ಬರೀ 3 ವಿಕೆಟ್‌ಗೆ ಸುಮ್ಮನಾದ್ರು. ಆದ್ರೆ ರಾಜ್‌ಕೋಟ್ ಪಿಚ್ ಸ್ಪಿನ್ನರ್ಗಳಿಗೆ ಸ್ವರ್ಗ. ಹಾಗಾಗಿ ಅಶ್ವಿನ್ ದಾಖಲೆ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್