Asianet Suvarna News Asianet Suvarna News

ರಾಜ್ಯ ಅಂಡರ್ - 14 ತಂಡಕ್ಕೆ ದ್ರಾವಿಡ್‌ ಪುತ್ರ ಅನ್ವಯ್‌ ನಾಯಕ: ಸ್ವಜನಪಕ್ಷಪಾತ ಟೀಕೆಗೆ ಮಾಜಿ ಕ್ರಿಕೆಟಿಗ ಪ್ರತಿಕ್ರಿಯೆ..

ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ಗೆ ಆಯ್ಕೆ ಮಾಡಿದಾಗಲೂ ಇದೇ ರೀತಿ ಟೀಕೆ ಕೇಳಿಬಂದಿತ್ತು. ಇತ್ತೀಚೆಗೆ, ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಪುತ್ರ ಅನ್ವಯ್‌ ದ್ರಾವಿಡ್‌ ಕರ್ನಾಟಕ ತಂಡದ ಅಂಡರ್ - 14 ತಂಡದ ನಾಯಕನಾಗಿ ಆಯ್ಕೆಯಾಗಿದ್ದಕ್ಕೂ ಟೀಕೆ ಕೇಳಿಬಂದಿದೆ.

rahul dravids son anvay getting under 14 captaincy sparks nepotism debate angry legend reacts ash
Author
First Published Jan 21, 2023, 3:58 PM IST

ಬೆಂಗಳೂರು (ಜನವರಿ 21, 2023): ಯಾವುದೇ ಕ್ರೀಡೆಯೇ ಆಗಿರಬಹುದು, ಅಥವಾ ಯಾವುದೇ ಕ್ಷೇತ್ರದಲ್ಲಾಗಲೀ ಸ್ವಜನಪಕ್ಷಪಾತ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತದೆ. ಕ್ರಿಕೆಟ್‌ ಸಹ ಇದಕ್ಕೆ ಹೊರತಲ್ಲ. ಖ್ಯಾತ ಕ್ರಿಕೆಟ್‌ ಆಟಗಾರನ ಸರ್‌ನೇಮ್‌ ಹೊಂದಿರುವ ಅಂದರೆ ಆತನ ಪುತ್ರ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದರೆ ಸ್ವಜನಪಕ್ಷಪಾತ ಎಂಬ ಟೀಕೆ ಹೆಚ್ಚಾಗಿ ಕೇಳಿಬರುತ್ತದೆ. ಹಲವು ಜನರು ಮೊದಲು ಇದೇ ಪದವನ್ನೇ ಬಳಸುತ್ತಾರೆ. ಆ ಆಟಗಾರನ ಹಿಂದಿನ ಪಂದ್ಯಗಳಲ್ಲಿನ ಸಾಧನೆ ಏನು ಅಥವಾ ಆತನ ಸ್ಟ್ಯಾಟಿಸ್ಟಿಕ್ಸ್‌ ಏನು ಎಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ಅದರ ಬದಲಾಗಿ ಕೊನೆಯ ಹೆಸರನ್ನು ನೋಡಿ ಇದು ಸ್ವಜನಪಕ್ಷಪಾತದ ಆಯ್ಕೆ ಎಂದು ಟೀಕೆ ಮಾಡುತ್ತಾರೆ. 

ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ಗೆ ಆಯ್ಕೆ ಮಾಡಿದಾಗಲೂ ಇದೇ ರೀತಿ ಟೀಕೆ ಕೇಳಿಬಂದಿತ್ತು. ಇತ್ತೀಚೆಗೆ, ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಪುತ್ರ ಅನ್ವಯ್‌ ದ್ರಾವಿಡ್‌ ಕರ್ನಾಟಕ ತಂಡದ ಅಂಡರ್ - 14 ತಂಡದ ನಾಯಕನಾಗಿ ಆಯ್ಕೆಯಾಗಿದ್ದಕ್ಕೂ ಟೀಕೆ ಕೇಳಿಬಂದಿದೆ. ಅನ್ವಯ್‌ ದ್ರಾವಿಡ್‌ ಪಿ. ಕೃಷ್ಣ ಮೂರ್ತಿ ಟ್ರೋಫಿ ಎಂಬ ಜೂನಿಯರ್‌ ಮಟ್ಟದ ಟ್ರೋಫಿಗೆ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ವಲಯ ತಂಡಗಳ ಈ ಕ್ರೀಡಾಕೂಟದ ಕೇರಳದಲ್ಲಿ ಜನವರಿ 23 ರಿಂದ ಫೆಬ್ರವರಿ 11 ರವರೆಗೆ ನಡೆಯಲಿದೆ.  

ಇದನ್ನು ಓದಿ: ಮತ್ತೆ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌

ಇನ್ನು, ತಂದೆ ರಾಹುಲ್‌ ದ್ರಾವಿಡ್‌ ತಂಡಕ್ಕೆ ಅಗತ್ಯವಿದ್ದ ವೇಳೆ ಮಾತ್ರ ಕೀಪರ್‌ ಆಗಿ ಹಲವು ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಆದರೆ, ಪುತ್ರ ಅನ್ವಯ್‌ ನಿಜವಾಗಿಯೂ ಸ್ಪೆಷಲಿಸ್ಟ್‌ ವಿಕೆಟ್‌ ಕೀಪರ್‌ ಹಾಗೂ ಅಪ್ಪನಂತೆ ಒಳ್ಳೆಯ ಬ್ಯಾಟ್ಸ್‌ಮನ್. ಹೌದು, ಹದಿಹರೆಯದ ಹುಡುಗ ಕೀಪರ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಅಪ್ಪನಂತೆ ತನ್ನ ಸಾಧನೆಯನ್ನು ಈಗಾಗಲೇ ಹಲವರಿಗೆ ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಆಗಾಗ್ಗೆ ಬಲಗೈ ಆಫ್‌ ಸ್ಪಿನ್‌ ಅನ್ನೂ ಮಾಡುತ್ತಾರೆ. 

ಇದನ್ನೂ ಓದಿ: ಕರ್ನಾಟಕ ಅಂಡರ್‌-14 ತಂಡಕ್ಕೆ ದ್ರಾವಿಡ್‌ ಪುತ್ರ

Cricheroes ಎಂಬ ವೆಬ್‌ಸೈಟ್‌ನಲ್ಲಿರುವ ಹಾಗೆ, ಅನ್ವಯ್‌ ದ್ರಾವಿಡ್‌, ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆಯ ಪರವಾಗಿ ಆಡುತ್ತಿದ್ದರು. 2019 ರಲ್ಲಿ ಅಂದರೆ, ಅಂಡರ್‌ - 12 ಟೂರ್ನಮೆಂಟ್‌ನಲ್ಲೇ ಅನ್ವಯ್‌ ದ್ರಾವಿಡ್‌, 3 ಇನ್ನಿಂಗ್ಸ್‌ಗೆ 118 ರನ್‌ ಸಿಡಿಸಿದ್ದರು. ಈ ಪೈಕಿ 110 ರನ್‌ ಅವರ ಅತಿ ಹೆಚ್ಚು ಸ್ಕೋರ್. ಇನ್ನು, ನಾಯಕನ ಸ್ಥಾನ ನೀಡುತ್ತಿದ್ದಂತೆ, ಹಲವರು ಸ್ವಜನಪಕ್ಷಪಾತ ಎಂದು ಟೀಕೆ ಮಾಡಿದ್ದಾರೆಯೇ ಹೊರತು, ಅವರನ್ನು ನಾಯಕನಾಗಿ ಆಯ್ಕೆ ಮಾಡಿರುವ ಹಿಂದಿನ ಕಾರಣವನ್ನು ಬಹುತೇಕರು ಗುರುತಿಸಿಲ್ಲ. 

ಅನ್ವಯ್‌ ದ್ರಾವಿಡ್‌ ಆಯ್ಕೆಗೆ ಹೆಚ್ಚು ಟೀಕೆ ಕೇಳಿಬರುತ್ತಿರುವಂತೆ, ಇದರಿಂದ ಸಿಟ್ಟಿಗೆದ್ದ ಭಾರತೀಯ ಕ್ರಿಕೆಟ್‌ ತಂಡದ ಹಾಗೂ ಕರ್ನಾಟಕದ ಮಾಜಿ ಬೌಲರ್‌ ದೊಡ್ಡ ಗಣೇಶ್‌ ಟ್ರೋಲ್‌ ಮಾಡುವವರ ವಿರುದ್ಧ ಟ್ವೀಟ್‌ ಮಾಡಿದ್ದಾರೆ. ಮೆರಿಟ್‌ ಆಧಾರದ ಮೇಲೆ ಅಂಡರ್ - 14 ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಜೂನಿಯರ್‌ ಮಟ್ಟದಲ್ಲಿ ಅವರ ಸಾಮರ್ಥ್ಯ ಈಗಾಗಲೇ ಸಾಬೀತಾಗಿದ್ದು, ನಿರಂತರವಾಗಿ ಉತ್ತಮ ಆಟವಾಡಿದ್ದಾರೆ ಎಂದು ದೊಡ್ಡ ಗಣೇಶ್‌ ಟ್ವೀಟ್‌ ಮಾಡಿದ್ದಾರೆ. 

ಇದನ್ನು ಓದಿ: ಭರ್ಜರಿ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

ಅಲ್ಲದೆ, ವೃತ್ತಿಪರ ಕ್ರಿಕೆಟ್‌ನಲ್ಲಿ ಸ್ವಜನಪಕ್ಷಪಾತಕ್ಕೆ ಅವಕಾಶವೇ ಇಲ್ಲ. ಉತ್ತಮ ಆಟಗಾರನ ಮಗ ಎಂಬ ಕಾರಣಕ್ಕೆ ಯಾರೂ ಆಯ್ಕೆಯಾಗಲ್ಲ. ಟ್ರೋಲ್‌ಗಳನ್ನು ಮಾಡಲು ಸಮಯ ಹಾಳು ಮಾಡುವ ಬದಲು ಆಟಗಾರನ ಸಾಧನೆಯನ್ನು ತಿಳಿದುಕೊಳ್ಳಿ ಎಂದು ಟ್ರೋಲಿಗರ ವಿರುದ್ಧ ದೊಡ್ಡ ಗಣೇಶ್‌ ಟೀಕೆ ಮಾಡಿದ್ದಾರೆ. ಅನ್ವಯ್‌ U-14 ಸ್ಟೇಟ್ ಪ್ರಾಬಬಲ್ಸ್ ಟೂರ್ನಮೆಂಟ್‌ನಲ್ಲಿ ಕೇವಲ ಮೂರು ಇನ್ನಿಂಗ್ಸ್‌ಗಳಲ್ಲಿ 207 ರನ್ ಗಳಿಸಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದರು ಎಂದು ವರದಿಯಾಗಿದೆ. 

Follow Us:
Download App:
  • android
  • ios